ಸಾರಾಂಶ
ಮಹಿಳೆಯರು, ಮಧ್ಯಮ, ಬಡವರು, ಹಿಂದುಳಿದ ವರ್ಗದವರು ಆರ್ಥಿಕ ಸಬಲರಾಗಿ ಜೀವನ ನಿರ್ವಹಿಸಲು ಸಹಕಾರಿ ಸಂಘಗಳು ಸಹಕಾರಿಯಾಗಿವೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.
ತಿಪಟೂರು: ಮಹಿಳೆಯರು, ಮಧ್ಯಮ, ಬಡವರು, ಹಿಂದುಳಿದ ವರ್ಗದವರು ಆರ್ಥಿಕ ಸಬಲರಾಗಿ ಜೀವನ ನಿರ್ವಹಿಸಲು ಸಹಕಾರಿ ಸಂಘಗಳು ಸಹಕಾರಿಯಾಗಿವೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.
ನಗರದ ರಾಜ್ಯ ಸರ್ಕಾರಿ ನೌಕರರ ನೌಕರರ ಭವನದಲ್ಲಿ ಕಲ್ಪತರು ವೀರಶೈವ ಲಿಂಗಾಯತ ಸೌಹಾರ್ಧ ಪತ್ತಿನ ಸಹಕಾರ ಸಂಘದ ೫ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು.ರಾಜ್ಯ ಮತ್ತು ರಾಷ್ಟ್ರಗಳಲ್ಲಿ ಸಹಕಾರಿ ಸಂಘಗಳು ಮುಂಚೂಣಿಯಲ್ಲಿದ್ದು, ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಆದಾಯಗಳಿಸುವ ಕೆಲಸ ಮಾಡುತ್ತಿವೆ. ಸದಸ್ಯರುಗಳ ಹಣದಿಂದಲೆ ಸಹಕಾರಿ ಸಂಘಗಳು ಇಂದು ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಸಹಕಾರಿ ಸಂಘಗಳ ಭದ್ರಪಡಿಸುವ ಚಿಂತನೆಯನ್ನು ಮಾಡಿದೆ ಎಂದರು.
ಸೌಹಾರ್ದತೆಯಿಂದ ಕೂಡಿದ ಸಂಬಂಧಗಳೇ ಅವರ ಜೀವನಾಡಿಗಳಾಗಿದ್ದು, ಪರಸ್ಪರರು ನಂಬಿಕೆ, ವಿಶ್ವಾಸಗಳಿಂದ ವ್ಯವಹಾರ ಮಾಡುವ ಮನೋಭಾವನೆಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ತಾವು ಆರ್ಥಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಜೊತೆಗೆ ಸಂಘದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಸಹಕಾರ ನೀಡಬೇಕು ಎಂದರು. ಸಂಘದ ಅಧ್ಯಕ್ಷ ಲಿಂಗದೇವರು ಮಾತನಾಡಿ, ಸಂಘದ ಬೆಳವಣಿಗೆಗೆ ಎಲ್ಲರ ಸಹಕಾರ ಅತ್ಯಗತ್ಯ. ಸದಸ್ಯರು ಠೇವಣಿ ಮಾಡುವ ಮೂಲಕ ಸಂಘವನ್ನು ಪ್ರೋತ್ಸಾಹಿಸಬೇಕು. ಸಂಘದ ವತಿಯಿಂದ ಸಹಕಾರ ಪಡೆದವರು ಅಭಿವೃದ್ದಿಪಥದತ್ತ ಹೆಜ್ಜೆ ಹಾಕಿದ್ದು ಇದು ಸಂಘದ ಸಾರ್ಥಕತೆಗೆ ಸಾಕ್ಷಿಯಾಗಿದೆ. ಸಂಘದ ಅಭಿವೃದ್ದಿಗೆ ಪ್ರತ್ಯಕ್ಷ ಪರೋಕ್ಷವಾಗಿ ಶ್ರಮಿಸುತ್ತಿರುವವರ ಪರಿಶ್ರಮದಿಂದ ಸಂಘ ಲಾಭದಾಯಕವಾಗಿ ಬೆಳೆಯುತ್ತಿದೆ. ನಿರ್ದೇಶಕರು ಸಹ ಸಂಘದ ಅಭಿವೃದ್ದಿಗೆ ಸ್ಪಂದಿಸುತ್ತಿದ್ದು ಮುಂದಿನ ದಿನಗಳಲ್ಲಿ ಸಂಘವನ್ನು ಮತ್ತಷ್ಟು ಸದೃಢಗೊಳಿಸಲಾಗುವುದು ಎಂದರು. ತೇಜಮೂರ್ತಿ, ಎಂ. ನಿಜಗುಣ, ಎಸ್. ಜಗದೀಶ್, ಡಾ. ಕೆ.ಸಿ. ಜಗದೀಶಪ್ಪ, ಜಿ.ಎಸ್. ನಿಜಗುಣ, .ಎಸ್. ಮರುಳಸಿದ್ದಸ್ವಾಮಿ, ತೋಂಟರಾಧ್ಯ, ವೀರಭದ್ರಸ್ವಾಮಿ, ನೀಲಕಂಠಸ್ವಾಮಿ, ಮೋಹನ್‌ಕುಮಾರ್, ಟಿ.ಆರ್. ತೇಜಮೂರ್ತಿ, ವೀಣಾ, ವೀಣಾ ಬಸವರಾಜು, ಅಪ್ಪೇಗೌಡಸ್ವಾಮಿ, ಮಂಜುನಾಥಸ್ವಾಮಿ, ಬೋರೇಗೌಡ, ಎಂ.ಆರ್. ಶಿವಸ್ವಾಮಿ, ಮಹಲಿಂಗಪ್ಪ, ಲೆಕ್ಕ ಪರಿಶೋಧಕ ಚಿದಾನಂದಸ್ವಾಮಿ ಮತ್ತಿತರರಿದ್ದರು.