ಸಾರಾಂಶ
ದಲಿತ ಹಾಗೂ ವಿವಿಧ ಸಂಘಟನೆಗಳ ಪರ ಮುಖಂಡರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್ ಅಂಬೇಡ್ಕರ್ ಅವರ ಬಗ್ಗೆ ನೀಡಿರುವ ಲಘು ಹೇಳಿಕೆಯನ್ನು ಖಂಡಿಸಿ ಶುಕ್ರವಾರ ಕೊಳ್ಳೇಗಾಲದಲ್ಲಿ ಪ್ರತಿಭಟನೆ ಮೂಲಕ ಆಕ್ರೋಶ ಹೊರಹಾಕಲಾಯಿತು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆ ಬಳಿ ಜಮಾವಣೆಗೊಂಡ ನೂರಾರು ದಲಿತ ಹಾಗೂ ವಿವಿಧ ಸಂಘಟನೆಗಳ ಪರ ಮುಖಂಡರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್ ಅಂಬೇಡ್ಕರ್ ಅವರ ಬಗ್ಗೆ ನೀಡಿರುವ ಲಘು ಹೇಳಿಕೆಯನ್ನು ಖಂಡಿಸಿ ಶುಕ್ರವಾರ ಪ್ರತಿಭಟನೆ ಮೂಲಕ ಆಕ್ರೋಶ ಹೊರಹಾಕಲಾಯಿತು.ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್‌ವಾದ ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ಆಯೋಜನೆಗೊಂಡಿದ್ದ ಬೃಹತ್ ಪ್ರತಿಭಟನೆ ವೇಳೆ ಜಮಾವಣೆಗೊಂಡ ಪ್ರತಿಭಟನಾಕಾರರು ಅಂಬೇಡ್ಕರ್ ಪ್ರತಿಮೆ ಬಳಿ ಅಮಿತ್ ಶಾ ವಿರುದ್ಧ ಧಿಕ್ಕಾರದ ಘೋಷಣೆ ಕೂಗುವ ಜೊತೆ ತಮ್ಮ ಆಕ್ರೋಶ ಹೊರಹಾಕಿದರು. ಅಲ್ಲದೆ ಅಮಿತ್ ಶಾ ಚಿತ್ರಕ್ಕೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಡಾ.ಅಂಬೇಡ್ಕರ್ ಅವರನ್ನು ಟೀಕಿಸುವ ಹಕ್ಕು ಅಮಿತ್ ಶಾ ಅವರಿಗಿಲ್ಲ, ಅವರೊಬ್ಬ ವಿಶ್ವರತ್ನ, ದೀನ ದಲಿತರ ಆಶಾಕಿರಣ ಅಂತಹ ನಾಯಕರನ್ನು ಟೀಕಿಸುವ ಅಮಿತಾ ಶಾ ವಿರುದ್ಧ ಕ್ರಮ ಆಗಬೇಕು, ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಬಸವರಾಜು ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಡಿಎಸ್ಎಸ್ ಮೈಸೂರು ವಿಭಾಗೀಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು, ಸುರೇಶ್, ಓಲೆ ಮಹದೇವ, ಗುತ್ತಿಗೆದಾರ ಪುಟ್ಟಸ್ವಾಮಿ, ಪುಟ್ಟರಾಜು, ಸಾಹಿತಿ ಶಂಕನಪುರ ಮಹದೇವ, ಜಿಪಂ ಮಾಜಿ ಸದಸ್ಯ ಕಮಲ್, ದಲಿತ ಮುಖಂಡರಾದ ಸಿದ್ಧಾರ್ಥ್, ಕೃಷ್ಣರಾಜ್, ಪಾಪಣ್ಣ, ಎಂ.ನಟರಾಜು ಮಾಳಿಗೆ, ನಾಗರಾಜು, ಮುಳ್ಳೂರು ಮಂಜು, ಚಿನ್ನಸ್ವಾಮಿ ಮಾಳಿಗೆ, ನಿಂಪು ಸುರೇಶ್, ಪೂಜಯ್ಯ, ಚಾಮರಾಜು, ಇನಾಯತ್, ಮನ್ಸೂರ್ ಪಾಷ ರೈತ ಸಂಘದ ಗೌಡೇಗೌಡ, ಸೆಮೀಷರೀಪ್, ವೀರ, ಮಾದೇಶ, ನಾಗರಾಜು ಇನ್ನಿತರರಿದ್ದರು.