ಜಂಟಿ ಅಧಿವೇಶನ ವೇಳೆ ಆಡಳಿತಾರೂಢ ಸರ್ಕಾರ ರಾಜ್ಯಪಾಲರ ಬಗ್ಗೆ ಅಗೌರವದಿಂದ ನಡೆದುಕೊಂಡಿದೆ. ಇದು ಕರ್ನಾಟಕ ವಿಧಾನ ಮಂಡಲದ ಶಿಸ್ತು ಹಾಗೂ ಪರಂಪರೆಗೆ ಧಕ್ಕೆ ತರುವ ರೀತಿ ಕಾಂಗ್ರೆಸ್ ಸರ್ಕಾರ ವರ್ತಿಸಿರುವುದು ಖಂಡನಾರ್ಹ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಜಂಟಿ ಅಧಿವೇಶನ ವೇಳೆ ಆಡಳಿತಾರೂಢ ಸರ್ಕಾರ ರಾಜ್ಯಪಾಲರ ಬಗ್ಗೆ ಅಗೌರವದಿಂದ ನಡೆದುಕೊಂಡಿದೆ. ಇದು ಕರ್ನಾಟಕ ವಿಧಾನ ಮಂಡಲದ ಶಿಸ್ತು ಹಾಗೂ ಪರಂಪರೆಗೆ ಧಕ್ಕೆ ತರುವ ರೀತಿ ಕಾಂಗ್ರೆಸ್ ಸರ್ಕಾರ ವರ್ತಿಸಿರುವುದು ಖಂಡನಾರ್ಹ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಬುಧವಾರ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಬಿಜೆಪಿ ವತಿಯಿಂದ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ನೇತೃತ್ವವಹಿಸಿ ಅವರು ಮಾತನಾಡಿದರು. ರಾಜ್ಯಪಾಲರ ಭಾಷಣ ಉದ್ದೇಶ ಸರ್ಕಾರದ ಕಾರ್ಯವೈಖರಿ ಅವಲೋಕನ, ಯೋಜನೆಗಳ ಪ್ರಸ್ತಾಪ, ಅಡಳಿತದ ಮುನ್ನೋಟ ಮತ್ತು ಹಿನ್ನೋಟ. ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರವನ್ನು ದೂಷಣೆ ಮಾಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂದರು.
ಅಬಕಾರಿ ಇಲಾಖೆಯಲ್ಲಿ ₹6 ಕೋಟಿಗೂ ಅಧಿಕ ಮೊತ್ತದ ಹಗರಣ ನಡೆದಿದೆ. ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ನೈತಿಕತೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು. ವಿಬಿ-ಜಿ, ರಾಮ್ ಜಿ, ಯೋಜನೆ ಬಡವರ ದೃಷ್ಠಿಯಿಂದ ಉತ್ತಮ ಯೋಜನೆ. ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈ ಹಿಂದೆ ಇದ್ದ 100 ಮಾನವ ದಿನಗಳ ಬದಲಿಗೆ 125 ಮಾನವ ದಿನಗಳನ್ನಾಗಿಸಿದೆ. ಕೂಲಿ ಹಣ ₹174 ಇದ್ದದ್ದು ₹379 ಮಾಡಲಾಗಿದೆ ಎಂದರು.ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಕಾಂಗ್ರೇಸ್ ಸರ್ಕಾರ ಕೃಷಿ ಪರಿಕರ ನೋಂದಣೆ, ಮುದ್ರಾಂಕ ಶುಲ್ಕ ಹಾಗೂ ಇನ್ನಿತರೆ ಸರ್ಕಾರಿ ಶುಲ್ಖಗಳನ್ನು ಮತ್ತು ದೈನಂದಿನ ದಿನ ವಸ್ತುಗಳ ಬೆಲೆ ಏರಿಸಿರುವುದೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳದೇ ಕೇವಲ ಕುರ್ಚಿ ಕದಕನದಲ್ಲಿ ಇಡೀ ಸರ್ಕಾರ ಹಾಗೂ ಪಕ್ಷದ ಮಖಂಡರು ಮುಳುಗಿಹೋಗಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನಾ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಬಿಜೆಪಿ ಮುಖಂಡರಾದ ಕೆ.ಪಿ. ಕುಬೇಂದ್ರಪ್ಪ,ಮಂಜುನಾಥ ನೆಲಹೊನ್ನೆ, ನ್ಯಾಮತಿ ರವಿಕುಮಾರ್, ತಾಲೂಕು ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ ಸುರೇಶ್, ಮಾರುತಿ ನಾಯ್ಕ, ಕುಮಾರ ಸ್ವಾಮಿ, ಮಂಜು ಇಂಚರ, ಬಡವಾಣೆ ರಂಗಪ್ಪ,ಪೇಟೆ ಪ್ರಶಾಂತ್, ರಘು, ಬೀರಪ್ಪ, ಕೆ.ವಿ. ಶ್ರೀಧರ, ಕೋಳಿ ಸತೀಶ್, ಹಿರೇಮಠದ ರಾಜು ಸೇರಿದಂತೆ ನೂರಾರು ಜನ ಮುಖಂಡರು, ಕಾರ್ಯಕರ್ತರು ಇದ್ದರು.- - -
-28ಎಚ್.ಎಲ್.ಐ1:ಹೊನ್ನಾಳಿ, ನ್ಯಾಮತಿ ತಾಲೂಕುಗಳ ಬಿಜೆಪಿ ಮುಖಂಡರು ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಬುಧವಾರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.