ಕನ್ನಡ ಸಾಹಿತ್ಯ ಸಮ್ಮೇಳನ ಅಥ೯ಪೂಣ೯ವಾಗಿ ಆಚರಿಸಿ

| Published : Sep 22 2024, 01:52 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಪಟ್ಟಣದ ವಿರಕ್ತಮಠದಲ್ಲಿ ಸೋಮವಾರ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ, ಸಿದ್ಧತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ, ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿತು. ಸಮ್ಮೇಳನವನ್ನು ತಾಲೂಕಿನ ಇವಣಗಿ ಗ್ರಾಮದಲ್ಲಿ ಆಯೋಜನೆ ಮಾಡುವ ಕುರಿತು ಚರ್ಚಿಸಲಾಯಿತು. ಈ ಕುರಿತು ಗ್ರಾಮದಲ್ಲಿ ಸೆ.26 ರಂದು ಮತ್ತೊಂದು ಸಭೆ ಮಾಡಲು ತೀರ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ವಿರಕ್ತಮಠದಲ್ಲಿ ಸೋಮವಾರ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ, ಸಿದ್ಧತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ, ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿತು. ಸಮ್ಮೇಳನವನ್ನು ತಾಲೂಕಿನ ಇವಣಗಿ ಗ್ರಾಮದಲ್ಲಿ ಆಯೋಜನೆ ಮಾಡುವ ಕುರಿತು ಚರ್ಚಿಸಲಾಯಿತು. ಈ ಕುರಿತು ಗ್ರಾಮದಲ್ಲಿ ಸೆ.26 ರಂದು ಮತ್ತೊಂದು ಸಭೆ ಮಾಡಲು ತೀರ್ಮಾನಿಸಲಾಯಿತು.

ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಕನ್ನಡ ನಾಡು-ನುಡಿ, ನೆಲ-ಜಲ, ಸಂಸ್ಕೃತಿ - ಪರಂಪರೆ ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ಸಾಗಬೇಕು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಬ.ಬಾಗೇವಾಡಿ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಥ೯ಪೂಣ೯ವಾಗಿ ಮಾಡಬೇಕು. ಬ.ಬಾಗೆವಾಡಿ ಐತಿಹಾಸಿಕ ಪಟ್ಟಣವಾಗಿದ್ದು ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿ ಎಂದು ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿದರು. ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಾನಂದ ಡೋಣೂರ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ಕಸಾಪ ಪದಾಧಿಕಾರಿಗಳಾದ ಬಸವರಾಜ ಸೋಮಪೂರ, ರಾಜು ಶಿವಣಗುತ್ತಿ, ಯಮನಪ್ಪ ಮಿಣಜಗಿ, ಕೋಟ್ರೇಶ ಹೆಗ್ಡಾಳ, ಬಸವರಾಜ ಮೇಟಿ, ಬಸವರಾಜ ಚಿಂಚೊಳ್ಳಿ, ಉಮೇಶ ಕವಲಗಿ, ಶರಣು ದಳವಾಯಿ ರಾಜು ಗಣಾಚಾರಿ, ನಾಗೇಶ ನಾಗೂರ, ಬಿ.ವಿ.ಚಕ್ರಮನಿ, ರವಿ ಬೈಚಬಾಳ, ಸಮೀರ ಸೈಯ್ಯದ, ಶಾಂತಾ ಪಾಟೀಲ, ಪ್ರಭಾಕರ ಖೇಡದ, ಸಿ.ಎಲ್.ಮುರಾಳ, ಎಸ್.ಕೆ.ಸೋಮನಕಟ್ಟಿ, ಪಿ.ಎಲ್.ಹಿರೇಮಠ, ಶಂಕರಗೌಡ ಚಿಕ್ಕೊಂಡ, ಬಸವರಾಜ ಹಾರಿವಾಳ, ಎಂ.ಎನ್.ಯಾಳವಾರ, ಸುಭಾಷ ಹಡಪದ, ರುದ್ರಗೌಡ ಬಿರಾದಾರ, ಶಿವಾನಂದ ಘಾಟಗೆ, ಶ್ರೀಶೈಲ ಸಿರಗುಪ್ಪಿ, ಅಶೋಕ ಗುಡದಿನ್ನಿ, ಬಿ.ವಿ.ಪಟ್ಟಣಶೆಟ್ಟಿ. ಎಸ್‌.ಎಲ್.ಓಂಕಾರ, ಚಂದ್ರು ಹದಿಮೂರ, ಎಚ್.ಬಿ.ಬಾರಿಕಾಯಿ ಇತರರು ಭಾಗವಹಿಸಿದ್ದರು.