ಸಾರಾಂಶ
ಹಬ್ಬಕ್ಕಾಗಿ ಹೂವು, ಹಣ್ಣು, ತರಕಾರಿ, ದಿನಸಿ, ಸಿಹಿ ತಿನಿಸುಗಳ ಮಾರಾಟ ಇನ್ನಷ್ಟೇ ಆರಂಭವಾಗಬೇಕಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಸದ್ಯಕ್ಕೆ 58 ರು.ಗೆ ಮಾರಾಟವಾಗುತ್ತಿದ್ದರೆ, ಈರುಳ್ಳಿಗೆ 64 ರು. ಇದೆ. ಹಣ್ಣುಗಳ ಬೆಲೆಯೂ ಗಗನಕ್ಕೇರುವ ಎಲ್ಲ ಲಕ್ಷಣ ಕಾಣುತ್ತಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಬೆಳಕಿನ ಹಬ್ಬ ದೀಪಾವಳಿ ಆರಂಭವಾಗಲು ಇನ್ನೇನು ಮೂರೇ ದಿನ ಬಾಕಿ. ಅ.31ರಿಂದ ನ.2ರವರೆಗೆ ಸಂಭ್ರಮದ ದೀಪಾವಳಿ ಆಚರಣೆಗೆ ಈಗಾಗಲೇ ಮಂಗಳೂರು ನಗರ ಸೇರಿದಂತೆ ಕರಾವಳಿ ಸಜ್ಜಾಗಿದೆ.ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿ ವೈವಿಧ್ಯಮಯ ಗೂಡುದೀಪಗಳು, ಹಣತೆಗಳು ಕಂಗೊಳಿಸತೊಡಗಿವೆ. 50 ರು.ನಿಂದ ಹಿಡಿದು ಸಾವಿರಾರು ರು.ವರೆಗಿನ ಗೂಡುದೀಪಗಳು ಮಾರುಕಟ್ಟೆಗೆ ಬಂದಿವೆ.
ಇನ್ನು, ಹಣತೆಗಳಿಗೂ ಭರ್ಜರಿ ಡಿಮ್ಯಾಂಡ್ ತಂದುಕೊಡುವ ಹಬ್ಬ ಸದ್ಯಕ್ಕೆ ದೀಪಾವಳಿ ಮಾತ್ರ. ಸಾಂಪ್ರದಾಯಿಕ ಹಣತೆಗಳ ಜತೆಗೆ ವಿವಿಧ ಕುಸುರಿ ಕಲೆಗಳುಳ್ಳ ಹಣತೆಗಳೂ ಬಂದಿವೆ. ಹಬ್ಬಕ್ಕೆ ವಾರ ಇರುವಾಗಲೇ ಗೂಡುದೀಪ, ಹಣತೆಗಳ ಖರೀದಿ ಭರಾಟೆ ಜೋರಾಗಿದೆ.ಹಬ್ಬಕ್ಕಾಗಿ ಹೂವು, ಹಣ್ಣು, ತರಕಾರಿ, ದಿನಸಿ, ಸಿಹಿ ತಿನಿಸುಗಳ ಮಾರಾಟ ಇನ್ನಷ್ಟೇ ಆರಂಭವಾಗಬೇಕಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಸದ್ಯಕ್ಕೆ 58 ರು.ಗೆ ಮಾರಾಟವಾಗುತ್ತಿದ್ದರೆ, ಈರುಳ್ಳಿಗೆ 64 ರು. ಇದೆ. ಹಣ್ಣುಗಳ ಬೆಲೆಯೂ ಗಗನಕ್ಕೇರುವ ಎಲ್ಲ ಲಕ್ಷಣ ಕಾಣುತ್ತಿದೆ.