ರಾಜ್ಯಮಟ್ಟದ ಹೋರಾಟಕ್ಕೆ ಶಿಕ್ಷಕರು ಸಜ್ಜು

| Published : Aug 07 2024, 01:06 AM IST

ರಾಜ್ಯಮಟ್ಟದ ಹೋರಾಟಕ್ಕೆ ಶಿಕ್ಷಕರು ಸಜ್ಜು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಪ್ರಾಥಮಿಕ ಶಾಲಾ ಶಿಕ್ಷಕರಿಗಾದ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ಆ.12 ರಂದು ಬೆಂಗಳೂರಿನ ಫ್ರೀಡ್ಂ ಪಾರ್ಕ್‌ನಲ್ಲಿ ರಾಜ್ಯಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಜ್ಯಮಟ್ಟದ ಬೃಹತ್ ಹೋರಾಟದ ಭಾಗವಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಿಕೋಟಾ, ವಿಜಯಪುರ ಗ್ರಾಮೀಣ ವಲಯ ಹಾಗೂ ನಗರ ಘಟಕಗಳಿಂದ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಿಕೋಟಾ ಹಾಗೂ ವಿಜಯಪುರ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರಾಥಮಿಕ ಶಾಲಾ ಶಿಕ್ಷಕರಿಗಾದ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ಆ.12 ರಂದು ಬೆಂಗಳೂರಿನ ಫ್ರೀಡ್ಂ ಪಾರ್ಕ್‌ನಲ್ಲಿ ರಾಜ್ಯಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಜ್ಯಮಟ್ಟದ ಬೃಹತ್ ಹೋರಾಟದ ಭಾಗವಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಿಕೋಟಾ, ವಿಜಯಪುರ ಗ್ರಾಮೀಣ ವಲಯ ಹಾಗೂ ನಗರ ಘಟಕಗಳಿಂದ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಿಕೋಟಾ ಹಾಗೂ ವಿಜಯಪುರ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರ್ಜುನ ಲಮಾಣಿ ಮಾತನಾಡಿ, 2017ರ ವೃಂದ ಮತ್ತು ನೇಮಕಾತಿ ನಿಯಮಗಳು 2016ಕ್ಕಿಂತ ಮುಂಚೆ ನೇಮಕವಾದ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ ಎಂದು ಕಾರ್ಯಾದೇಶ ಹೊರಡಿಸಿದ್ದು, ಮೂಲತಃ 1 ರಿಂದ 7-8ಕ್ಕೆ ನೇಮಕವಾದವರನ್ನು ಪಿಎಸ್‌ಟಿ ಎಂದು ಪದನಾಮ ಮಾಡಿ 1 ರಿಂದ 5ಕ್ಕೆ ಹಿಂಬಡ್ತಿ ನೀಡಿದ್ದನ್ನು ಹಿಂಪಡೆಯಬೇಕು. 2016 ಕ್ಕಿಂತ ಮುಂಚೆ ನೇಮಕ ಹೊಂದಿದ ಎನ್‌ಸಿಟಿ ನಿಯಮಾವಳಿ ಪ್ರಕಾರ ಪದವಿ ವಿದ್ಯಾರ್ಹತೆ ಹೊಂದಿದ ಎಲ್ಲ ಸೇವಾನಿರತ ಶಿಕ್ಷಕರನ್ನು ಜಿಪಿಟಿ ಶಿಕ್ಷಕರೆಂದು ಸೇವಾಜೇಷ್ಠತೆಯೊಂದಿಗೆ ಪುನರ್ ಪದನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.ಸಂಘದ ಪದಾಧಿಕಾರಿ ಹಣಮಂತ ಕೊಣದಿ ಮಾತನಾಡಿ, ಮೊದಲಿನ ಪ್ರೌಢಶಾಲಾ ಬಡ್ತಿ ನಿಯಮಾವಳಿಯಂತೆ 2016ರ ಮುಂಚೆ ನೇಮಕಾತಿ ಹೊಂದಿದ ಹಾಗೂ ಬಿಎಡ್ ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರು ಖಾಲಿಯಾಗುವವರೆಗೂ ಪ್ರೌಢಶಾಲೆಗೆ ಬಡ್ತಿ ನೀಡಬೇಕು. ನಂತರ ಹೊಸದಾಗಿ ನೇಮಕಗೊಂಡ ಜಿಪಿಟಿ ಶಿಕ್ಷಕರನ್ನು ಪರಿಗಣಿಸಬೇಕು. ಈ ಮುಂಚಿನ ನಿಯಮಾವಳಿಯಂತೆ ಮುಖ್ಯ ಶಿಕ್ಷಕರ ಹುದ್ದೆಗೆ ವಿದ್ಯಾರ್ಹತೆ ಪರಿಗಣಿಸದೇ ಅಖಂಡ ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿ ನೀಡಬೇಕು ಎಂದರು.

ಈ ವೇಳೆ ಪುಷ್ಪಾ ಗಚ್ಚಿನಮಠ, ಸಿ.ಟಿ.ಜತ್ತಿ, ಅಶೋಕ ಚನಬಸಗೋಳ, ಎ.ಬಿ.ಧಡಕೆ, ಅಶೋಕ ಭಜಂತ್ರಿ, ಬಿ.ಎಸ್.ಮಠ, ಝಡ್.ಐ.ಇಂಡಿಕರ, ವೀರಭದ್ರಪ್ಪ, ಅಶೋಕ ಬೂದಿಹಾಳ, ಎಂ.ಎಸ್.ಟಕ್ಕಳಕಿ, ಸಾಬು ಗಗನಮಾಲಿ, ಪ್ರವೀಣ ಪತ್ತಾರ, ವಿಜಯಕುಮಾರ ದೇಸಾಯಿ, ಎಸ್.ಎನ್.ಬಾಗಲಕೋಟ, ಶ್ರೀಮಂತ ಡೋಣಿ, ಆರ್.ಎಸ್.ಮಸಳಿ, ಬಸವರಾಜ ಬೇನೂರ, ಬಿ.ಎಸ್.ಕಪಲೆ, ಭಾರತಿ ಉಪಾಸೆ, ಬಸವರಾಜ ಉಪ್ಪಾರ, ಎಸ್.ಬಿ.ಚಲವಾದಿ, ಬಸವರಾಜ ವಡವಡಗಿ ಉಪಸ್ಥಿತರಿದ್ದರು.