ಯಶ್‌ ನಟನೆ, ನಿರ್ಮಾಣದ ಅದ್ದೂರಿ ಬಜೆಟ್‌ ಚಿತ್ರ ‘ಟಾಕ್ಸಿಕ್‌’ನ ಮುಂಬೈ ಶೆಡ್ಯೂಲ್‌ ಶೂಟಿಂಗ್‌ ಮುಕ್ತಾಯಗೊಂಡಿದೆ.

 ಸಿನಿವಾರ್ತೆ

ಯಶ್‌ ನಟನೆ, ನಿರ್ಮಾಣದ ಅದ್ದೂರಿ ಬಜೆಟ್‌ ಚಿತ್ರ ‘ಟಾಕ್ಸಿಕ್‌’ನ ಮುಂಬೈ ಶೆಡ್ಯೂಲ್‌ ಶೂಟಿಂಗ್‌ ಮುಕ್ತಾಯಗೊಂಡಿದೆ. ಸುಮಾರು 45 ದಿನಗಳ ಕಾಲ ಇಲ್ಲಿ ಶೂಟಿಂಗ್‌ ನಡೆದಿತ್ತು. ಹಾಲಿವುಡ್ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಸಾಹಸ ನಿರ್ದೇಶನದಲ್ಲಿ ಸಿನಿಮಾದ ಹೈ ವೋಲ್ಟೇಜ್‌ ಆ್ಯಕ್ಷನ್‌ ಸೀನ್‌ಗಳ ಚಿತ್ರೀಕರಣ ನಡೆದಿತ್ತು.

ಮುಂದಿನ ಹಂತದ ಚಿತ್ರೀಕರಣ ಬೆಂಗಳೂರಲ್ಲಿ ನಡೆಯಲಿದೆ. ಇಲ್ಲಿ ಅಂತಿಮ ಹಂತದ ಚಿತ್ರೀಕರಣ ನಡೆಯಲಿದ್ದು, ಬಳಿಕ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯಲಿವೆ.

ಈ ನಡುವೆ ಯಶ್‌ ಲಂಡನ್‌ಗೆ ಪ್ರಯಾಣ ಬೆಳೆಸಿದ್ದಾರೆ. ಸಿನಿಮಾವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವ ನಿಟ್ಟಿನಲ್ಲಿ ಗ್ಲೋಬಲ್ ಪಾರ್ಟನರ್‌ಶಿಪ್‌ ಬಗ್ಗೆ ಇಲ್ಲಿ ಪ್ರಮುಖ ಕಂಪನಿಗಳ ಜೊತೆ ಮಾತುಕತೆ ನಡೆಯಲಿದೆ ಎನ್ನಲಾಗಿದೆ. ಈ ಸಿನಿಮಾ ಮಾರ್ಚ್ 19, 2026ಕ್ಕೆ ಬಿಡುಗಡೆ ಆಗುತ್ತಿದೆ.