ಸಾರಾಂಶ
ಕನ್ನಡಪ್ರಭ ವಾರ್ತೆ ಪೆರ್ನಾಜೆ
ಕಲಾಕುಂಜ ಸಾಂಸ್ಕೃತಿಕ ಸಂಸ್ಥೆಯು ದಾವಣಗೆರೆಯ ಚನ್ನಗಿರಿ ವಿರೂಪಾಕ್ಷ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ 70ನೇ ಕನ್ನಡ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಕಲಾ ನಿರ್ದೇಶಕ ಕುಮಾರ್ ಪೆರ್ನಾಜೆ ಅವರಿಗೆ ಸರಸ್ವತಿ ಸಾಧಕ ಸಿರಿ ರಾಷ್ಟ್ರ ಪ್ರಶಸ್ತಿ ಪ್ರದಾನಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷ ನಾಗರಾಜ್ ಬೈರಿ, ಸಾಧನೆ ಮಾಡುವುದಕ್ಕೆ ಬಹಳಷ್ಟು ಶ್ರಮ, ತಾಳ್ಮೆ, ಶಕ್ತಿ ಬೇಕು. ಅಷ್ಟು ಸುಲಭವಾಗಿ ಗುರುತಿಸಿಕೊಳ್ಳುವುದು ಸಾಧ್ಯವಿಲ್ಲ. ನಿಮ್ಮಗಳ ಸಾಧನೆ ಇನ್ನೊಬ್ಬರಿಗೆ ಸ್ಫೂರ್ತಿ ಆಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಸಂಸ್ಥಾಪಕ ಗಣೇಶ ಶೆಣೈ ಸಾಲಿಗ್ರಾಮ ಪ್ರಶಸ್ತಿ ಪ್ರದಾನ ಮಾಡಿದರು.ಆರಂಭದಲ್ಲಿ ಸಂಸ್ಥೆಯ ಮುತ್ತೈದೆಯರು ಸರಸ್ವತಿ ಸಾಧಕ ಸಿರಿ ರಾಷ್ಟ್ರ ಪ್ರಶಸ್ತಿಗೆ ಸರ್ವರಿಗೂ ಸುಸ್ವಾಗತ ಮಾಡಿ, ಕನ್ನಡ ತಿಲಕವನ್ನು ಇಟ್ಟು, ಕನ್ನಡ ಕಂಕಣ ಕಟ್ಟಿ, ಕನ್ನಡ ಆರತಿ ಬೆಳಗಿ, ಪುಷ್ಪವೃಷ್ಠಿಯೊಂದಿಗೆ ಗೌರವಿಸಿದರು. ತದನಂತರ ಕನ್ನಡ ಸಿರಿ ಪೇಟ, ಸನ್ಮಾನ ಪತ್ರ, ಚಿನ್ನದ ಲೇಪನದ ಪದಕ, ಶಾಲು, ಹಾರ, ಸರಸ್ವತಿ ದೇವಿಯ ಸ್ಮರಣಿಕೆ ನೀಡಿ ಗೌರವಿಸಿದರು.ಮುಖ್ಯ ಅತಿಥಿಗಳಾಗಿದ್ದ ನಾಗೇಶ್ ಕಿಣಿ, ಡಾ.ನ. ಗಂಗಾಧರಪ್ಪ, ನಾಗರತ್ನ ಎಸ್. ಶೆಟ್ಟಿ, ಸಂಗೀತ ಪ್ರಸನ್ನ, ಆಶಾ ಅಡಿಗ ಆಚಾರ್, ಜ್ಯೋತಿ ಗಣೇಶ್ ಶೆಣೈ, ಸರಸ್ವತಿ ದಾಸಪ್ಪ ಶೆಣೈ, ಎಚ್.ಮಂಜುನಾಥ್, ರಾಘವೇಂದ್ರ ಶೆಣೈ, ಕೆ.ಸಿ. ಉಮೇಶ್, ಸೌಮ್ಯ ಪೆರ್ನಾಜೆ, ಸವಿತಾ ಕೋಡಂದೂರ್ ಮತ್ತಿತರರು ಉಪಸ್ಥಿತರಿದ್ದರು.ಕುಮಾರ್ ಪೆರ್ನಾಜೆ, ತಮ್ಮ ವಿಶಿಷ್ಟ ಶೈಲಿಯ ಬರಹ ಲೇಖನಗಳಿಂದಲೇ ಹೆಸರಾದವರು. ಶಿವಮೊಗ್ಗದಲ್ಲಿನ ಕೃಷಿ ಮೇಳದಲ್ಲಿ. ದ.ಕ. ಜಿಲ್ಲೆಯ ಉತ್ತಮ ಕೃಷಿಕ ಪ್ರಶಸ್ತಿ ಗಳಿಸಿದವರು. ಹವ್ಯಕ ರತ್ನ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕಲಾ ಪೋಷಕ, ಕಲಾ ನಿರ್ದೇಶಕ, ಶಿಕ್ಷಣ ಪ್ರೇಮಿಯಾಗಿ ಸಾಮಾಜಿಕವಾಗಿ ಗುರುತಿಸಿ ಕೊಂಡವರು.