ಉದ್ಯಮಶೀಲ ಪ್ರವೃತ್ತಿಯ ಬಣಜಿಗರ ಸೇವೆಗೆ ಬದ್ಧ -ಆನಂದಸ್ವಾಮಿ ಗಡ್ಡದೇವರಮಠ

| Published : Apr 28 2024, 01:22 AM IST

ಉದ್ಯಮಶೀಲ ಪ್ರವೃತ್ತಿಯ ಬಣಜಿಗರ ಸೇವೆಗೆ ಬದ್ಧ -ಆನಂದಸ್ವಾಮಿ ಗಡ್ಡದೇವರಮಠ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿ ದಿಸೆಯಿಂದಲೂ ರಾಜಕೀಯ ರಂಗ ಪ್ರವೇಶಿಸಿರುವ ನನಗೆ ಉದ್ಯಮಿಗಳ ಸವಾಲುಗಳು ಮತ್ತು ಸಾಧ್ಯತೆಗಳ ಅರಿವಿದೆ. ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಚುನಾಯಿಸಿದರೆ ತಮ್ಮ ಸೇವೆಗೆ ಬದ್ಧನಾಗಿರುವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಭರವಸೆ ನೀಡಿದರು.

ಹಾವೇರಿ: ವಿದ್ಯಾರ್ಥಿ ದಿಸೆಯಿಂದಲೂ ರಾಜಕೀಯ ರಂಗ ಪ್ರವೇಶಿಸಿರುವ ನನಗೆ ಉದ್ಯಮಿಗಳ ಸವಾಲುಗಳು ಮತ್ತು ಸಾಧ್ಯತೆಗಳ ಅರಿವಿದೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಚುನಾಯಿಸಿದರೆ ತಮ್ಮ ಸೇವೆಗೆ ಬದ್ಧನಾಗಿರುವೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಭರವಸೆ ನೀಡಿದರು.ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಬಣಜಿಗರ ಸಮಾವೇಶದಲ್ಲಿ ಅವರು ಮಾತನಾಡಿದರು.ಉದ್ಯಮಶೀಲ ಪ್ರವೃತ್ತಿಯ ಬಣಜಿಗ ಬಾಂಧವರು ಪ್ರಜ್ಞಾವಂತರು ಹಾಗೂ ಸಾಹಸ ಮನೋಭಾವದವರು. ವ್ಯಾಪಾರ ವಹಿವಾಟಿನಲ್ಲಿ ಆಸಕ್ತಿ ಉಳ್ಳವರು. ನಾನೂ ಸಹಿತ ಆಟೋಮೊಬೈಲ್ ಉದ್ಯಮಿ ಆಗಿರುವ ಕಾರಣಕ್ಕೆ ಉದ್ಯಮಿಗಳ ಸಂಕಷ್ಟಗಳನ್ನು ಸಮೀಪದಿಂದ ಗ್ರಹಿಸಿರುವೆ. ತಮ್ಮ ಜೊತೆಗೆ ಮುನ್ನಡೆಯಲು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನನಗೆ ಆಶೀರ್ವದಿಸಿದರೆ ಸದಾ ತಮ್ಮ ಭಾವನೆಗಳಿಗೆ ಸ್ಪಂದಿಸುವೆ ಎಂದು ಹೇಳಿದರು.ಬಣಜಿಗ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಹೆಸರೂರ, ಚಂದ್ರಣ್ಣ ಶೆಟ್ಟರ್, ಸಿದ್ಧಲಿಂಗಪ್ಪ ಮಹಾರಾಜಪೇಟ್, ಅಜಿತ್ ಮಾಗಾವಿ, ಕಿರಣ ಕೊಳ್ಳಿ, ಗುರು ಅಂಗಡಿ, ಪ್ರಕಾಶ ಹಂದ್ರಾಳ, ಪರಸಣ್ಣ ಅಡಕಿ, ರಾಜಣ್ಣ ಕುಂಬಿ, ವಿಜಯಕುಮಾರ ಚಿನ್ನಿಕಟ್ಟಿ ಇತರರಿದ್ದರು.