ಸಾರಾಂಶ
ನಿಲಯದಲ್ಲಿ ವಾರ್ಡನ್ ಹಾಗೂ ತಾಲೂಕು ಮಟ್ಟದಲ್ಲಿ ಸಮಾಜ ಕಲ್ಯಾಣಾಧಿಕಾರಿಗಳ ಅಕ್ರಮಗಳ ವಿರುದ್ಧ ಜಿಲ್ಲಾ ಮೇಲಾಧಿಕಾರಿಗಳಿಗೆ ದೂರು ಕೊಟ್ಟರೂ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿಯನ್ನು ಹಾಗೂ ಮೇಲ್ವಿಚಾರಕರು ಕೂಡಲೇ ಅವರನ್ನು ಅಮಾನತು ಮಾಡಬೇಕು.
ಕನ್ನಡಪ್ರಭ ವಾರ್ತೆ ಚೇಳೂರು ತಾಲೂಕಿನ ಚೀಲಕಲನೇರ್ಪು ಗ್ರಾಮದ ದೇವರಾಜು ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಮುಂದೆ ಸೋಮವಾರ ಕ.ದ.ಸಂ.ಸ ಮುಖಂಡರು ಧರಣಿ ನಡೆಸಿ, ನಿಲಯದ ಮಕ್ಕಳಿಗೆ ಊಟ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು.
ಕ.ದ.ಸಂ.ಸ. ರಾಜ್ಯ ಸಂಚಾಲಕ ಕೋಡಿಗಲ್ ರಮೇಶ್ ಮಾತನಾಡಿ. ಚೀಲಕಲನೇರ್ಪು ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗೆ ಶನಿವಾರ, ಭಾನುವಾರ.ಮತ್ತು ಸೋಮವಾರ ಸತತ ಮೂರು ದಿನಗಳಿಂದ ಊಟ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ನಿಲಯದಲ್ಲಿ ಇದ್ದ ಮಕ್ಕಳು ಹೋಟೆಲ್ ನಲ್ಲಿ ಊಟ ಮಾಡಿ ನಿಲಯದಲ್ಲಿ ಉಳಿದುಕೊಂಡಿದ್ದಾರೆ. ಹಣ ವಿಲ್ಲದ ಮಕ್ಕಳು ಹಾಸ್ಟೆಲ್ ಬಿಟ್ಟು ಮನೆಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ತಪ್ಪಿತಸ್ಥರನ್ನು ಅಮಾನತು ಮಾಡಿ
ಇದಕ್ಕೆ ಕಾರಣರಾದ ಮೇಲ್ವಿಚಾರಕರು ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿಯನ್ನು ಹಾಗೂ ಮೇಲ್ವಿಚಾರಕರು ಕೂಡಲೇ ಅವರನ್ನು ಅಮಾನತು ಮಾಡಬೇಕು. ನಿಲಯದಲ್ಲಿ ವಾರ್ಡನ್ ಹಾಗೂ ತಾಲೂಕು ಮಟ್ಟದಲ್ಲಿ ಸಮಾಜ ಕಲ್ಯಾಣಾಧಿಕಾರಿಗಳ ಅಕ್ರಮಗಳ ವಿರುದ್ಧ ಜಿಲ್ಲಾ ಮೇಲಾಧಿಕಾರಿಗಳಿಗೆ ದೂರು ಕೊಟ್ಟರೂ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ನಿಲಯದ ವಿದ್ಯಾರ್ಥಿಗಳಿಗೆ ಸರ್ಕಾರದ ನಿಯಮದಡಿ ಊಟದ ಮೆನು ಚಾರ್ಟ್ ಪ್ರಕಾರ ಊಟ ಕೊಡುತ್ತಿಲ್ಲ,ಹಾಗೂ ಮೊಟ್ಟೆ ಹಾಗೂ ಬಾಳೆಹಣ್ಣು ಕೂಡ ಕೊಡುತ್ತಿಲ್ಲ,ಕುಡಿಯಲು ನೀರು ಸಹ ಇಲ್ಲದೆ ಪ್ರತಿ ದಿನ ಮಹಿಳಾ ಅಡುಗೆ ಸಹಯಕಿಯರು ಕ್ಯಾನ್ ನಲ್ಲಿ ನೀರು ಹೋತ್ತುಕೋಂಡು ತರುವ ದುಸ್ತಿತಿ ಎದುರಾಗಿದೆ. ಪ್ರತಿಭಟನೆ ನಡೆಸುವ ಎಚ್ಚರಿಕೆ
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ಬೇಟಿ ಕೊಟ್ಟು ಪ್ರತಿಭಟನಾ ಕಾರರಿಂದ ಮನವಿ ಪತ್ರ ಪಡೆದರು ಈ ವೇಳೆ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರುಕ್ರಮ ಕೈಗೊಳ್ಳುವ ಭರವಸೆ
ಈ ವೇಳೆ ಪತ್ರಿಕೆಗೆ ಪತಿಕ್ರಿಯಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು ನಿಲಯದಲ್ಲಿ ಮೂರು ದಿನಗಳಿಂದ ಮಕ್ಕಳಿಗೆ ಊಟ ಮಾಡದೇ ಇರುವಂತಹ ಅಡುಗೆಯವರ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ವೇಳೆ ಕ.ದ.ಸಂ.ಸ.ಮುಖಂಡರಾದ ಗಿನ್ನಿ ಶ್ರೀನಿವಾಸ್.ಪಾಳ್ಯಕೆರೆ ಬಾಬು.ಟೈಲರ್ ರಾಮಚಂದ್ರ.ಅಂಜಿ.ಹರೀಶ್.ರಾಮಾಂಜಿ.ಮಂಜುನಾಥ.ಅಂಗಡಿ ರಾಮಾಂಜಿ.ದ್ವಾರಪ್ಪಲ್ಲಿ ಆನಂದ್ ಸೇರಿದಂತೆ ದಲಿತ ಮುಖಂಡರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))