ಬೆಂಗಳೂರಿನ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದಲ್ಲಿ ಆಶ್ರಮದ ನಿರ್ದೇಶಕ, ಯುವ ಉದ್ಯಮಿ ರಾಹುಲ್ ಚಂದ್ರಶೇಖರ್ ಅವರ ಜನ್ಮದಿನದ ಸಂದರ್ಭ ವಿಶ್ವ ಯುವ ದಿನಾಚರಣೆ, ಸ್ವಾಮೀ ವಿವೇಕಾನಂದರ ರಾಷ್ಟ್ರೀಯ ಯುವ ದಿನದ ಚಿಂತನಾ ಕಾರ್ಯಕ್ರಮ

ಮೂಲ್ಕಿ: ಯುವ ಜನತೆ ದೇಶದ ಭವಿಷ್ಯವಾಗಿದ್ದು ವೃತ್ತಿ, ಜೀವನ ಕೌಶಲ್ಯ, ಉದ್ಯಮ ಸಹಿತ ವಿವಿಧ ಕ್ಷೇತ್ರಗಳಲ್ಲಿ ಇರುವ ಅವಕಾಶ ಪಡೆದುಕೊಳ್ಳಬೇಕು ಎಂದು ಆಧ್ಯಾತ್ಮಿಕ ವಿಶ್ವಗುರು ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಬೆಂಗಳೂರಿನ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದಲ್ಲಿ ಆಶ್ರಮದ ನಿರ್ದೇಶಕ, ಯುವ ಉದ್ಯಮಿ ರಾಹುಲ್ ಚಂದ್ರಶೇಖರ್ ಅವರ ಜನ್ಮದಿನದ ಸಂದರ್ಭ ವಿಶ್ವ ಯುವ ದಿನಾಚರಣೆ, ಸ್ವಾಮೀ ವಿವೇಕಾನಂದರ ರಾಷ್ಟ್ರೀಯ ಯುವ ದಿನದ ಚಿಂತನಾ ಕಾರ್ಯಕ್ರಮದ ಅಂಗವಾಗಿ ಪ್ರಯುಕ್ತ ರಾಜ್ಯ ಸೇವಾ ಚಾರಿಟೇಬಲ್ ಟ್ರಸ್ಟ್ ನ ಮೂಲಕ ವಿವಿಧ ಸೇವಾ ಚಟುವಟಿಕೆಯನ್ನು ಸಮಾಜಕ್ಕೆ ಅರ್ಪಿಸುವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಜ.12ರಂದು ಸ್ವಾಮೀ ವಿವೇಕಾನಂದರ ಜನ್ಮ ದಿನಾಚರಣೆಯಾದರೆ, ಜ.11 ರಾಹುಲ್ ಚಂದ್ರಶೇಖರ್ ಅವರ ಹುಟ್ಟು ಹಬ್ಬದ ದಿನವಾಗಿದ್ದು ಈ ದಿನವನ್ನು ಯುವ ಸಮುದಾಯಕ್ಕೆ ಮೀಸಲಿಟ್ಟು, ಬೆಂಗಳೂರು ಹಾಗೂ ಮೂಲ್ಕಿಯಲ್ಲಿ ಯುವ ಜನರಿಗಾಗಿ ಚಿಂತನಾ ಮಂಥನ ಕಾರ್ಯಕ್ರಮ, ಸೇವಾ ಚಟುವಟಿಕೆಯಾಗಿ ಸರ್ಕಾರಿ ಶಾಲೆಗಳಿಗೆ ನೆರವು, ಆರ್ಥಿಕವಾಗಿ ಹಿಂದುಳಿದ ಹಿರಿಯರ ಆರೋಗ್ಯ ತಪಾಸಣೆ, ಯುವ ಸಾಧಕರಿಗೆ ಪುರಸ್ಕಾರ ಸಹಿತ ವಿವಿಧ ಕಾರ್ಯಕ್ರಮವನ್ನು ರಾಜ್ಯ ಸೇವಾ ಚಾರಿಟೇಬಲ್ ಟ್ರಸ್ಟ್ ನ ಮೂಲಕ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾಗಿ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಚಂದ್ರಧಾರಿ ಸಿಂಗ್ ಹಾಗೂ ಸೀಮಾ ಕೌಲ್ ಅವರು ಭಾಗವಹಿಸಿ, ರಾಹುಲ್ ಚಂದ್ರಶೇಖರ್ ಅವರನ್ನು ಆಶ್ರಮದ ಅಭಿಮಾನಿಗಳ ಪರವಾಗಿ ಸನ್ಮಾನಿಸಿದರು. ಸೇವಾಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ್, ನಿರ್ದೇಶಕರಾದ ರಾಘವ ಸೂರ್ಯ, ಕಾನೂನು ಸಲಹೆಗಾರರಾದ ರೋಶಿನಿ ರಾಘವ್ ಸೂರ್ಯ, ಆಶ್ರಮದ ಸಂಚಾಲಕರಾದ ಪುನೀತ್ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು. ಸೇವಾಶ್ರಮದ ವಕ್ತಾರ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು. ಉದ್ಯೋಗದಾತ ರಾಹುಲ್‌ಗೆ ಸನ್ಮಾನ

ಸಣ್ಣ ವಯಸ್ಸಿನಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದ ಆತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರ ಹಾಗೂ ಪ್ರಚಾರ ಮಾಧ್ಯಮ ಕ್ಷೇತ್ರದಲ್ಲಿ ಉದ್ಯಮವನ್ನು ಆರಂಭಿಸಿ, ಯಶಸ್ಸು ಗಳಿಸಿ ಹಲವಾರು ಪ್ರತಿಭಾವಂತ ಯುವಕರಿಗೆ ಉದ್ಯೋಗ ನೀಡಿ ಅನ್ನದಾತರಾಗಿದ್ದು ದುಡಿದ ಒಂದಂಶವನ್ನು ತಮ್ಮ ತಂದೆ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ ಹುಟ್ಟೂರಾದ ಮೂಲ್ಕಿಯಲ್ಲಿ ಮಕ್ಕಳ ಶಿಕ್ಷಣಕ್ಕೆ ಮುಡಿಪಾಗಿಟ್ಟು ಶೈಕ್ಷಣಿಕ ನೆರವಿನೊಂದಿಗೆ ಸಾಮಾಜಿಕ ಚಟುವಟಿಕೆಯನ್ನು ಸದ್ದಿಲ್ಲದೇ ನಡೆಸುತ್ತಿರುವ ಹಿನ್ನಲೆಯಲ್ಲಿ ಸಾಧಕ ಯುವ ಉದ್ಯಮಿ ರಾಹುಲ್ ಚಂದ್ರಶೇಖರ್ ಅವರನ್ನು ಅವರ ಅಭಿಮಾನಿಗಳು ಹಾಗೂ ಸೇವಾಶ್ರಮದ ಭಕ್ತರು ಸ್ವಾಮೀಜಿಯವರ ಸಮ್ಮುಖದಲ್ಲಿ ಸನ್ಮಾನಿಸಿದರು.