ರಜತ್‌, ಯಶ್‌ ಶತಕ: ದುಲೀಪ್‌ ಟ್ರೋಫಿ ಫೈನಲ್‌ನಲ್ಲಿ ಕೇಂದ್ರ ವಲಯಕ್ಕೆ ಭರ್ಜರಿ ಮುನ್ನಡೆ

| Published : Sep 13 2025, 02:04 AM IST

ರಜತ್‌, ಯಶ್‌ ಶತಕ: ದುಲೀಪ್‌ ಟ್ರೋಫಿ ಫೈನಲ್‌ನಲ್ಲಿ ಕೇಂದ್ರ ವಲಯಕ್ಕೆ ಭರ್ಜರಿ ಮುನ್ನಡೆ
Share this Article
  • FB
  • TW
  • Linkdin
  • Email

ಸಾರಾಂಶ

ನಾಯಕ ರಜತ್‌ ಪಾಟೀದಾರ್‌ ಹಾಗೂ ಯಶ್‌ ರಾಥೋಡ್‌ ಆಕರ್ಷಕ ಶತಕದ ನೆರವಿನಿಂದ ಕೇಂದ್ರ ತಂಡ 2ನೇ ದಿನದಂತ್ಯಕ್ಕೆ 5 ವಿಕೆಟ್‌ ನಷ್ಟದಲ್ಲಿ 384 ರನ್‌ ಗಳಿಸಿದೆ.

ಬೆಂಗಳೂರು: ಇಲ್ಲಿ ನಡೆಯುತ್ತಿರುವ ದುಲೀಪ್‌ ಟ್ರೋಫಿ ಪ್ರಥಮ ದರ್ಜೆ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ವಲಯ ವಿರುದ್ಧ ಕೇಂದ್ರ ವಲಯ ತಂಡ ಭರ್ಜರಿ ಮುನ್ನಡೆ ಸಾಧಿಸಿದೆ. ನಾಯಕ ರಜತ್‌ ಪಾಟೀದಾರ್‌ ಹಾಗೂ ಯಶ್‌ ರಾಥೋಡ್‌ ಆಕರ್ಷಕ ಶತಕದ ನೆರವಿನಿಂದ ಕೇಂದ್ರ ತಂಡ 2ನೇ ದಿನದಂತ್ಯಕ್ಕೆ 5 ವಿಕೆಟ್‌ ನಷ್ಟದಲ್ಲಿ 384 ರನ್‌ ಗಳಿಸಿದ್ದು, 235 ರನ್‌ ಮುನ್ನಡೆಲ್ಲಿದೆ.ದಕ್ಷಿಣ ವಲಯ ಮೊದಲ ಇನ್ನಿಂಗ್ಸ್‌ನಲ್ಲಿ 149ಕ್ಕೆ ಆಲೌಟಾಗಿತ್ತು. ಇದಕ್ಕುತ್ತರವಾಗಿ ಮೊದಲ ದಿನ 50 ರನ್‌ ಗಳಿಸಿದ್ದ ಕೇಂದ್ರ, 2ನೇ ದಿನವೂ ಪ್ರಾಬಲ್ಯ ಸಾಧಿಸಿತು. ದಾನಿಶ್‌ ಮಲೇವಾರ್‌ 53 ರನ್‌ಗೆ ಔಟಾದ ಬಳಿಕ, ಅಕ್ಷಯ್ ವಾಡ್ಕರ್‌(22), ಶುಭಮ್‌ ಶರ್ಮಾ(6) ಬೇಗನೇ ನಿರ್ಗಮಿಸಿದರು. ಆದರೆ ರಜತ್‌ 115 ಎಸೆತಗಳಲ್ಲಿ 101, ಯಶ್‌ 188 ಎಸೆತಗಳಲ್ಲಿ ಔಟಾಗದೆ 137 ರನ್‌ ಗಳಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು. ಯಶ್‌ ಜೊತೆ ಸಾರನ್ಶ್‌ ಜೈನ್‌(ಔಟಾಗದೆ 47) 3ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಗುರ್ಜಪ್‌ನೀತ್‌ ಸಿಂಗ್‌ 3 ವಿಕೆಟ್ ಕಿತ್ತರು.