ಜಾತಿ ರಹಿತ ಸಮಾಜ ನಿರ್ಮಾಣದ ಗುರಿ ಹೊಂದಿದ್ದ ಚೌಡಯ್ಯ: ಡಾ. ಗಣಪತಿ ಲಮಾಣಿ

| Published : Jan 22 2025, 12:32 AM IST

ಜಾತಿ ರಹಿತ ಸಮಾಜ ನಿರ್ಮಾಣದ ಗುರಿ ಹೊಂದಿದ್ದ ಚೌಡಯ್ಯ: ಡಾ. ಗಣಪತಿ ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ವಚನಕಾರ ಅಂಬಿಗರ ಚೌಡಯ್ಯನವರು ಜಾತಿ ರಹಿತ ಮತ್ತು ವರ್ಗ ರಹಿತ ಸಮಾಜ ನಿರ್ಮಾಣ ಮಾಡುವ ಗುರಿ ಹೊಂದಿದ್ದರು.

ಕೊಪ್ಪಳ:

ವಚನಕಾರ ಅಂಬಿಗರ ಚೌಡಯ್ಯನವರು ಜಾತಿ ರಹಿತ ಮತ್ತು ವರ್ಗ ರಹಿತ ಸಮಾಜ ನಿರ್ಮಾಣ ಮಾಡುವ ಗುರಿ ಹೊಂದಿದ್ದರು ಎಂದು ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ನಡೆದ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿಯಲ್ಲಿ ಮಾತನಾಡಿದರು.

12ನೇ ಶತಮಾನದಲ್ಲಿ ವಚನಕಾರ ಅಂಬಿಗರ ಚೌಡಯ್ಯ ತಮ್ಮ ವಚನಗಳ ಮೂಲಕ ಸಮಾಜದ ತಪ್ಪುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಹೇಳಿದ್ದಾರೆ. ಎಲ್ಲರಿಗೂ ಒಂದೇ ಎಂಬ ಭಾವನೆ ಇರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಡಾ. ನರಸಿಂಹ ಮಾತನಾಡಿ, ಅಂಬಿಗರ ಚೌಡಯ್ಯ ನವರು 1160ರಲ್ಲಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರ ತಾಲೂಕಿನ ಶಿವಪುರದಲ್ಲಿ ಜನಿಸಿದ್ದಾರೆ. ಇವರ ತಂದೆ ವಿರುಪಾಕ್ಷಿ, ತಾಯಿ ಪಂಪದೇವಿ. ಅಂಬಿಗರ ಚೌಡಯ್ಯ ಮೂಲ ದೋಣಿ ನಡೆಸುವ ಕಾಯಕ ಮಾಡುತ್ತಿದ್ದರು. ಇವರು ತಮ್ಮ ವಚನಗಳ ಮೂಲಕ ಜಾತಿ, ಅಸಮಾನತೆ ಖಂಡಿಸಿದ್ದಾರೆ. ಇವರು ಸುಮಾರು 279 ವಚನ ಬರೆದಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಾಂಸ್ಕೃತಿಕ ಘಟಕದ ಸಂಚಾಲಕಿ ಡಾ. ಹುಲಿಗೆಮ್ಮ ಮಾತನಾಡಿ, ಅಂಬಿಗರ ಚೌಡಯ್ಯನವರ ವಚನಗಳು ನಿಷ್ಠುರತೆ, ನೇರ ನುಡಿಗಳನ್ನು ಒಳಗೊಂಡಿವೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ನಾಗರತ್ನ ತಮ್ಮಿನಾಳ, ಡಾ. ಅಶೋಕ ಕುಮಾರ, ಹನುಮಪ್ಪ, ಶಿವಪ್ಪ ಬಡಿಗೇರ, ಶ್ರೀ ಕಾಂತ ಸಿಂಗಾಪುರ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.ಭಾಗ್ಯನಗರದಲ್ಲಿ ಅಂಬಿಗರ ಚೌಡಯ್ಯ ಜಯಂತಿ:

ಇಲ್ಲಿನ ಭಾಗ್ಯನಗರದ ಓಜನಹಳ್ಳಿ ಸರ್ಕಲ್ ಬಳಿ ಅಂಬಿಗರ ಚೌಡಯ್ಯ ವೃತ್ತದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು. ವೃತ್ತಕ್ಕೆ ಜಿಪಂ ಮಾಜಿ ಉಪಾಧ್ಯಕ್ಷ ಯಮನಪ್ಪ ಕಬ್ಬೇರ್ ಪೂಜೆ ಮಾಡಿದರು. ಈ ಸಂದರ್ಭ ಸಮಾಜದ ಜಿಲ್ಲಾ ಕಾರ್ಯದರ್ಶಿ ವೆಂಕಪ್ಪ ಬಾರಕೇರ, ಸಮಾಜದ ಮುಖಂಡರಾದ ಎನ್. ಯಂಕಪ್ಪ ಬಾರಕೇರ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಗಂಗಾಧರ್ ಕಬ್ಬೇರ್, ರಾಮಣ್ಣ ಕಬ್ಬೇರ್, ಕೃಷ್ಣ ಕಬ್ಬೇರ್, ಗವಿಸಿದ್ದಪ್ಪ ಬಾರಕೇರ, ಪರಮೇಶ್ವರಪ್ಪ ಮಾಸ್ತರ, ಶಿವಪ್ಪ ಜಾಲಗಾರ, ಅಣ್ಣೇಶ್ ಕಬ್ಬೇರ್ ಹಾಗೂ ಅಂಬಿಗರ ಚೌಡಯ್ಯ ಸೇವಾದಳ, ಯುವಕ ಮಂಡಳ, ಸಮಾಜದ ಮುಖಂಡರು ಪಾಲ್ಗೊಂಡು ಯಶಸ್ವಿಗೊಳಿಸಿದರು.