ನರೇಂದ್ರ ಮೋದಿ ಅಭಿಮಾನಿ ಬಳಗದಿಂದ ಸ್ವಚ್ಛತಾ ಅಭಿಯಾನCleanliness campaign by Narendra Modi fan club

| Published : Sep 18 2025, 01:10 AM IST

ನರೇಂದ್ರ ಮೋದಿ ಅಭಿಮಾನಿ ಬಳಗದಿಂದ ಸ್ವಚ್ಛತಾ ಅಭಿಯಾನCleanliness campaign by Narendra Modi fan club
Share this Article
  • FB
  • TW
  • Linkdin
  • Email

ಸಾರಾಂಶ

ದೇಶಕ್ಕೆ ಅಗತ್ಯವಿರುವ ಯುದ್ಧ ಸಾಮಗ್ರಿಗಳನ್ನು ಆತ್ಮ ನಿರ್ಭರ ಮೂಲಕ ತಯಾರಿಸಿ, ಅವುಗಳನ್ನು ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಉಗ್ರರಿಗೆ ತಕ್ಕ ಪಾಠ ಕಲಿಸಲು ಬಳಸಿ ಯಶಸ್ವಿಯಾದರು. ಈ ಹಿನ್ನೆಲೆ ಇಡೀ ದೇಶವೇ ಭಾರತದತ್ತ ತಿರುಗಿ ನೋಡುವಂತಾಗಿದೆಯೆಂದರು.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂದೂರದ ಮೂಲಕ ಉಗ್ರರ ನೆಲೆಗಟ್ಟುಗಳನ್ನು ಶತ್ರು ರಾಷ್ಟ್ರಕ್ಕೆ ನುಗ್ಗಿ ಹೊಡೆದು ಹಾಕಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆಂದು ಮಾಜಿ ವಕೀಲರ ಸಂಘದ ಅಧ್ಯಕ್ಷ ನಾ.ಶಂಕರ್ ನುಡಿದರು.ತಾಲೂಕಿನ ಕುರುಟಹಳ್ಳಿಯಲ್ಲಿ ನರೇಂದ್ರಮೋದಿ ಅಭಿಮಾನಿ ಬಳಗ ಮತ್ತು ಛತ್ರಪತಿ ಶಿವಾಜಿ ಯುವಕರ ಬಳಗದ ವತಿಯಿಂದ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ೭೫ನೇ ವರ್ಷದ ಹುಟ್ಟುಹಬ್ಬದ ಸಲುವಾಗಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದೇಶಕ್ಕೆ ಅಗತ್ಯವಿರುವ ಯುದ್ಧ ಸಾಮಗ್ರಿಗಳನ್ನು ಆತ್ಮ ನಿರ್ಭರ ಮೂಲಕ ತಯಾರಿಸಿ, ಅವುಗಳನ್ನು ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಉಗ್ರರಿಗೆ ತಕ್ಕ ಪಾಠ ಕಲಿಸಲು ಬಳಸಿ ಯಶಸ್ವಿಯಾದರು. ಈ ಹಿನ್ನೆಲೆ ಇಡೀ ದೇಶವೇ ಭಾರತದತ್ತ ತಿರುಗಿ ನೋಡುವಂತಾಗಿದೆಯೆಂದರು.

ದೇಶ, ಹಿಂದೂ ಮತ್ತು ಹಿಂದುತ್ವ ಸೇರಿ ದೇಶದ ಸಂಸ್ಕೃತಿಗೆ ರಕ್ಷಣೆ ನೀಡುವುದರ ಜೊತೆಗೆ ದೇಶದ ಕೀರ್ತಿಯನ್ನೂ ಹೆಚ್ಚಿಸಿ ವಿಶ್ವಗುರುವಿನ ಸ್ಥಾನದಲ್ಲಿ ನಿಲ್ಲುವಂತೆ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿಯು ಸಾಕ್ಷಿಯಾಗಿದೆಯೆಂದರು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಹಿರಿಯರು, ಕಿರಿಯರು, ಯುವಕರು ಭಾಗವಹಿಸಿದ್ದರು, ಇದರೊಂದಿಗೆ ವಿವಿಧ ಗಿಡಗಳನ್ನು ನೆಟ್ಟು ಪ್ರಧಾನಿಯವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ನಂತರ ಕೇಕ್ ಕತ್ತರಿಸಿ ಸಿಹಿ ಹಂಚಿದರು.

ಕುರುಟಹಳ್ಳಿ ಡಾಬಾ ಮಂಜುನಾಥ್, ಮಾಜಿ ತಾಲೂಕು ಅಧ್ಯಕ್ಷ ಬ್ಯಾಲಹಳ್ಳಿ ಆಂಜನೇಯರೆಡ್ಡಿ, ಸದಾಶಿವರೆಡ್ಡಿ, ಮಾಡಿಕೆರೆ ಅರುಣ್ ಕುಮಾರ್, ಎಪಿಎಂಸಿ ಮಾಜಿ ನಿರ್ದೇಶಕರು ಹಾಲಿ ಗ್ರಾ.ಪಂ ಸದಸ್ಯರು ಎನ್.ಶ್ರೀನಿವಾಸರೆಡ್ಡಿ, ಕೋಟಗಲ್ ಪ್ರದೀಪ್, ಮೂರ್ತಿ ಆಂಜಿನಪ್ಪ, ವೀರಭದ್ರಪ್ಪ, ಶ್ರೀನಿವಾಸ್ ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.