ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಸಮಾಜ ಕಟ್ಟುವ ಶಿಕ್ಷಕರು ಪ್ರಾತಃಸ್ಮರಣೀಯರು, ಇಂತಹ ಪವಿತ್ರ ವೃತ್ತಿಯಲ್ಲಿ ಸಿಗುವ ಸಂತೋಷ, ಆತ್ಮತೃಪ್ತಿ ಬೇರಾವ ವೃತ್ತಿಯಲ್ಲೂ ಸಿಗದು ಅಂತಹ ಶಿಕ್ಷಕರ ಹಿತ ಕಾಯುವ ಅಧಿಕಾರಿಯಾಗಿ ಸಲ್ಲಿಸಿದ ಸೇವೆ ಆತ್ಮತೃಪ್ತಿ ತಂದಿದ್ದು, ಈ ಘನತೆ ಉಳಿಸಿಕೊಳ್ಳಲು ಗುರುವೃಂದ ಬದ್ದತೆಯಿಂದ ಕೆಲಸ ಮಾಡಬೇಕು ಎಂದು ಶನಿವಾರ ನಿವೃತ್ತರಾದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್.ಕನ್ನಯ್ಯ ತಿಳಿಸಿದರು.ನಗರದ ಸ್ಕೌಟ್ಸ್‌ಭವನದಲ್ಲಿ ವಿವಿಧ ಸರ್ಕಾರಿ, ಅನುದಾನಿತ ಶಿಕ್ಷಕರ ಸಂಘಟನೆಗಳು, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ತಮ್ಮ ಹಳೆ ವಿದ್ಯಾರ್ಥಿಗಳು, ಖಾಸಗಿ ಶಾಲೆಗಳ ಸಂಘಟನೆಗಳು ನೀಡಿದ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದರು.ಓದಿಗೆ ಅಣ್ಣ ಕಾರಣ: ತಾವೂ ಒಂದು ಬಡಕುಟುಂಬದಿಂದ ಬಂದಿದ್ದು, ತಂದೆಯನ್ನು ಕಳೆದುಕೊಂಡ ನಂತರ ತನ್ನ ಅಣ್ಣನೇ ತಂದೆಯಾಗಿ ತನ್ನ ಈ ಸಾಧನೆಗೆ ನೆರವಾಗಿದ್ದನ್ನು ಸ್ಮರಿಸಿದ ಅವರು, ನನಗೆ ಬೆಂಗಳೂರು ಜನ್ಮಭೂಮಿಯಾಗಿದ್ದರೂ ನನ್ನ ೨೫ ವರ್ಷಗಳ ಸೇವೆ ನೀಡಿದ ಕೋಲಾರ ನನ್ನ ಕರ್ಮಭೂಮಿಯಾಗಿದೆ ಮತ್ತು ಇದು ನನ್ನ ಪುಣ್ಯಭೂಮಿಯೂ ಹೌದು ಎಂದ ಭಾವುಕರಾದರು.
ಎಲ್ಲ ಶಾಲೆಗಳಿಗೆ ಇ ಖಾತಾತಾಲ್ಲೂಕಿನ ಎಲ್ಲಾ ಶಾಲೆಗಳಿಗೂ ಇ-ಖಾತಾ ಮಾಡಿಸುವಲ್ಲಿ ಡಿಸಿಯವರ ಮಾರ್ಗದರ್ಶನದಲ್ಲಿ ಯಶಸ್ಸು ಸಾಧಿಸಿದ್ದೇವೆ, ಈ ಕಾರ್ಯ ತಮಗೆ ಹೆಚ್ಚಿನ ಸಂತಸ ತಂದಿದೆ ಎಂದರು. ಕನ್ನಯ್ಯ ಅರೊಂದಿಗೆ ಪತ್ನಿ ನಸ್ರೀನ್ ತಾಜ್ ಅವರನ್ನೂ ಸನ್ಮಾನಿಸಲಾಯಿತು. ಕ್ಯಾಲನೂರಿನ ಕೆಪಿಎಸ್ ಶಾಲಾ ಮಕ್ಕಳು ನಿವೃತ್ತರಾಗುತ್ತಿರುವ ಬಿಇಒ ಕನ್ನಯ್ಯ ಅವರನ್ನು ಆಧರಿಸಿ ನಡೆಸಿಕೊಟ್ಟ ವಿಶೇಷ ನೃತ್ಯ ಮನಸೂರೆಗೊಂಡಿತು. .
ಕಾರ್ಯಕ್ರಮದಲ್ಲಿ ಪ್ರಭಾರ ಡಿವೈಎಸ್‌ಪಿ ರವಿಕುಮಾರ್, ನಿವೃತ್ತ ಪಿಯು ಡಿಸಿ ರಾಮಚಂದ್ರಪ್ಪ, ಬಿಸಿಯೂಟ ಜಿಲ್ಲಾ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ, ಸಹಾಯಕ ನಿರ್ದೇಶಕ ಸುಬ್ರಮಣಿ, ಬಿಇಒ ಗಂಗರಾಮಯ್ಯ, ನಿವೃತ್ತ ಇಒ ವೆಂಕಟರಾಮರೆಡ್ಡಿ, ಬಿಆರ್‌ಸಿ ಪ್ರವೀಣ್, ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಎ.ಸದಾನಂದ್, ಮತ್ತಿತರರು ಉಪಸ್ಥಿತರಿದ್ದರು.