ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರಾಜ್ಯದಲ್ಲಿ ಔರಂಗಜೇಬ ಸರ್ಕಾರ ಇದ್ದಂತಿದೆ. ಶರಣ್ ಪಂಪ್‌ವೆಲ್ ಗೆ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಚಿತ್ರದುರ್ಗ ಜಿಲ್ಲೆ ಪಾಕಿಸ್ತಾನ ಅಲ್ಲ. ಹಿಂದೂಗಳ ಮೇಲೆ ಸಿದ್ಧರಾಮಯ್ಯ ಸರ್ಕಾರ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ಅಂತ್ಯ ಕಾಲ ಬಂದಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಹೇಳಿದರು.ಚಿತ್ರದುರ್ಗದಲ್ಲಿ ಹಿಂದೂ ಮಹಾ ಗಣಪತಿ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಮುಸ್ಲಿಂ ತುಷ್ಟೀಕರಣ ನಡೆಯುತ್ತಿದೆ. ಮಸೀದಿಯಲ್ಲಿ 5 ಬಾರಿ ಧ್ವನಿವರ್ಧಕ ಬಳಕೆಗೆ ಅವಕಾಶ ಕೊಡುತ್ತಾರೆ.
ರಾಜ್ಯದಲ್ಲಿ ಪರವಾನಿಗೆ ಇಲ್ಲದ ಅನೇಕ ಮಸೀದಿಗಳಿವೆ, ಅಂಥ ಮಸೀದಿಗಳ ಮೇಲೆ ನಿಂತು ಕಲ್ಲೆಸೆಯಲು ಅವಕಾಶ ಕೊಡ್ತಾರೆ ಮದ್ದೂರು ಗಲಭೆಗೆ ಗೃಹ ಸಚಿವರು ಸಣ್ಣ ಘಟನೆ ಎಂದು ಹೇಳ್ತಾರೆ. ಯಾವ ಘಟನೆ ಭೀಕರ ಎಂಬುದೇ ಅವರಿಗೆ ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.ಡಿಸಿಎಂ ಡಿಕೆಶಿ ಬ್ರದರ್ಸ್ ಮದ್ದೂರಲ್ಲಿ ಕಲ್ಲೆಸೆದಿದ್ದಾರೆ, 18 ವರ್ಷದಿಂದ ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಉತ್ಸವ ಇಷ್ಟು ವರ್ಷಗಳು ಡಿಜೆ ಕೊಟ್ಟಿದ್ದಾರೆ, ಏನಾದರೂ ಗಲಾಟೆ ಆಗಿದೆಯೇ? ಮಸೀದಿ ಮೇಲಿರುವ ಮೈಕ್ ಗಳನ್ನು ಕಿತ್ತು ಹಾಕಿ ಸುಪ್ರೀಂಕೋರ್ಟ್ ಸೂಚನೆ ಪ್ರಕಾರ ಮೈಕ್ ಕಿತ್ತು ಹಾಕಿ ಸಿಎಂ, ಡಿಸಿಎಂ, ಗೃಹಸಚಿವರ ಬಳಿ ತಾಕತ್ತಿದ್ದರೆ ಮೈಕ್ ಕಿತ್ತು ಹಾಕಿ ಆ ಬಳಿಕ ನಮ್ಮ ಡಿಜೆನೂ ನೀವು ಬಂದ್ ಮಾಡಿಸಿ. ಪಾಕಿಸ್ತಾನ, ಪ್ಯಾಲೆಸ್ಟೈನ್ ಧ್ವಜ ಹಾರಿಸ್ತಾರೆ, ಇದೇ ರೀತಿ ಹೋದರೆ ಈ ಸರ್ಕಾರ ಕೆಲ ದಿನದಲ್ಲಿ ಪತನವಾಗುತ್ತದೆ ಎಂದರು.ಪೊಲೀಸ್ ಅಧಿಕಾರಿಗಳು ಕೂಡ ಎಚ್ಚೆತ್ತುಕೊಳ್ಳಬೇಕಿದೆ, ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಪ್ರಕರಣ ಸಂಬಂಧಿಸಿದಂತೆ ತಪ್ಪು ಸರ್ಕಾರದ್ದು ಶಿಕ್ಷೆ ಆಗಿದ್ದು ಪೊಲೀಸರಿಗೆ ಎಂದು ಗೊತ್ತಿರಲಿ ದುರ್ದೈವದ ಸಂಗತಿ ರಾಜ್ಯದಲ್ಲಿ ವಿಪಕ್ಷವೇ ಇಲ್ಲ ಸರ್ಕಾರದ ವಿರುದ್ಧ ಮಾತಾಡುವ ಧಮ್ ಅಂತೂ ಇಲ್ಲ. ಪೂಜ್ಯ ತಂದೆ, ಮಕ್ಕಳು ರಾತ್ರಿ ಡಿಕೆಶಿ ಮನೆಯಲ್ಲಿ ಊಟ, ಬೆಳಗ್ಗೆ ಸಿಎಂ ಮನೇಲಿ ತಿಂಡಿ ಮಾಡುತ್ತಾರೆ. ಹೊಂದಾಣಿಕೆ ರಾಜಕೀಯದಿಂದ ಹಿಂದೂ ಕಾರ್ಯಕರ್ತರ ರಕ್ಷಣೆ ಆಗುತ್ತಿಲ್ಲ ಬಿಜೆಪಿ ಹೈಕಮಾಂಡ್ ಈ ಬಗ್ಗೆ ತಿಳಿದುಕೊಳ್ಳಬೇಕು ಹೇಳಿದರು.
ಅಯೋಗ್ಯರೊಂದಿಗೆ ಹೋದರೆ ಬಿಜೆಪಿ ನೆಲಕಚ್ಚುತ್ತದೆ. ಬಿಜೆಪಿಗೆ ಹಿಂದೂಗಳೇ ಮತ ಹಾಕುವುದು, ಸಾಬರು ಹಾಕಲ್ಲ ಸಾಬರು ಗೂಟ ಹೊಡೆಯೋದು ಬಿಜೆಪಿಗೆ, ಓಟ್ ಹಾಕೋದು ಮಾತ್ರ ಕಾಂಗ್ರೆಸ್ಸಿಗೆ. ಚಿತ್ರದುರ್ಗದಲ್ಲಿ ಶೋಭಾಯಾತ್ರೆಗೆ 8 ಲಕ್ಷಕ್ಕೂ ಅಧಿಕ ಜನ ಸೇರುತ್ತಾರೆ ಈವರೆಗೆ ಯಾವುದೇ ಗಲಭೆ, ಗಲಾಟೆ ನಡೆಸಿಲ್ಲ ಆದರೆ, ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರಿಗೆ ಏನಾಗಿದೆಯೋ ಗೊತ್ತಿಲ್ಲ. ಸುಧಾಕರ್ ಯಾಕೆ ಸಾಬರ ಪರ ಆಗಿದ್ದಾರೋ ಗೊತ್ತಿಲ್ಲ. ಇವರು ಜಿಲ್ಲೆಯ ಸ್ವಾಭಿಮಾನ ಇಲ್ಲದ ಜಿಲ್ಲಾಮಂತ್ರಿ ಎಂದು ಕಿಡಿಕಾರಿದರು. ಶಾಸಕ ಸಂಗಮೇಶ ಅವರು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗುವ ಇಂಗಿತ ವಿಚಾರ ಹೋರಹಾಕಿದ್ದಾರೆ. ಅವರು ಈಗಲೇ ಮುಸ್ಲಿಂ ಆಗಲಿ, ಮೌಲ್ವಿ ಆಹ್ವಾನ ನೀಡಿದ್ದಾರೆ. ಇಸ್ಲಾಂನಲ್ಲಿ ಪುನರ್ಜನ್ಮ ಇಲ್ಲ, ಸತ್ತರೆ ಸೀದಾ ಜನ್ನತ್ ಗೆ ಹೋಗ್ತಾರೆ ಜನ್ನತ್ ನಲ್ಲಿ 72 ಸುಂದರಿಯರು ಸೇವೆಗೆ ಕಾದಿರುತ್ತಾರೆಂದು ವ್ಯಂಗ್ಯವಾಗಿ ನುಡಿದರು.