ಯುಗಪುರುಷ ಲಿಂ.ಶ್ರೀ ಕುಮಾರಸ್ವಾಮಿಗಳ 159ನೇ ಜಯಂತಿ, ಬಾಗಲಕೋಟೆಯ ಟೀಕಿನಮಠದ ಶತಾಯುಷಿ ಲಿಂ.ಮಲ್ಲಿಕಾರ್ಜುನ ಮಹಾಸ್ವಾಮಿಗಳ ರಜತ ಪುಣ್ಯಸ್ಮರಣೆ, ಲಿಂ.ಶ್ರೀ ರೇವಣಸಿದ್ದ ಮಹಾಸ್ವಾಮಿಗಳ ದಶಮ ಪುಣ್ಯಸ್ಮರಣೆ ಮತ್ತು ಮಲ್ಲಿಕಾರ್ಜುನ ದೇಶಿಕರ ನಿರಂಜನ ಪಟ್ಟಾಧಿಕಾರ ಸಮಾರಂಭವನ್ನು ಫೆ.6,7,8 ರಂದು ಒಟ್ಟಿಗೆ ಹಮ್ಮಿಕೊಳ್ಳಲಾಗಿದೆ ಎಂದು ಟೆಂಗಿನಮಠ-ಟೀಕಿಮಮಠದ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಯುಗಪುರುಷ ಲಿಂ.ಶ್ರೀ ಕುಮಾರಸ್ವಾಮಿಗಳ 159ನೇ ಜಯಂತಿ, ಬಾಗಲಕೋಟೆಯ ಟೀಕಿನಮಠದ ಶತಾಯುಷಿ ಲಿಂ.ಮಲ್ಲಿಕಾರ್ಜುನ ಮಹಾಸ್ವಾಮಿಗಳ ರಜತ ಪುಣ್ಯಸ್ಮರಣೆ, ಲಿಂ.ಶ್ರೀ ರೇವಣಸಿದ್ದ ಮಹಾಸ್ವಾಮಿಗಳ ದಶಮ ಪುಣ್ಯಸ್ಮರಣೆ ಮತ್ತು ಮಲ್ಲಿಕಾರ್ಜುನ ದೇಶಿಕರ ನಿರಂಜನ ಪಟ್ಟಾಧಿಕಾರ ಸಮಾರಂಭವನ್ನು ಫೆ.6,7,8 ರಂದು ಒಟ್ಟಿಗೆ ಹಮ್ಮಿಕೊಳ್ಳಲಾಗಿದೆ ಎಂದು ಟೆಂಗಿನಮಠ-ಟೀಕಿಮಮಠದ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ಟೀಕಿನಮಠದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.8 ರಂದು ನಿರಂಜನ ಪಟ್ಟಾಧಿಕಾರ ಕಾರ್ಯಕ್ರಮ ನೆರವೇರಿಸಲು ಗುರು-ಹಿರಿಯರು ನಿರ್ಧರಿಸಿದ್ದು, ಮಲ್ಲಿಕಾರ್ಜುನ ದೇಶಿಕರ ನಿರಂಜನ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಜ.16 ರಿಂದ ಫೆ.5 ರವರೆಗೆ 21 ದಿನಗಳ ಕಾಲ ಚರಂತಿಮಠದ ಶಿವಾನಂದ ಮಂಟಪದಲ್ಲಿ ಪ್ರತಿ ದಿನ ಸಂಜೆ 6.30ಕ್ಕೆ ಹಾನಗಲ್ಲ ಕುಮಾರಸ್ವಾಮಿಗಳವರ ಪುರಾಣ ಪ್ರವಚನ ಜರುಗಲಿದೆ. ಫೆ.6,7, 8 ರಂದು ಮಲ್ಲಿಕಾರ್ಜುನ ದೇವರ ನಿರಂಜನ ಪಟ್ಟಾಧಿಕಾರ ಮಹೋತ್ಸವ ಜರುಗಲಿದ್ದು, ಎಲ್ಲ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗುವ ನಿಮಿತ್ತ ಟೀಕಿನಮಠ ಮಲ್ಲಿಕಾರ್ಜುನ ದೇಶಿಕರ ನಿರಂಜನ ಪಟ್ಟಾಧಿಕಾರಿ ಮಹೋತ್ಸವ ಸಮಿತಿ ರಚಿಸಿಲಾಗಿದೆ. ಅದು ಗೌರವಾಧ್ಯಕ್ಷರಾಗಿ ಬಾಗಲಕೊಟೆ ಚರಂತಿಮಠ ಪ್ರಭುಸ್ವಾಮಿಗಳು, ಗೌರವ ಉಪಾಧ್ಯಕ್ಷರುಗಳಾಗಿ ಕೋಟೆಕಲ್ ಕಮತಗಿಯ ಹೊಳೆಹುಚ್ಚೇಶ್ವರಸ್ವಾಮಿಗಳು, ಅಮೀನಗಡದ ಶಂಕರರಾಜೇಂದ್ರಸ್ವಾಮಿಗಳು, ಗುಳೆದಗುಡ್ಡದ ಒಪ್ಪತ್ತೇಶ್ವರ ಸ್ವಾಮಿಗಳು, ಕೆರೂರಿನ ಡಾ.ಶಿವಕುಮಾರ ಶಿವಾಚಾರ್ಯಸ್ವಾಮಿಗಳು, ಬೀಳಗಿಯ ಗುರುಪಾದ ಶಿವಾಚಾರ್ಯಸ್ವಾಮಿಗಳು, ಗುಳೆದಗುಡ್ಡದ ಶ್ರೀ ನೀಲಕಂಠಶಿವಾಚಾರ್ಯ ಸ್ವಾಮಿಗಳು. ಇನ್ನು ಅಧ್ಯಕ್ಷರಾಗಿ ಲೋಕಸಭಾ ಸದಸ್ಯರಾದ ಪಿ.ಸಿ.ಗದ್ದಿಗೌಡರ, ಉಪಾಧ್ಯಕ್ಚರಾಗಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಸಚಿವ ಎಸ್.ಆರ್.ಪಾಟೀಲ, ಅಜಯಕುಮಾರ ಸರನಾಯಕ್, ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಸಮಿತಿಯ ಕಾರ್ಯಾಧ್ಯಕ್ಷರಾಗಿ ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಉಪಕಾರ್ಯಾಧ್ಯಕ್ಷರಾಗಿ ಮಹೇಶ ಅಥಣಿ, ಬಸವಪ್ರಭು ಸರನಾಡಗೌಡ, ಕೋಶಾಧ್ಯಕ್ಷರಾಗಿ ವಿಜಯಕುಮಾರ ಅಂಗಡಿ, ಪ್ರಧಾನ ಕಾರ್ಯದಶಿಗಳಾಗಿ ಅಭಾವೀಲಿಂ ಮಹಾಸಭಾ ಜಿಲ್ಲಾಧ್ಯಕ್ಷರಾದ ಜಿ.ಎನ್.ಪಾಟೀಲ, ಕಾರ್ಯದರ್ಶಿಗಳಾಗಿ ಚಂದ್ರಶೇಖರ ಶೆಟ್ಟರ, ಬಸವರಾಜ ಭಗವತಿ, ಎಸ್.ಪಾವಟರ, ಬಸವರಾಜ ಮುಕ್ಕುಪ್ಪಿ ಅವರನ್ನು ನೇಮಿಸಲಾಗಿದ್ದು, ಇನ್ನು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಅದರಲ್ಲಿ ಹಣಕಾಸು ಸಮಿತಿ-ವಿಜಯಕುಮಾರ ಅಂಗಡಿ, ದಾಸೋಹ ಸಮಿತಿ- ಕುಮಾರಸ್ವಾಮಿ ಹಿರೇಮಠ, ಪ್ರವಚನ ಸೇವಾ ಸಮಿತಿ- ಪ್ರಕಾಶ ರೇವಡಿಗಾರ, ಪ್ರಚಾರ ಸಮಿತಿ- ಮಹಾಂತೇಶ ಶೆಟ್ಟರ. ಪೂಜ್ಯಶ್ರೀಗಳ ವ್ಯವಸ್ಥಾಪಕ ಸಮಿತಿ- ಪ್ರಭಯ್ಯ ಸರಗಣಾಚಾರಿ, ಸಾಂಸ್ಕೃತಿಕ ಹಾಗೂ ಸ್ವಯಂ ಸೇವಾ ಸಮಿತಿ ಗುರುಬಸಯ್ಯ ಸೂಳಿಬಾವಿ, ವೇದಿಕೆ/ಅತಿಥಿ ಸತ್ಕಾರ ಸಮಿತಿ- ಅಶೋಕ ಸಜ್ಜನ, ಉತ್ಸವ (ಮೆರವಣಿಗೆ) ಸಮಿತಿ-ಮಲ್ಲಿಕಾರ್ಜುನ ಸಾಸನೂರ, ಮಹಿಳಾ ಸಮಿತಿ-ನಿರ್ಮಲಾ ಹಲಕುರ್ಕಿ ಈ ರೀತಿಯಾಗಿ 9 ಸಮಿತಿಗಳನ್ನು ರಚಿಸಲಾಗಿದೆ. ಪ್ರತಿ ಸಮಿತಿಯಲ್ಲಿ ಅನೇಕ ಸೇವಾಸಕ್ತರು ಸದಸ್ಯರುಗಳಾಗಿ ಸೇವಾನಿರತರಾಗಿರುತ್ತಾರೆ ಎಂದರು.ಇದೇ ದಿನಾಂಕ 16 ರಂದು ಶುಕ್ರವಾರ ನಡೆಯಲಿರುವ ಪುರಾಣ ಪ್ರವಚನದ ಪ್ರಾರಂಭೋತ್ಸವ ಜರುಗಲಿದ್ದು ಸಮಾರಂಭ ದಿವ್ಯಸಾನಿದ್ಯವನ್ನು ಚರಂತಿಮಠದ ಪ್ರಭುಸ್ವಾಮಿಗಳು ವಹಸಿಲಿದ್ದಾರೆ, ಶಿವಯೋಗಮಂದಿರದ ಉಪಾಧ್ಯಕ್ಷರು, ಹಾವೇರಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು ನೇತೃತ್ವ ವಹಿಸಿ ಪ್ರವಚನಕ್ಕೆ ಚಾಲನೆ ನೀಡುವರು, 21ದಿನಗಳ ಕಾಲ ಹಾವೇರಿಯ ಅಕ್ಕಿಮಠದ ಗುರುಲಿಂಗಮಹಾಸ್ವಾಮಿಗಳು ಪ್ರವಚನ ನೀಡಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮತಿಯ ಕಾರ್ಯಾದ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರು ವಹಿಸಲಿದ್ದು, ಇದೇ ಸಂದರ್ಭದಲ್ಲಿ ಅಮೀನಗಡದ ಸಾಹಿತಿ ಲೇಖಕರಾದ ಎಚ್.ಬಿ.ರಂಗಾಪುರ ಇವರು ರಚನೆಯ ಬಾಗಲಕೋಟೆಯ ಟೀಕಿನಮಠ-ಟೆಂಗಿನಮಠ ಪರಂಪರೆ ಎಂಬ ನೂತನ ಕೃತಿಯನ್ನು ಗುಳೆದಗುಡ್ಡದ ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು ಬಿಡುಗಡೆಗೊಳಿಸಲಿದ್ದಾರೆ, ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಆರ್.ಮೂಗನೂರಮಠ ಕೃತಿ ಪರಿಚಯ ಮಾಡಲಿದ್ದಾರೆ, ಗ್ರಂಥದಾನಿಗಳಾದ ಶ್ರೀಮತಿ ಪಾರ್ವತಮ್ಮ ಬಳೂಲಮಠ, ಶಶಿಕಲಾ ಬಳೂಲಮಠ, ಲೇಖಕ ಎಚ.ಟಿ.ರಂಗಾಪುರ ಇವರು ಉಪಸ್ಥಿತರಿರುತ್ತಾರೆ. 21 ದಿನಗಳ ಪ್ರವಚನ ಸಂದರ್ಭದಲ್ಲಿ ಎರಕಿಹಾಳದ ದೇವರಾಜ ಗವಾಯಿಗಳು ಹಾರ್ಮೋನಿಯಮ್ ಹಾಗೂ ಗಾಯನ ಮತ್ತು ಕೊಡೆಕಲ್ ನ ಸುರೇಶಕುಮಾರ ಹುಗಾರ ತಬಲಾ ಸಾಥ ನೀಡಲಿದ್ದಾರೆ. ಪ್ರಭಾತ ಸಂಚಲನ: ಪೂಜ್ಯ ಸಾಮಿಗಳ ನೇತೃತ್ವದಲ್ಲಿ ಹಿರಯರು-ಕಿರಿಯರು ಒಡಗೂಡಿ ಜ.16 ರಿಂದ ಫೆ.5 ರವರೆಗೆ ದಿನಾಲೂ ಪ್ರಾತಃಕಾಲ 6.30 ರಿಂದ 8 ಗಂಟೆಯವರೆಗೆ ಪ್ರಭಾತ ಸಂಚಲನ ಜರುಗಲಿದೆ. 7 ದಿನ ಬಾಗಲಕೋಟೆಯ ಹಳೆ ಪ್ರದೇಶಗಳಲ್ಲಿ, 7 ದಿನ ವಿದ್ಯಾಗಿರಿ ಹಾಗೂ ಇನ್ನು 7 ದಿನ ನವನಗರ ಪ್ರದೇಶಗಳಲ್ಲಿ ಪ್ರಭಾತ ಸಂಚಲನ ಜರುಗಲಿದೆ. ಈ ಎಲ್ಲ ಕಾರ್ಯಕ್ರಮದಲ್ಲಿ ಎಲ್ಲರು ತಮ್ಮ ತನುಮನದಿಂದ ಭಾಗವಹಿಸಿ ಯಶಸ್ವಿಗೊಳಿಸುವಂತೆ ವಿನಂತಿಸಿದರು.ಗೋಷ್ಠಿಯಲ್ಲಿ ಕೋಟೆಕಲ್-ಕಮತಗಿಯ ಹೊಳೆ ಹುಚ್ಚೆಶ್ವರಸ್ವಾಮಿಗಳು, ಗುಳೇದಗುಡ್ಡದ ಅಭಿನವ ಒಪ್ಪತ್ತೇಶ್ವರಸ್ವಾಮಿಗಳು. ಬೆಳಗಾವಿ ಕಾರಂಜಿಮಠದ ಶಿವಯೋಗಿದೇವರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಜಿ.ಎನ್.ಪಾಟೀಲ, ಸಂಘದ ಗೌರವ ಕಾರ್ಯಧರ್ಶಿ ಮಹೇಶ ಅಥಣಿ ಇದ್ದರು.