ಜು.೪ರಂದು ರಸ್ತೆ ಚಳವಳಿಗೆ ತೀರ್ಮಾನ

| Published : Jun 29 2025, 01:33 AM IST

ಸಾರಾಂಶ

ಸತ್ತೇಗಾಲ ಬೈಪಾಸ್ ರಸ್ತೆಯಲ್ಲಿ ಸುರಕ್ಷತೆ ಇಲ್ಲದ ಕಾರಣ ಅಪಘಾತಗಳು ಸಂಭವಿಸುತ್ತಿದ್ದು ಈ ಕುರಿತು ಸತ್ತೇಗಾಲ ಜಿಪಂ ವ್ಯಾಪ್ತಿಯ ಮುಖಂಡರು, ಗ್ರಾಮಸ್ಥರು ಸಭೆ ಸೇರಿ ಜು.4ರಂದು ಪ್ರತಿಭಟನೆ ನಡೆಸಲು ನಿರ್ಣಯ ಕೈಗೊಂಡರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಸತ್ತೇಗಾಲ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ಜಿಲ್ಲಾಡಳಿತ, ಸರಿಯಾದ ರೀತಿ ಸುರಕ್ಷತೆಗೆ ಕ್ರಮ ಕೈಗೊಳ್ಳದ ಹಿನ್ನೆಲೆ ಈ ರಸ್ತೆಯಲ್ಲಿ ಸಾವು-ನೋವುಗಳು ಸಂಭವಿಸುತ್ತಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಶುಕ್ರವಾರವೂ ಸಹಾ ಈ ರಸ್ತೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದು ಇದನ್ನು ಖಂಡಿಸಿ ವಾಹನ ಸವಾರರ ಸುರಕ್ಷತೆಗೆ ಆಗ್ರಹಿಸಿ ಜು.೪ರಂದು ರಸ್ತೆ ಚಳವಳಿ ಹಮ್ಮಿಕೊಳ್ಳಲು ಗ್ರಾಮಸ್ಥರು ಕರೆಯಲಾಗಿದ್ದ ಸಂಘಟನೆಗಳು, ರೈತರ ಮುಖಂಡರ ಸಮ್ಮುಖದಲ್ಲಿ ತೀಮಾನ ಕೈಗೊಂಡಿದ್ದಾರೆ. ತಾಲೂಕಿನ ಸತ್ತೇಗಾಲ ಮತ್ತು ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಹೊರವಲಯದ ಹೆದ್ದಾರಿಯ ಬೈಪಾಸ್ ರಸ್ತೆಯ ಮೂಲಕ ರಸ್ತೆ ಸಾರಿಗೆ ಬಸ್ಸುಗಳು ತೆರಳುತ್ತಿದ್ದು, ಸಾರ್ವಜನಿಕರಿಗೆ ಬಸ್ಸುಗಳು ಸಂಚರಿಸದೇ ಸಮಸ್ಯೆ ಉಂಟಾಗುತ್ತಿದ್ದು ಪ್ರಯಾಣಿಕರು ಪರಿತಪಿಸುತ್ತಿದ್ದಾರೆ.

ಬೈಪಾಸ್ ರಸ್ತೆಯಲ್ಲಿ ವಾಹನಗಳ ಚಾಲಕರು ಅತೀ ವೇಗವಾಗಿ ಚಾಲನೆ ಮಾಡುವುದರಿಂದ ರಸ್ತೆಯಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ಮತ್ತು ವಾಹನ ಚಾಲಕರಿಗೆ ಸಾವು-ನೋವುಗಳು ಸಂಭವಿಸುತ್ತಿದ್ದು ಸತ್ತೇಗಾಲ, ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಗ್ರಾಮದ ಒಳಗಡೆ ಬಸ್ಸು ಸಂಚಾರ ಮಾಡಿಸುವಂತೆ ಹಾಗೂ ವಾಹನ ಚಾಲಕರು ಅತೀ ವೇಗವಾಗಿ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತಿವೆ.

ಹ್ಯಾಂಡ್‌ಪೋಸ್ಟ್ ಬೈಪಾಸ್ ಗ್ರಾಮದ ರೈತರು ಜಮೀನುಗಳಿಗೆ ತೆರಳುವ ರಸ್ತೆ ಸತ್ತೇಗಾಲದಿಂದ ಉಗನಿಯಾ ಗ್ರಾಮಕ್ಕೆ ತೆರಳುವ ರಸ್ತೆ ಕೊಳ್ಳೇಗಾಲ-ಸತ್ತೇಗಾಲ ಈ ರಸ್ತೆಗಳ ಮೇಲುಸೇತುವೆ ನಿರ್ಮಿಸಿ ಅಪಘಾತಗಳನ್ನು ತಡೆಯಿರಿ ಎಂದು ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿಗಳು ಹಾಗೂ ಡಿವೈಎಸ್‌ಪಿ, ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಸೈ, ರಸ್ತೆ ಸಾರಿಗೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಪತ್ರ ಸಲ್ಲಿಸಿದ್ದರೂ ಕ್ರಮಕೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

ಶುಕ್ರವಾರ ಸತ್ತೇಗಾಲದ ರೈತರಾದ ನಟರಾಜು, ಮಾಯಪ್ಪ ಅಲಿಯಾಸ್ ಮಹೇಶ್ ಇವರು ಬೈಕ್‌ನಲ್ಲಿ ತೆರಳುವಾಗ ಎದುರಿನಿಂದ

ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರೂ ಮೃತಪಟ್ಟಿದ್ದಾರೆ. ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ಕ್ರಮ ವಹಿಸಬೇಕು, ಜಿಲ್ಲಾಡಳಿತ ನಿರ್ಲಕ್ಷ್ಯ ಖಂಡಿಸಿ 4ರಂದು ಉಗ್ರ ಪ್ರತಿಭಟನೆ ನಡೆಸಲು ಮುಖಂಡರು ಒಕ್ಕೊರಲ ನಿರ್ಣಯ ಕೈಗೊಂಡರು. ಸರ್ಕಾರ ಮಧ್ಯೆ ಪ್ರವೇಶಿಸಿ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಿ ಮುಂದೆ ಸಾವು, ನೋವು ಸಂಭವಿಸಿದಂತೆ ಕ್ರಮ ವಹಿಸಬೇಕಂದು ಆಗ್ರಹಿಸಿದರು.

ಮುಖಂಡ ವರ್ಮ ಮಾತನಾಡಿ, ಬೈಪಾಸ್ ರಸ್ತೆಯಲ್ಲಿ ಪ್ರತಿದಿನ ಒಂದಲ್ಲಾ ಒಂದು ಅನಾಹುತ ಸಂಭವಿಸುತ್ತಿದ್ದು ಈ ಸ್ಥಳಗಳಲ್ಲಿ ಮೇಲುಸೇತುವೆ ನಿರ್ಮಿಸಬೇಕು, ಬೈಪಾಸ್‌ನಲ್ಲಿ ಸಾರಿಗೆ ಬಸ್ಸುಗಳು ತೆರಳದೆ ಸತ್ತೇಗಾಲ ಹಾಗೂ ಹ್ಯಾಂಡ್‌ಪೋಸ್ಟ್ ಗ್ರಾಮದೊಳಗೆ ಬಸ್ಸುಗಳು ಸಂಚಾರ ಮಾಡಿಸುವಲ್ಲಿ ಕ್ರಮ ವಹಿಸಬೇಕು, ಈ ಹಿನ್ನೆಲೆ ಜು.4 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಗ್ರಾಪಂ ಅಧ್ಯಕ್ಷ ಮಲ್ಲೇಶ್, ಸದಸ್ಯರಾದ ಗೋವಿಂದ, ನವೀನ್‌ಕುಮಾರ್, ಆರೋಗ್ಯಸ್ವಾಮಿ, ಡಾ.ಅಂಬೇಡ್ಕರ್ ಸತ್ಯಾದ್ರಿ ಯುವಕ ಸಂಘದ ಅಧ್ಯಕ್ಷ ಅವಿನಾಶ್, ಎಪಿಎಂಸಿ ಮಾಜಿ ಅಧ್ಯಕ್ಷ ಮಾದೇಗೌಡ, ತಾಪಂ ಮಾಜಿ ಸದಸ್ಯ ಅರುಣ್, ರೈತ ಸಂಘದ ಭಾಸ್ಕರ್, ಮಾದಪ್ಪ, ಕುಮಾರ್, ಚಾರ್ಲಿಸ್, ಮುಖಂಡರಾದ ಹ್ಯಾಂಡ್‌ಪೋಸ್ಟ್ ಮಾದೇವು, ರವಿಶಂಕರ್, ಟಿ.ಮಹದೇವಯ್ಯ, ನಾರಾಯಣಸ್ವಾಮಿ, ಕಾಂತರಾಜು, ನಂಜುಂಡಮೂರ್ತಿ, ಗುಲ್ಲಾ ಶಿವಣ್ಣೆಗೌಡ, ಬಸವಣ್ಣ, ಸಿದ್ದರಾಜು, ಯಡಕುರಿಯಾ ಬಸವರಾಜು, ನಂಜುಂಡ, ಶಾಂತರಾಜು, ಶಿವಲಿಂಗ, ಸತ್ತೇಗಾಲ ರಾಜಶೇಖರ್, ಸಂಜು, ಶಾಮಿಯಾನ ನಾಗರಾಜು, ಬಾಟಲ್‌ ನಾಗರಾಜು, ಶಿವನಸಮುದ್ರದ ಚಿಕ್ಕರಾವಳಯ್ಯ, ಕಾಳಯ್ಯ, ಚಂದ್ರಶೇಖರ್ , ನಾಗೇಂದ್ರ, ಪುಟ್ಟರಾಚ ಇನ್ನಿತರರಿದ್ದರು.