- 65,608 ರೈತರಿಂದ ಹವಾಮಾನ ಆಧಾರಿತ ಬೆಳೆ ವಿಮೆ । ಫಸಲ್ ಭೀಮಾ ಯೋಜನೆಯಡಿ 36,540 ರೈತರು
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಮುಂಗಾರು ಅವಧಿಯಲ್ಲಿ ಭಾರೀ ಮಳೆ ಕೊರತೆ ಹಾಗೂ ಕೃಷಿ, ತೋಟಗಾರಿಕೆ ಇಲಾಖೆ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾಡಳಿತ ಜಾಗೃತಿ ಮೂಡಿಸಿದ ಹಿನ್ನೆಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ರೈತರು ಪ್ರಸ್ತುತ ವರ್ಷ ಬೆಳೆ ವಿಮೆ ಮಾಡಿಸಿಕೊಂಡಿದ್ದಾರೆ.ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದಂತೆ 65,608 ರೈತರು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿಸಿಕೊಂಡರೆ, ಭತ್ತ, ರಾಗಿ ಸೇರಿದಂತೆ ಕೃಷಿ ಬೆಳೆಗಳಿಗೆ ಸಂಬಂಧಿಸಿದಂತೆ 36,540 ರೈತರು ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಕಂತು ಪಾವತಿಸಿದ್ದು, ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಮಟ್ಟದ ನೋಂದಣಿ ಆಗಿದೆ ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮಾಹಿತಿ ನೀಡಿದ್ದಾರೆ.
ಮಳೆ ಅಭಾವ ಹಾಗೂ ಸಂಕಷ್ಟದ ವಾತಾವರಣದ ನಡುವೆಯೂ ರೈತರು ಭದ್ರತೆಗೆ ದೊಡ್ಡ ಪ್ರಮಾಣದಲ್ಲಿ ವಿಮೆಯತ್ತ ಒಲವು ತೋರಿದ್ದಾರೆ.ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ನೋಂದಣಿ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. 2020-21ರಲ್ಲಿ ಕೇವಲ 3,806 ರೈತರು ಬೆಳೆ ವಿಮೆ ಮಾಡಿಸಿದ್ದರು. ಇನ್ನು 2021-22ರಲ್ಲಿ 3,150, 2022-23ರಲ್ಲಿ 10,636, 2023-24ರಲ್ಲಿ 6,707, 2024-25ರಲ್ಲಿ 10,579 ಹಾಗೂ 2025-26ನೇ ಸಾಲಿನಲ್ಲಿ 6,551 ರೈತರು ನೋಂದಾಯಿಸಿಕೊಂಡಿದ್ದರು. ಆದರೆ ಪ್ರಸ್ತುತ 2026-27ನೇ ಸಾಲಿನಲ್ಲಿ ಸಾರ್ವಕಾಲಿಕ ದಾಖಲೆ ಪ್ರಮಾಣದಲ್ಲಿ ರೈತರು ವಿಮೆ ನೋಂದಣಿ ಮಾಡಿಕೊಂಡಿದ್ದಾರೆ
ಈ ಪೈಕಿ ರಾಗಿ ಬೆಳೆಗೆ ಅತಿ ಹೆಚ್ಚು ಅಂದರೆ 31,415 ರೈತರು ನೋಂದಾಯಿಸಿದ್ದಾರೆ. ಉಳಿದಂತೆ ಭತ್ತಕ್ಕೆ 2,360, ನೆಲ ಗಡಲೆಗೆ 688, ಮುಸುಕಿನ ಜೋಳಕ್ಕೆ 683, ಈರುಳ್ಳಿಗೆ 636, ಹೆಸರು ಬೆಳೆಗೆ 350, ಸಾವೆಗೆ 169, ಹತ್ತಿಗೆ 73, ಟೊಮ್ಯಾಟೊಗೆ 64, ಕೆಂಪು ಮೆಣಸಿನಕಾಯಿಗೆ 59, ಆಲೂಗಡ್ಡೆಗೆ 38 ಹಾಗೂ ಜೋಳಕ್ಕೆ 5 ರೈತರು ವಿಮೆ ಮಾಡಿಸಿದ್ದಾರೆ.
ಅಡಕೆ, ಕರಿಮೆಣಸು, ಹಸಿರುಮೆಣಸಿನಕಾಯಿ, ದಾಳಿಂಬೆ ಮತ್ತು ಮಾವು ಬೆಳೆಗೆ ಮರುವಿನ್ಯಾಸಗೊಳಿಸಲಾದ ವಿಮೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಹವಾಮಾನ ವೈಪರೀತ್ಯದಿಂದ ತೋಟಗಾರಿಕೆ ಬೆಳೆಗಳ ಪೈಕಿ ಅಡಕೆ ಬೆಳೆದ ರೈತರು ೪೮,೩೨೫ ಮಂದಿ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ. ಇದೇ ವೇಳೆ ಕರಿಮೆಣಸಿಗೆ ೧೭,೧೪೮ ರೈತರು, ದಾಳಿಂಬೆ ಬೆಳೆಗೆ ೬೭ ಮಂದಿ, ಮಾವು ಬೆಳೆಗೆ ೩೯ ಮಂದಿ ಹಾಗೂ ಹಸಿರುಮೆಣಸು ಬೆಳೆದ ೨೯ ರೈತರು ವಿಮೆಗಾಗಿ ನೋಂದಾಯಿಸಿಕೊಂಡಿದ್ದಾರೆ.೨೦೧೬-೧೭ ರಿಂದ ೨೦೨೬-೨೭ರವರೆಗೆ ಆಯಾ ವರ್ಷದಲ್ಲಿ ಬೆಳೆವಿಮೆಗೆ ನೋಂದಾಯಿಸಿದ ಒಟ್ಟು ರೈತರ ಸಂಖ್ಯೆ ಕೆಳಕಂಡಂತಿದೆ.
ಈ ಹಿಂದಿನ ೨೦೧೬-೧೭ರಲ್ಲಿ ೨೨,೩೫೮, ೨೦೧೭-೧೮ ರಲ್ಲಿ ೧೧,೨೯೩, ೨೦೧೮-೧೯ ರಲ್ಲಿ ೮,೯೨೬, ೨೦೧೦-೨೦ ರಲ್ಲಿ ೧೦,೮೫೨, ೨೦೨೦-೨೧ ರಲ್ಲಿ ೧೮,೫೮೪, ೨೦೨೧-೨೨ ರಲ್ಲಿ ೩೧,೬೧೬, ೨೦೨೨-೨೩ ರಲ್ಲಿ ೨೬,೧೮೬, ೨೦೨೩-೨೪ರಲ್ಲಿ ೨೨,೧೭೧, ೨೦೨೪-೨೫ ರಲ್ಲಿ ೩೯,೫೦೯ ಹಾಗೂ ೨೦೨೫-೨೬ ರಲ್ಲಿ ೪೪,೯೦೫ ಮಂದಿ ಬೆಳೆವಿಮೆಗೆ ನೋಂದಾಯಿಸಿಕೊಂಡಿದ್ದರು....ಬಾಕ್ಸ್...ಶೇ. 30 ರಷ್ಟು ಕೊರತೆಜಿಲ್ಲೆಯಲ್ಲಿ ವಾಡಿಕೆ ಮಳೆ 1,345.7 ಮಿ.ಮೀ ವಾಡಿಕೆ ಮಳೆಯಾಗಿದೆ. ಆದರೆ, ಕೇವಲ 945.5 ಮಿ.ಮೀ ಮಳೆಯಾಗಿದ್ದು, ಶೇ. 30 ರಷ್ಟು ಕೊರತೆಯಾಗಿದೆ. ಇದರಿಂದ ಬಿತ್ತನೆ ಗುರಿ 97,045 ಹೆಕ್ಟೇರ್‌ಗೆ ಎದುರಾಗಿ ಕೇವಲ 21,960 ಹೆಕ್ಟೇರ್ (ಶೇ.23) ಮಾತ್ರ ಬಿತ್ತನೆಯಾಗಿದೆ. ಕಳೆದ ವರ್ಷ ಈ ಸಮಯಕ್ಕೆ ಶೇ.65 ರಷ್ಟು ಸಾಧನೆಯಾಗಿತ್ತು. ಮುಂಬರುವ ದಿನಗಳಲ್ಲಿ ಮುಸುಕಿನ ಜೋಳ, ಭತ್ತ, ರಾಗಿ ಹಾಗೂ ಹುರುಳಿ ಬೆಳೆಗಳನ್ನು ಬಿತ್ತನೆ ಮಾಡಲು ಅವಕಾಶವಿದ್ದು, ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.-- ಬಾಕ್ಸ್ --
230 ಮಳೆ ಮಾಪನ ಕೇಂದ್ರ ಕಾರ್ಯಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 242 ಮಳೆಮಾಪನ ಕೇಂದ್ರಗಳಿದ್ದು, ಈ ಪೈಕಿ ಸದ್ಯ 230 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. 12 ಕೇಂದ್ರ ದುರಸ್ತಿ ಬಾಕಿ ಇದೆ...ಕೋಟ್..
ಮಳೆಗಾಲ ಆರಂಭಕ್ಕೂ ಮುನ್ನ ಸುಮಾರು 50- 60 ಮಳೆ ಮಾಪನ ಕೇಂದ್ರ ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ದುರಸ್ತಿ ಪಡಿಸುವ ಏಜೆನ್ಸಿಯೊಂದಿಗೆ ನಿರಂತರವಾಗಿ ಚರ್ಚೆ ಮಾಡಿದರಿಂದ 230 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದು ಬೆಳೆ ವಿಮೆ ಪರಿಹಾರ ವಿತರಣೆಗೆ ಸಹಕಾರಿಯಾಗಲಿದೆ.ಭನ್ವರ್ ಸಿಂಗ್ ಮೀನಾ ಜಿಲ್ಲಾಧಿಕಾರಿ, ಚಿಕ್ಕಮಗಳೂರು
