ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ರಾಜ್ಯ ಹೆದ್ದಾರಿಯ ರಸ್ತೆ ಸುರಕ್ಷತಾ ದೃಷ್ಟಿಯಿಂದ ಎಲ್ಲಿ ಜನದಟ್ಟಣೆ ಹೆಚ್ಚಾಗಿರುವ ಗ್ರಾಮದಲ್ಲಿ ರಸ್ತೆಗಳ ವಿಸ್ತೀರ್ಣ ಮತ್ತು ವೃತ್ತಗಳ ಅಭಿವೃದ್ಧಿ ಸೇರಿದಂತೆ ಒಟ್ಟು ೬.೨೯ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಚಾಲನೆ ನೀಡಿದರು.ತಾಲೂಕಿನ ಬಟ್ಲಹಳ್ಳಿ ಸಿದ್ದೇಪಲ್ಲಿ, ಬಟ್ಲಹಳ್ಳಿ, ಅಂಕಾಲಮಡಗು ರಸ್ತೆಯ ಬಟ್ಲಹಳ್ಳಿ ಗ್ರಾಮದ ಪರಿಮಿತಿಯಲ್ಲಿ ೪ ಪಥದ ರಸ್ತೆ ಸುರಕ್ಷತಾ ಅಭಿವೃದ್ಧಿ ಕಾಮಗಾರಿ ೬.೨೯ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ವೇದಿಕೆ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
ರಸ್ತೆಗಳ ಮೇಲ್ದರ್ಜೆಗೇರಿಸಲು ಕ್ರಮಬಟ್ಲಹಳ್ಳಿ ವ್ಯಾಪ್ತಿಯಲ್ಲಿ ಹಾದು ಹೋಗುವ ಹೆದ್ದಾರಿಯ ರಸ್ತೆ ಸುರಕ್ಷತೆಯ ದೃಷ್ಟಿಯಿಂದ ೨ ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಕಾಮಗಾರಿ, ಬೋಡಂಪಲ್ಲಿ ಮಾರ್ಗವಾಗಿ ಕೋನಕುಂಟ್ಲು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ೨.೨೫ ಕೋಟಿ ವೆಚ್ಚದಲ್ಲಿ, ಮಿಂಡಿಗಲ್ ರಸ್ತೆಯನ್ನು ೧.೨೫ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇದರಿಂದ ಎಲ್ಲೆಲ್ಲಿ ದಟ್ಟ ವಾಹನ ಸಂಚಾರ ಇರುವ ಸ್ಥಳಗಳನ್ನು ಗುರುತಿಸಿ ಅದನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವುದಾಗಿ ತಿಳಿಸಿದರು.
ವಾಲ್ಮೀಕಿ ಭವನದ ಉದ್ಘಾಟನೆಸುನ್ನಪುಗುಟ್ಟ ಗ್ರಾಮದಲ್ಲಿ ೨೦ ಲಕ್ಷ ವೆಚ್ಚದ ವಾಲ್ಮೀಕಿ ಭವನದ ಉದ್ಘಾಟನೆ, ಏಟಿಗಡ್ಡಗೊಲ್ಲಹಳ್ಳಿ ಹಾಗೂ ಜುಂಜನಹಳ್ಳಿ ಗ್ರಾಮಗಳ ಎಸ್.ಸಿ.ಕಾಲೋನಿಯ ರಸ್ತೆಯನ್ನು ೧೭ ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೆ ಚಾಲನೆ ನೀಡಿದರು.
ತಾಲ್ಲೂಕಿನ ಶೇಕಡಾ ೧೦೦ರಷ್ಟು ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುವುದು ಕೇವಲ ೬೯ ಗ್ರಾಮಗಳ ಮಾತ್ರ ಬಾಕಿಯಿದೆಂದರು. ೩೫.೨೫ ಲಕ್ಷಗಳ ವೆಚ್ಚದಲ್ಲಿ ಚಿಂತಪಲ್ಲಿ, ಸೀತಂಪಲ್ಲಿ, ಕಂಚಿನಾಯಕನಹಳ್ಳಿ, ವೆಂಕಟರಾಯನಕೋಟೆ, ಮತ್ತೆ ಪಲ್ಲಿಗಡ್ಡ ಗ್ರಾಮಗಳಲ್ಲಿ ಇಎಂಎವಿಇಇ ಸೋಲಾರ್ ಸಂಸ್ಥೆಯ ಮತ್ತು ಎಂವೀ ಪ್ರತಿಷ್ಠಾನಾ ಮಾಲೀಕ ಡಿ.ವಿ.ಮಂಜುನಾಥ್‌ರ ಅನುಪಸ್ಥಿತಿಯಲ್ಲಿ ಸಂಸ್ಥೆಯ ಸಿಎಸ್‌ಆರ್ ಮುಖ್ಯಸ್ಥ ಬಿ.ಜಿ.ವಿನಯ್ ಪಾಲ್ಗೊಂಡು ೫ ಶುದ್ಧ ನೀರಿನ ಘಟಕಗಳನ್ನು ಉದ್ಘಾಟಿಸಿದರು.೧೦ ಶುದ್ಧ ನೀರಿನ ಘಟಕ
ಇಷ್ಟೇ ಅಲ್ಲದೆ ಸಂಸ್ಥೆಯ ವತಿಯಿಂದ ಇನ್ನೂ ೧೦ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಒದಗಿಸಲಾಗುವುದೆಂದು ತಿಳಿಸಿದರು. ಮಾದಮಂಗಲ ಗ್ರಾಮದಲ್ಲಿ ೭.೬ ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಿದರು. ತಾಲ್ಲೂಕಿನ ಒಟ್ಟು ಗ್ರಾಮಗಳ ಪೈಕಿ ಕೇವಲ ೬೯ ಗ್ರಾಮಗಳಿಗೆ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮಾಡಬೇಕಾಗಿದ್ದು ಅದನ್ನು ಶೀಘ್ರದಲ್ಲೆ ಒದಗಿಸಲಾಗುವುದೆಂದರು.ಈ ಸಂದರ್ಭದಲ್ಲಿ ತಾ.ಪಂ. ಇಒ ಎಸ್.ಆನಂದ್, ಮಾಜಿ ಅಧ್ಯಕ್ಷ ಎಸ್.ಎಂ.ವೆಂಕಟರವಣಪ್ಪ, ಪುಣ್ಯಕೋಟಿ, ಸ್ಕೂಲ್ ಸುಬ್ಬಾರೆಡ್ಡಿ, ಸಿಎಸ್‌ಆರ್ ಮುಖ್ಯಸ್ಥ ಬಿ.ಜಿ. ವಿನಯ್, ಎಂ.ಕೆ ವೇಣುಗೋಪಾಲ್ ಮಾದಮಂಗಲ ಚಂದ್ರಪ್ಪ, ರಘುನಾಥರೆಡ್ಡಿ, ಇಂಜಿನಿಯರ್ ಗಿರೀಶ್, ಗುತ್ತಿಗೆದಾರ ನಾರಾಯಣರೆಡ್ಡಿ, ಇಂಜಿನಿಯರ್ ಮೂರ್ತಿ, ಎಇಇ ನಾಗರಾಜ್, ನಂದೀಶ್, ವಿವಿಧ ಪಂಚಾಯತಿಯ ಅಧ್ಯಕ್ಷ, ಪಿಡಿಒಗಳು ಮತ್ತು ಕಾಂಗ್ರೇಸ್ ಮುಖಂಡರು ಉಪಸ್ಥಿತರಿದ್ದರು.