ಚೌಡಯ್ಯನವರು ಮೂಢನಂಬಿಕೆ ಹೋಗಲಾಡಿಸಲು ಶ್ರಮಿಸಿದ ಮಹಾನ್‌ ವಚನಕಾರ-ಶಾಸಕ ಶಿವಣ್ಣನವರ

| Published : Feb 14 2025, 12:31 AM IST

ಚೌಡಯ್ಯನವರು ಮೂಢನಂಬಿಕೆ ಹೋಗಲಾಡಿಸಲು ಶ್ರಮಿಸಿದ ಮಹಾನ್‌ ವಚನಕಾರ-ಶಾಸಕ ಶಿವಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ನೇರ, ನಿಷ್ಠುರ, ನಡೆ, ನುಡಿಗಳಿಂದ ಸಮಾಜದಲ್ಲಿನ ಅಸ್ಪೃಶ್ಯತೆ ಹಾಗೂ ಮೂಢನಂಬಿಕೆಯನ್ನು ಹೋಗಲಾಡಿಸಲು ಶ್ರಮಿಸಿದ ಮಹಾನ್ ವಚನಗಾರ ನಿಜಶರಣ ಅಂಬಿಗರ ಚೌಡಯ್ಯನವರೆಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಬ್ಯಾಡಗಿ: ನೇರ, ನಿಷ್ಠುರ, ನಡೆ, ನುಡಿಗಳಿಂದ ಸಮಾಜದಲ್ಲಿನ ಅಸ್ಪೃಶ್ಯತೆ ಹಾಗೂ ಮೂಢನಂಬಿಕೆಯನ್ನು ಹೋಗಲಾಡಿಸಲು ಶ್ರಮಿಸಿದ ಮಹಾನ್ ವಚನಗಾರ ನಿಜಶರಣ ಅಂಬಿಗರ ಚೌಡಯ್ಯನವರೆಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು. ತಾಲೂಕಿನ ಮಾಸಣಗಿ ಗ್ರಾಮದಲ್ಲಿ ಗುರುವಾರ ನಿಜಶರಣ ಅಂಬಿಗರ ಚೌಡಯ್ಯನವರ 905ನೇ ತಾಲೂಕು ಜಯಂತ್ಯುತ್ಸವ ಹಾಗೂ ಶರಣ ವೇದವ್ಯಾಸರ ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಾರಿಗೂ ಹೆದರದೆ, ಅಳುಕದೇ ಸಮಾಜದ ಅಂಕು ಡೊಂಕುಗಳನ್ನು ತಿದ್ದಿದವರು, ಕಾಯಕ ನಿಷ್ಠೆ ಉಳ್ಳವರು, ಹಸಿದವರಿಗೆ ಅನ್ನ ಕೊಡಿ, ದುಃಖದಲ್ಲಿದ್ದವರಿಗೆ ಸಾಂತ್ವನ ಹೇಳಿ, ಕಷ್ಟದಲ್ಲಿದ್ದವರಿಗೆ ಸಹಾಯಮಾಡಿ ಎಂದು ತಮ್ಮ ವಚನದ ಮೂಲಕ ಜಗತ್ತಿಗೆ ಸಾರಿದವರು ಎಂದು ಬಣ್ಣಿಸಿದರು. ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಮನು ಕುಲದ ಉದ್ದಾರಕ್ಕಾಗಿ ಅಂಬಿಗ ಚೌಡಯ್ಯನವರು ಶ್ರಮಿಸಿದವರು. ಸಮಾಜದ ಏಳಿಗೆಗೆ ಶಿಕ್ಷಣ ಅಗತ್ಯ. ಪಾಲಕರು ಮಕ್ಕಳಿಗೆ ಶಿಕ್ಷಣ ನೀಡಬೇಕು. ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು. ಒಳ್ಳೆಯ ಗುಣ ಬೆಳೆಸಿಕೊಳ್ಳಬೇಕು. ಇಂದಿನ ಯುವ ಪೀಳಿಗೆ ಮೊಬೈಲ್ ಬಳಕೆಯಿಂದ ದೂರ ಇರಬೇಕು. ಅಂಬಿಗರ ಚೌಡಯ್ಯನವರ ಆದರ್ಶಗಳನ್ನು ಪಾಲಿಸಿಕೊಳ್ಳುವಂತೆ ತಿಳಿಸಿದರು. ಮಾಜಿ ಸಚಿವ ಪ್ರಮೋದ ಮಧ್ವರಾಜ್ ಮಾತನಾಡಿ, ನಮ್ಮ ಜನಾಂಗವು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಧಾರ್ಮಿಕವಾಗಿ ಮುಂದೆ ಬರಬೇಕು, ಮುಂದಿನ ದಿನಗಳಲ್ಲಿ ನಮ್ಮ ಜನಾಂಗಕ್ಕೆ ಎಲ್ಲಾ ಪಕ್ಷದ ನಾಯಕರು ಜಿಲ್ಲಾ ಪಂಚಾಯತ್, ತಾಲೂಕು ಹಾಗೂ ಗ್ರಾಮ ಪಂಚಾಯತಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿ ಕೊಡುವ ವ್ಯವಸ್ಥೆಯನ್ನು ಮಾಡಬೇಕೆಂದು ಮನವಿ ಮಾಡಿದರು. ಸಮಾರಂಭದ ಸಾನಿಧ್ಯವನ್ನು ನರಸಿಪುರದ ಜಗದ್ಗುರುಶ್ರೀ ಶಾಂತಭಿಷ್ಮ ಚೌಡಯ್ಯಶ್ರಿಗಳು, ಚಿತ್ರದುರ್ಗದ ಶ್ರೀ ಕೃಷ್ಣದಯಾನಂದ ಶ್ರೀಗಳು, ಹಾವೇರಿ ಹೊಸಮಠದ ಬಸವಲಿಂಗಶ್ರೀ, ಸದಾನಂದಯ್ಯ ಹಿರೇಮಠ ವಹಿಸಿದ್ದರು, ನಿಂಗಣ್ಣ ಹೆಗ್ಗಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಧನರಾಜ್ , ಮಂಜುನಾಥ ಭೋವಿ, ಬಸವರಾಜ ಸಪ್ಪನಗೋಳ, ಮಂಜುನಾಥ ಪುಟಗನಾಳ, ಐರಣಿ ಸರ್, ಬಸವರಾಜ ಬನ್ನಿಹಟ್ಟಿ, ಸಂಜೀವಪ್ಪ ಹುಲಿಹಳ್ಳಿ, ಪರಮೇಶಪ್ಪ ಚಿಕ್ಕಮ್ಮನವರ, ರಮೇಶ ಸುತ್ತಕೋಟಿ, ನಾಗರಾಜ ಆನ್ವೇರಿ, ಶಂಕರ ಬಾರ್ಕಿ, ಜಿತೇಂದ್ರ ಸುಣಗಾರ, ರೇಣುಕಾ ಪಡೆಯಣ್ಣನವರ, ಚಂದ್ರು ಮುಳಗುಂದ, ಮಂಜಪ್ಪ ಬಾರ್ಕಿ, ಶಿವಣ್ಣ ಕುಮ್ಮೂರ, ಹನುಮಂತಪ್ಪ ನಾಯಕ, ನೀಲಗಿರಿಯಪ್ಪಾ ಕಾಕೋಳ, ಶಿವಬಸಪ್ಪ ಕುಳೇನೂರ, ಸುರೇಶ ಯತ್ನಳ್ಳಿ ಸೇರಿದಂತೆ ಇತರರಿದ್ದರು.