ದೊಡ್ಡಬಳ್ಳಾಪುರ: ಬಾ ಲ್ಯ ವಿವಾಹ ಮಕ್ಕಳ ಭವಿಷ್ಯವನ್ನು ಹಾಳುಮಾಡುವ ಒಂದು ಸಾಮಾಜಿಕ ಪಿಡುಗು. ಭಾರತದಲ್ಲಿ ಬಾಲ್ಯ ವಿವಾಹವು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣೆ ಸಮಾಜ ಕಾರ್ಯಕರ್ತೆ ಅನಿತಾಲಕ್ಷ್ಮಿ ತಿಳಿಸಿದರು.
ಇಲ್ಲಿನ ಕೊಂಗಾಡಿಯಪ್ಪ ಪದವಿಪೂರ್ವ ಕಾಲೇಜಿನಲ್ಲಿ ಪ್ಯೂಚರ್ ವಿಜನ್ ಫೌಂಡೇಶನ್ ಸೊಸೈಟಿ ವತಿಯಿಂದ ಪೋಕ್ಸೋ ಕಾಯಿದೆ, ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ದತಿ ಕುರಿತು ವಿದ್ಯಾರ್ಥಿಗಳಿಗೆ ಅರಿವು ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಬಾಲ್ಯವಿವಾಹ ನಿಯಂತ್ರಣಕ್ಕೆ ಕಾನೂನು ಜಾರಿಯಲಿದೆ. ಬಾಲ್ಯ ವಿವಾಹ ಮಾಡಿಸುವ, ನಡೆಸಿಕೊಡುವ ಅಥವಾ ಪ್ರೋತ್ಸಾಹಿಸುವ ಪೋಷಕರು ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತಿದೆ. ಮಗುವಿನ ಉಜ್ವಲ ಭವಿಷ್ಯ ಮತ್ತು ದೇಶದ ಪ್ರಗತಿಗೆ ಅತ್ಯಂತ ಅವಶ್ಯಕವಾಗಿದೆ. ಸುರಕ್ಷಿತ ಮತ್ತು ಪ್ರೀತಿಯ ವಾತಾವರಣದಲ್ಲಿ ಬೆಳೆಯುವ ಹಕ್ಕಿದೆ. ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು ಶಿಕ್ಷಾರ್ಹ ಎಂದರು.
ಪೋಕ್ಸೋ ಕಾಯಿದೆ ಕುರಿತು ಪ್ಯೂಚರ್ ವಿಜನ್ ಫೌಂಡೇಶನ್ ಸೊಸೈಟಿಯ ಕಾನೂನು ಸಲಹೆಗಾರ ಮಧುಸೂದನ್ ಮಾತನಾಡಿ, ಪೋಕ್ಸೊ ಕಾಯ್ದೆಯು ''''''''ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ಒದಗಿಸುವ ಕಾಯ್ದೆಯಾಗಿದೆ. ಮಗುವಿನ ಮೇಲೆ ದೌರ್ಜನ್ಯ ನಡೆದಿದೆ ಎಂದು ಗೊತ್ತಿದ್ದರೂ ಪೊಲೀಸರಿಗೆ ಮಾಹಿತಿ ನೀಡದ ಶಿಕ್ಷಕರು, ವೈದ್ಯರು ಅಥವಾ ಇತರ ಸಂಸ್ಥೆಗಳ ಮೇಲೂ ಸಹ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದರು.ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ಕಾಲೇಜಿನ ಪ್ರಾಂಶುಪಾಲ ಎನ್.ಶ್ರೀನಿವಾಸ್, ಪ್ಯೂಚರ್ ವಿಜನ್ ಅಧ್ಯಕ್ಷ ಜಿ.ಎನ್. ಸುನೀಲ್ ಕುಮಾರ್, ವಿಕಾಸ್, ಮೂರ್ತಿ ಮತ್ತಿತರರು ಭಾಗವಹಿಸಿದ್ದರು.
8ಕೆಡಿಬಿಪಿ3- ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಪೋಕ್ಸೋ ಕಾಯ್ದೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ ನಡೆಯಿತು.