ಸಂಭ್ರಮ -ಸಡಗರದಿಂದ ರಂಜಾನ್ ಆಚರಣೆ

| Published : Apr 12 2024, 01:03 AM IST

ಸಾರಾಂಶ

ಹಬ್ಬದಿನವಾದ ಗುರುವಾರ ಬೆಳಗ್ಗೆ ಯಿಂದಲೇ ಈದ್ಗಾ ಮೈದಾನದಲ್ಲಿ ಸೇರಿ ಸಾಂಪ್ರದಾಯಿಕ, ಸಾಮೂಹಿಕ ನಮಾಜ್ ಮಾಡುವ ಮೂಲಕ ಈದ್ ಆಚರಿಸಲಾಯಿತು.

ದೇವದುರ್ಗ/ಸಿರವಾರ:

ದೇವದುರ್ಗ ಮತ್ತು ಸಿರವಾರ ಪಟ್ಟಣ ಸೇರಿ ಉಭಯ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಈದ್ ಉಲ್ ಫಿತರ್‌ನ್ನು ಗುರುವಾರ ಸಡಗರ ಸಂಭ್ರಮದಿಂದ ಆಚರಿಸಿದರು.

ಒಂದು ತಿಂಗಳಿನಿಂದ ಉಪವಾಸ ದೊಂದಿಗೆ ಪ್ರತಿದಿನ ನಮಾಜ್ ಮಾಡಿಕೊಂಡು ದಾನ, ಧರ್ಮ, ಅನ್ನಸಂತರ್ಪಣೆ, ಸೇರಿ ವಿವಿಧ ಧಾರ್ಮಿಕ ಆಚರಣೆ ಮಾಡಿಕೊಂಡು ಹಬ್ಬದಿನವಾದ ಗುರುವಾರ ಬೆಳಗ್ಗೆ ಯಿಂದಲೇ ಈದ್ಗಾ ಮೈದಾನದಲ್ಲಿ ಸೇರಿ ಸಾಂಪ್ರದಾಯಿಕ, ಸಾಮೂಹಿಕ ನಮಾಜ್ ಮಾಡುವ ಮೂಲಕ ಈದ್ ಆಚರಿಸಲಾಯಿತು.

ಖಾಜಿ ಮಂಜೂರು ಪಾಷ, ಖಾಜಿ ನವಾಜ್ ಸಾಬ್ ನೇತೃತ್ವದಲ್ಲಿ ಈದ್ಗ್ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ನಂತರ ಪರಸ್ಪರ ಹಸ್ತಲಾಘವ ಮಾಡುತ್ತಾ, ಒಬ್ಬರಿಗೊಬ್ಬರು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಮುಸ್ಲಿಂ ಮುಖಂಡರು ಮತ್ತು ಯುವಕರು ತಮ್ಮ ಮನೆಗಳಲ್ಲಿ ಆತ್ಮೀಯರನ್ನು ಕರೆದು ಸಿಹಿಯಾದ ಸಿರ್ ಕುರ್ಮಾ ಹಾಗೂ ಭೋಜನ ನೀಡಿ ಹಬ್ಬ ಆಚರಿಸಿದರು. ಈ ವೇಳೆ ಪಟ್ಟಣದ ಹಿರಿಯರು, ಯುವಕರು, ಪ.ಪಂ.ಸದಸ್ಯರು, ವಿವಿಧ ಪಕ್ಷಗಳ ಮುಖಂಡರು ಮಕ್ಕಳು ಭಾಗವಹಿಸಿದ್ದರು.