ಪ್ರಯಾಣಿಕರ ವೇದಿಕೆ ವತಿಯಿಂದ ಗಾಂಧಿ ಜಯಂತಿಯಂದು ಸ್ವಚ್ಛತಾ ಕಾರ್ಯ

| Published : Oct 03 2025, 01:07 AM IST

ಪ್ರಯಾಣಿಕರ ವೇದಿಕೆ ವತಿಯಿಂದ ಗಾಂಧಿ ಜಯಂತಿಯಂದು ಸ್ವಚ್ಛತಾ ಕಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ತುಮಕೂರಿನಿಂದ ಯಶವಂತಪುರಕ್ಕೆ ಬೆಳಗ್ಗೆ 8 ಕ್ಕೆ ಹೊರಡುವ ರೈಲಿನ ಬೋಗಿಗಳನ್ನು ಕೂಡಾ ಸ್ವಚ್ಛಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ಮಹಾತ್ಮ ಗಾಂಧೀಜಿ ಜನ್ಮದಿನಾಚರಣೆ ಅಂಗವಾಗಿ ತುಮಕೂರು ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆ ವತಿಯಿಂದ ತುಮಕೂರು ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ತುಮಕೂರು ರೈಲು ನಿಲ್ದಾಣದ ಪ್ಲಾಟ್‌ಫಾರಂಗಳು ಹಾಗೂ ನಿಲ್ದಾಣದ ಮುಂಭಾಗದ ಆವರಣದಲ್ಲಿ ಸ್ವಚ್ಛತಾ ಕಾರ್ಯ ನೆರವೇರಿಸಲಾಯಿತು. ಅಲ್ಲದೆ, ತುಮಕೂರಿನಿಂದ ಯಶವಂತಪುರಕ್ಕೆ ಬೆಳಗ್ಗೆ 8 ಕ್ಕೆ ಹೊರಡುವ ರೈಲಿನ ಬೋಗಿಗಳನ್ನು ಕೂಡಾ ಸ್ವಚ್ಛಗೊಳಿಸಲಾಯಿತು. ನಂತರ ನಿಲ್ದಾಣದಲ್ಲಿ ಮಹಾತ್ಮಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ನೆರವೇರಿಸಲಾಯಿತು. ವೇದಿಕೆಯ ಅಧ್ಯಕ್ಷ ಕರಣಂ ರಮೇಶ್, ಕಾರ್ಯದರ್ಶಿ ಸಿ. ನಾಗರಾಜ್, ಖಜಾಂಚಿ ಆರ್. ಬಾಲಾಜಿ, ಜಂಟಿ ಕಾರ್ಯದರ್ಶಿ ರಾಮಾಂಜನೇಯ, ಗೌರವ ಅಧ್ಯಕ್ಷೆ ಬಾ.ಹ. ರಮಾಕುಮಾರಿ, ನಿರ್ದೇಶಕರಾದ ರಘು ಎಂ.ಆರ್., ಶಿವಕುಮಾರಸ್ವಾಮಿ, ಅರ್ಷದ್, ಅಶ್ವತ್ಥನಾರಾಯಣ, ಪ್ರಸನ್ನ, ನಂದಿನಿ, ವೀರೇಶ್ ಮತ್ತು ವೀರಪ್ಪ ಮತ್ತಿತರರು ಭಾಗವಹಿಸಿದ್ದರು. ತುಮಕೂರು ರೈಲು ನಿಲ್ದಾಣದ ವ್ಯವಸ್ಥಾಪಕ ರಮೇಶ್ ಬಾಬು ಮತ್ತು ಸಿಬ್ಬಂದಿ, ಆರ್‌ಪಿಎಫ್ ಇನ್‌ಸ್ಪೆಕ್ಟರ್ ವಿಕ್ರಮ್, ಸಹಾಯಕ ಇನ್‌ಸ್ಪೆಕ್ಟರ್ ನಿರ್ಮಲಾ ಮತ್ತು ಸಿಬ್ಬಂದಿ ಹಾಗೂ ನಿಲ್ದಾಣ ಸ್ವಚ್ಛತಾ ಸಿಬ್ಬಂದಿ ಭಾಗವಹಿಸಿದ್ದರು.