ಸಾರಾಂಶ
ಭಾರತೀಯ ಸೇನೆಯು ಆಕ್ರಮಣಕಾರಿ ಪಾಕ್ ಸೇನೆಯನ್ನು ಮಾತೃಭೂಮಿಯಿಂದ ಹೊಡೆದಟ್ಟಿ ಕಾರ್ಗಿಲ್ ಪ್ರದೇಶದಲ್ಲಿ ವಿಜಯಧ್ವಜ ಹಾರಿಸಿ ಸಂಭ್ರಮಿಸಿದ ಕಾರ್ಗಿಲ್ ಯುದ್ಧದ ಗೆಲುವಿಗೆ ಈಗ ರಜತ ವರ್ಷದ ಸಂಭ್ರಮ. ೧೯೯೯ರ ಜುಲೈ ೨೬ರಂದು ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿ ಸಾಮರ್ಥ್ಯ ಮೆರೆದಿದ್ದ ಭಾರತೀಯ ಸೇನೆಯ ಅಭೂತಪೂರ್ವ ವಿಜಯೋತ್ಸವ ಇದಾಗಿದೆ ಎಂದು ಹಿಂದು ಸಂಘಟನೆ ಮುಖಂಡ ಶಿವಾನಂದ ಗಾಯಕವಾಡ ಹೇಳಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಭಾರತೀಯ ಸೇನೆಯು ಆಕ್ರಮಣಕಾರಿ ಪಾಕ್ ಸೇನೆಯನ್ನು ಮಾತೃಭೂಮಿಯಿಂದ ಹೊಡೆದಟ್ಟಿ ಕಾರ್ಗಿಲ್ ಪ್ರದೇಶದಲ್ಲಿ ವಿಜಯಧ್ವಜ ಹಾರಿಸಿ ಸಂಭ್ರಮಿಸಿದ ಕಾರ್ಗಿಲ್ ಯುದ್ಧದ ಗೆಲುವಿಗೆ ಈಗ ರಜತ ವರ್ಷದ ಸಂಭ್ರಮ. ೧೯೯೯ರ ಜುಲೈ ೨೬ರಂದು ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿ ಸಾಮರ್ಥ್ಯ ಮೆರೆದಿದ್ದ ಭಾರತೀಯ ಸೇನೆಯ ಅಭೂತಪೂರ್ವ ವಿಜಯೋತ್ಸವ ಇದಾಗಿದೆ ಎಂದು ಹಿಂದು ಸಂಘಟನೆ ಮುಖಂಡ ಶಿವಾನಂದ ಗಾಯಕವಾಡ ಹೇಳಿದರು.ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವದ ರಜತ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಯುದ್ಧದಲ್ಲಿ ವೀರ ಮರಣವನ್ನಪ್ಪಿದ ವೀರಯೋಧರಲ್ಲಿ ಅನೇಕ ಜನ ವೀರಯೋಧರ ಛಲವನ್ನು ಹೋರಾಟವನ್ನು ಹಾಗೂ ಅವರ ವೀರ ಮರಣವನ್ನು ಕುರಿತು ವಿವರವಾಗಿ ಮಾತನಾಡಿದರು.
ಯೋಗ ಶಿಕ್ಷಕ ಆನಂದ ಬಂಗೇನವರ ಮಾತನಾಡಿ, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ನಡೆದ ಅನೇಕ ಅವಘಡಗಳನ್ನು ಹಾಗೂ ಹೋರಾಟದ ರೂಪರೇಶಿಗಳನ್ನು ಹಾಗೂ ಅದರ ಛಾಯಾಚಿತ್ರಗಳನ್ನು ಪ್ರಾಜೆಕ್ಟ್ ಮೂಲಕವಾಗಿ ತೋರಿಸಿ ಮಕ್ಕಳಿಗೆ ಮನವರಿಕೆ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಡಾ.ಚೇತನ್ ಡಾಗಾ ಮಾತನಾಡಿ, ನಮ್ಮ ಯೋಧರು ನಮ್ಮ ದೇಶವನ್ನು ನಮ್ಮನ್ನು ರಕ್ಷಿಸುತ್ತಿದ್ದಾರೆ. ಅವರಿಗೆ ನಾವೆಲ್ಲರೂ ಅತ್ಯಂತ ಗೌರವದಿಂದ ಕಾಣಬೇಕು. ಕಾರ್ಗಿಲ್ ಯುದ್ಧದಲ್ಲಿ ವೀರೋಚಿತವಾಗಿ ಹೋರಾಡಿ ದೇಶದ ಗೌರವ ಉಳಿಸಲು ತಮ್ಮ ದೇಹವನ್ನೇ ತ್ಯಾಗ ಮಾಡಿ ವೀರಮರಣ ಹೊಂದಿದ ಪ್ರತಿಯೊಬ್ಬ ಸೈನಿಕರಿಗೂ ನಮನಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಹಾಂತೇಶ ರೆಡ್ಡೆರಟ್ಟಿ, ಡಾ.ಮಹಾದೇವ ಪೋತರಾಜ, ಮಾರುತಿ ನಡಕಟ್ಟಿನ, ಮಧುಮತಿ ರಾಯನಗೌಡರು, ಅಂಜನಾ ರಾಠೋಡ, ಡಾ.ದೀಪಾ ಜಹಗೀರದಾರ, ಆರ್.ಡಿ. ಬೀಳಗಿ, ಎ.ಬಿ. ಹೊನವಾಡ, ಪ್ರಕಾಶ ಅಂಬಲಿ ಉಪಸ್ಥಿತರಿದ್ದರು. ಮುತ್ತವ್ವ ತಳವಾರ ಪ್ರಾರ್ಥಿಸಿದರು, ನಂದಿನಿ ತಳವಾರ ಸ್ವಾಗತಿಸಿದರು, ಸೋಮು ನಿಂಗನೂರ ವಂದಿಸಿದರು.