ಶಿಕ್ಷಣವೆಂಬ ದೊಡ್ಡ ಏಣಿ ಹತ್ತಿ ಬದುಕು ರೂಪಿಸಿಕೊಳ್ಳಿ

| Published : Sep 21 2025, 02:00 AM IST

ಶಿಕ್ಷಣವೆಂಬ ದೊಡ್ಡ ಏಣಿ ಹತ್ತಿ ಬದುಕು ರೂಪಿಸಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದ ವಿಕಾಸ ಹಾವು-ಏಣಿ ಆಟವಿದ್ದಂತೆ. ಹಲವಾರು ವರ್ಷಗಳಿಂದ ನಾವು ಇದರಲ್ಲಿ ಆಟವಾಡುತ್ತ ಗೆಲ್ಲುತ್ತಾ, ಸೋಲುತ್ತಾ ತಳಕ್ಕೆ ಬರುತ್ತಿದ್ದೇವೆ, ಅಸಮಾನತೆಯ ಹಾವು ನುಂಗಿದಾಗ ವಚನಕಾರರು ಏಣಿಯಂತೆ ಬಂದರು, ನಂತರ ಸೋಲುಗಳು ಎದುರಾದಾಗ ದಾಸಸಾಹಿತ್ಯ, ಶಿಕ್ಷಣವೆಂಬ ಏಣಿಗಳನ್ನು ಹತ್ತುತ್ತಾ ಸಾಗಿ ಬಂದಿದ್ದೇವೆ.

ಕನ್ನಡಪ್ರಭ ವಾರ್ತೆ ಕೋಲಾರಮನುಷ್ಯ ಸಹವಾಸ ಸುಖದಿಂದ ವಂಚಿತರಾಗಿ ನಾವಿಂದು ಮೊಬೈಲ್ ಬಾಗಿಲಿಗೆ ಸೀಮಿತವಾದ ಕೆಟ್ಟಕಾಲದಲ್ಲಿದ್ದೇವೆ. ಯುವಕರು ಅದರಿಂದ ಹೊರಬಂದು ಸಮತೆ-ಮಮತೆಯ ಶಿಕ್ಷಣವೆಂಬ ದೊಡ್ಡ ಏಣಿ ಹತ್ತಿ ಬದುಕು ರೂಪಿಸಿಕೊಳ್ಳಬೇಕು ಎಂದು ಸಾಹಿತಿ, ಚಲನಚಿತ್ರ ಗೀತ ರಚನೆಕಾರ ಜಯಂತ್ ಕಾಯ್ಕಿಣಿ ಕಿವಿಮಾತು ಹೇಳಿದರು.ತಾಲೂಕಿನ ಮಂಗಸಂದ್ರದ ಉತ್ತರ ವಿವಿ ಸ್ನಾತಕೋತ್ತರ ಕೇಂದ್ರದಲ್ಲಿ ಬೆಂಗಳೂರು ಉತ್ತರ ವಿವಿ ೪ನೇ ವಾರ್ಷಿಕ ‘ಉತ್ತರೋತ್ತರ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.ಹಾವು-ಏಣಿ ಆಟವಿದ್ದಂತೆ

ಸಮಾಜದ ವಿಕಾಸ ಹಾವು-ಏಣಿ ಆಟವಿದ್ದಂತೆ. ಹಲವಾರು ವರ್ಷಗಳಿಂದ ನಾವು ಇದರಲ್ಲಿ ಆಟವಾಡುತ್ತ ಗೆಲ್ಲುತ್ತಾ, ಸೋಲುತ್ತಾ ತಳಕ್ಕೆ ಬರುತ್ತಿದ್ದೇವೆ, ಅಸಮಾನತೆಯ ಹಾವು ನುಂಗಿದಾಗ ವಚನಕಾರರು ಏಣಿಯಂತೆ ಬಂದರು, ನಂತರ ಸೋಲುಗಳು ಎದುರಾದಾಗ ದಾಸಸಾಹಿತ್ಯ, ಶಿಕ್ಷಣವೆಂಬ ಏಣಿಗಳನ್ನು ಹತ್ತುತ್ತಾ ಸಾಗಿ ಬಂದಿದ್ದೇವೆ ಎಂದರು.ಇದೀಗ ಮಮತೆ, ಸಮತೆ ಬಿಟ್ಟು ನಾವು ಏಣಿ ಹತ್ತಲು ಹೋದರೆ ಮೇಲಿರುವ ದೊಡ್ಡ ಹಾವು ನುಂಗಿದರೆ ನಾವು ಮತ್ತೆ ಶಿಲಾಯುಗಕ್ಕೆ ಬಂದು ತಲುಪುತ್ತೇವೆ ಆದ್ದರಿಂದ ಎಚ್ಚರಿಕೆಯಿಂದ ಸಮತೆ, ಮಮತೆಯೊಂದಿಗೆ ಮನುಷ್ಯ ಸಹವಾಸದೊಂದಿಗೆ ಬದುಕು ಸಾಗಿಸಬೇಕು ಎಂದು ವಿದ್ಯಾರ್ಥಿಗಳಿಗೆ ಅವರು ಎಚ್ಚರಿಸಿ ಶಿಕ್ಷಣವೆಂದ ದೊಡ್ಡ ಏಣಿ ಹತ್ತಿ ಎಂದರು.

ಬಿಆರ್‌ಎಲ್‌ ರೋಲ್‌ ಮಾಡೆಲ್‌ವಿಜ್ಞಾನ-ಸಾಹಿತ್ಯ ಒಂದಕ್ಕೊಂದು ಸಂಬಂಧವಿದೆ, ಕಲೆ ಸಾಹಿತ್ಯ ಬೇರೆಯಲ್ಲ ವಿಜ್ಞಾನ ಬೇರೆಯಲ್ಲ ಕುವೆಂಪು, ಬೇಂದ್ರೆ ಮತ್ತಿತರ ಮಹಾನ್ ಕವಿಗಳು ವಿಜ್ಞಾನದ ಬಗ್ಗೆ ಆಸಕ್ತಿ ಹೊಂದಿದ್ದರು. ಉತ್ತರೋತ್ತರ ಪ್ರಶಸ್ತಿಗೆ ಭಾಜನರಾಗಿರುವ ಬಿ.ಆರ್.ಲಕ್ಷ್ಮಣರಾವ್, ಸಂಗೀತಕ್ಕಾಗಿ ಜೀವನವನ್ನೇ ಸವೆಸಿದ ಫಯಾಜ್ ಖಾನ್ ಇವರೆಲ್ಲಾ ಸಮಾಜಕ್ಕೆ ರೋಲ್ ಮಾಡೆಲ್ ಎಂದರು. ಸಿನಿಮಾ ಕುರಿತು ಮಾತನಾಡಿದ ಅವರು, ಸಿನಿಮಾ ಒಂದು ಸಂಗೀತ, ಸಾಹಿತ್ಯ, ನಟನೆ, ನಾಟಕ, ವಿಷುಯಲ್ ಹೀಗೆ ಹಲವಾರು ಕಲೆಕ್ಟೀವ್ ಸಾಧನವಿದ್ದಂತೆ, ಸಿನಿಮಾ ಹಾಡುಗಳು ನಮ್ಮ ಜೀವನದ ಜಾಯಮಾನವಿದ್ದಂತೆ ಅದು ಬದುಕಿನ ಬ್ಯಾಗ್ರೌಂಡ್ ಮ್ಯೂಸಿಕ್, ಎಲ್ಲವನ್ನು, ಎಲ್ಲರನ್ನೂ ಜತೆಗಿಟ್ಟುಕೊಂಡು ಹೋದರೆ ಮಾತ್ರ ಯಶಸ್ಸು ಸಾಧ್ಯ ಎಂದರು.ಪ್ರತಿಷ್ಠಿತ ರಾಜ್ಯ ಪ್ರಶಸ್ತಿಯಾಗಲಿಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನವಾನಳ್ಳಿ ಮಾತನಾಡಿ, ವಿವಿಯೂ ಕಳೆದ ೪ ವರ್ಷದಿಂದ ಉತ್ತರೋತ್ತರ ಪ್ರಶಸ್ತಿ ನೀಡುತ್ತಿರುವುದರಿಂದ ಈ ಭಾಗದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ನ್ಯಾಯ ಒದಗಿಸಿದಂಗಾಗಿದೆ. ಉತ್ತರೋತ್ತರ ಪ್ರಶಸ್ತಿಗೆ ರಾಜ್ಯಮಟ್ಟದ ಘನತೆಯೊಂದಿಗೆ ಇದು ಕರ್ನಾಟಕದ ಅತಿ ದೊಡ್ಡ ಪ್ರತಿಷ್ಟಿತ ಪ್ರಶಸ್ತಿಯಾಗಲಿ ಎಂಬುದು ನಮ್ಮ ಮಹದಾಸೆಯಾಗಿದೆ ಎಂದು ತಿಳಿಸಿದರು. ಬೆಂಗಳೂರು ಉತ್ತರ ಕಳೆದ ೩-೪ ವರ್ಷಗಳ ಹಿಂದೆ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಚಿಕ್ಕಬಳ್ಳಾಪುರ ಬಿ.ಇಡ್ ಕಾಲೇಜಿನ ೫೦ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಅವರು ಆಚರಿಸಿದ ಸಂಸ್ಥಾಪನ ದಿನಾಚರಣೆಯಂತೆ ನಾವು ಸಹ ಆಚರಿಸ ಬೇಕೆಂದು ನಿರ್ಧಾರ ಮಾಡಿದೆ ಎಂದು ಹೇಳಿದರು.

ಉತ್ತರೋತ್ತರ ಪ್ರಶಸ್ತಿ ಪ್ರದಾನಉತ್ತರೋತ್ತರ ಪ್ರಶಸ್ತಿಗೆ ಭಾಜನರಾದ ಹಿರಿಯ ಕವಿ ಬಿ.ಆರ್.ಲಕ್ಷ್ಮಣರಾವ್, ಹಿಂದೂಸ್ತಾನಿ ಗಾಯಕ ಉಸ್ತಾದ್‌ಫಯಾಜ್ ಖಾನ್, ತೊಗಲು ಗೊಂಬೆ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಸುಮಲತಾ, ಆದರ್ಶ ರೈತರಾದ ಕೃಷ್ಣೇಗೌಡ ಮಂಜುಳಮ್ಮ ದಂಪತಿಗಳನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ವಿವಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಕುಲಸಚಿವರಾದ ಶ್ರೀಧರ್, ಪ್ರೊ.ಲೋಕನಾಥ್, ವಿವಿ ಹಣಕಾಸು ಅಧಿಕಾರಿ ವಸಂತಕುಮಾರ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ.ಕುಮುದಾ, ಸಿಂಡಿಕೇಟ್ ಸದಸ್ಯರಾದ ಸೀಸಂದ್ರ ಗೋಪಾಲಗೌಡ, ಅರ್ಭಾಸ್, ಬಸವರಾಜ್ ಹಳ್ಳೂರು ಇದ್ದರು.