ಸಾರಾಂಶ
ಬೀದಿ ನಾಯಿಗಳ ಹಾವಳಿಗೆ ಸಿಲುಕ ಬೇಕಿದ್ದ ಜಿಂಕೆಯೊಂದು ಮನೆಯೊಳಗೆ ನುಗ್ಗಿ ಜೀವ ಉಳಿಸಿಕೊಂಡ ಪ್ರಸಂಗ ತಾಲೂಕಿನ ಕುರುಬರಹುಂಡಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ಗುಂಡ್ಲುಪೇಟೆ: ಬೀದಿ ನಾಯಿಗಳ ಹಾವಳಿಗೆ ಸಿಲುಕ ಬೇಕಿದ್ದ ಜಿಂಕೆಯೊಂದು ಮನೆಯೊಳಗೆ ನುಗ್ಗಿ ಜೀವ ಉಳಿಸಿಕೊಂಡ ಪ್ರಸಂಗ ತಾಲೂಕಿನ ಕುರುಬರಹುಂಡಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದಂಚಿನ ಜಮೀನಿಗೆ ಮೇವು ಅರಸಿ ಬಂದ ಜಿಂಕೆ ಗ್ರಾಮದ ಬಳಿಗೆ ಬಂದಿದ್ದು, ಜಿಂಕೆ ಕಂಡ ನಾಯಿಗಳು ಓಡಿಸಿಕೊಂಡು ಹಿಡಿಯಲು ಬಂದಿವೆ.
ನಾಯಿಗಳ ಅಟ್ಟಹಾಸ ಕಂಡ ಜಿಂಕೆ ಬುದ್ದಿ ಉಪಯೋಗಿಸಿ ಗ್ರಾಮದ ಪ್ರಭುಸ್ವಾಮಿ ಅವರ ಮನೆಯೊಳಗೆ ನುಗ್ಗಿದೆ ಇದನ್ನು ಕಂಡ ಪ್ರಭುಸ್ವಾಮಿ ಜಿಂಕೆಯನ್ನು ಕೂಡಿ ಹಾಕಿ, ಓಂಕಾರ ವಲಯ ಅರಣ್ಯಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಓಂಕಾರ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್ ಕುಮಾರ್ ಸಿಬ್ಬಂದಿಗಳ ಕಳುಹಿಸಿ ಅರಣ್ಯ ಕಚೇರಿಗೆ ಕರೆತಂದು ಬಳಿಕ ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾಡಿಗೆ ಬಿಟ್ಟಿದ್ದಾರೆ.