ರಾ.ಸಬ್‌ ಜೂನಿಯರ್‌ ದ.ವಲಯ ಹಾಕಿ ತಂಡಕ್ಕೆ ಕ್ರೀಡಾ ವಸತಿ ಶಾಲೆ ವಿದ್ಯಾರ್ಥಿಗಳು ಆಯ್ಕೆ

| Published : Jul 19 2024, 01:02 AM IST

ರಾ.ಸಬ್‌ ಜೂನಿಯರ್‌ ದ.ವಲಯ ಹಾಕಿ ತಂಡಕ್ಕೆ ಕ್ರೀಡಾ ವಸತಿ ಶಾಲೆ ವಿದ್ಯಾರ್ಥಿಗಳು ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪೊನ್ನಂಪೇಟೆ ಕ್ರೀಡಾ ವಸತಿ ಶಾಲೆಯ ವೈ.ಇ.ಎಸ್ ವಿಧ್ಯಾರ್ಥಿಗಳು ರಾಷ್ಟ್ರೀಯ ಸಬ್ ಜೂನಿಯರ್ ದಕ್ಷಿಣ ವಲಯ ಹಾಕಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಯ ಹಾಕಿ ತರಬೇತುದಾರರಾದ ಕುಪ್ಪಂಡ ಸುಬ್ಬಯ್ಯ, ಮುಕಳಮಾಡ ಗಣಪತಿ ಗರಡಿಯಲ್ಲಿ ಪಳಗಿದ ಸುಮಾರು ೧೨ ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಪೊನ್ನಂಪೇಟೆ ಕ್ರೀಡಾ ವಸತಿ ಶಾಲೆಯ ವೈ.ಇ.ಎಸ್ ವಿಧ್ಯಾರ್ಥಿಗಳು ರಾಷ್ಟ್ರೀಯ ಸಬ್ ಜೂನಿಯರ್ ದಕ್ಷಿಣ ವಲಯ ಹಾಕಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಶಾಲೆಯ ಹಾಕಿ ತರಬೇತುದಾರರಾದ ಕುಪ್ಪಂಡ ಸುಬ್ಬಯ್ಯ, ಮುಕಳಮಾಡ ಗಣಪತಿ ಗರಡಿಯಲ್ಲಿ ಪಳಗಿದ ಸುಮಾರು ೧೨ ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ.

ಕಳೆದ ವರ್ಷ ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ರಾಷ್ಟ್ರೀಯ ಹಾಕಿ ಪಂದ್ಯಾವಳಿಗೆ ಪೊನ್ನಂಪೇಟೆ ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಜ್ಯ, ರಾಷ್ಟ್ರ ಮಟ್ಟದ ಹಾಕಿ ಪಂದ್ಯಾಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿರುವುದು ಇಲ್ಲಿ ಸ್ಮರಿಸಬಹುದು. ಸತತವಾಗಿ ಮೂರು ವರ್ಷಗಳಿಂದ ವಸತಿ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಕ್ರೀಡಾ ವಸತಿ ಶಾಲೆಯ ಬಾಲಕರಾದ ವಿಭಾಗದಲ್ಲಿ ಮಂಡೇಪಂಡ ಕಾಳಪ್ಪ, ಮೋಹನ್ ಬಿ.ಪಿ. ನೆಲ್ಲಿರ ಆರ್ಯನ್ ಅಯ್ಯಪ್ಪ, ಚೆಪ್ಪುಡೀರ ಲೆನನ್ ಮಾದಪ್ಪ, ಶಶಿತ್ ಗೌಡ, ಮತ್ತು ಕೆ.ಪಿ. ಪೂವಣ್ಣ, ಬಾಲಕಿಯರ ವಿಭಾಗದಲ್ಲಿ ಕೀತಿಯಂಡ ಪೂರ್ವಿ ಪೂವಮ್ಮ, ಅಮ್ಮಣಿಚಂಡ ತಂಗಮ್ಮ, ಪೊರ್ಕೊವಂಡ ಗ್ರೀಷ್ಮ, ಅಲೆಮಾಡ ತ್ರೀಶಾ, ನಾಪನೆರವಂಡ ಸೀತಮ್ಮ, ಮನಸ್ವಿ ಬಿ.ಯು. ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಕೇರಳ ರಾಜ್ಯದ ಕೊಲ್ಲಂನಲ್ಲಿ ರಾಷ್ಟ್ರೀಯ ಸಬ್ ಜೂನಿಯರ್ ದಕ್ಷಿಣ ವಲಯ ೧೬ ವರ್ಷ ಒಳಗಿರುವ ಹಾಕಿ ಪಂದ್ಯ ನಡೆಯಲಿದೆ.

ಕ್ರೀಡಾ ವಸತಿ ಶಾಲೆಯ ಮೇಲ್ವಿಚಾರಕರಾದ ಪೆಮ್ಮಂಡ ದಿನೇಶ್ ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಪರಿಸರ ನಿರ್ಮಾಣ ಮಾಡಿಕೊಡುವಲ್ಲಿ ಸಹಕರಿಸುತ್ತಿದ್ದಾರೆ.