ಸಾರಾಂಶ
ಮಹಿಳೆಯರ ಪರ ಹೋರಾಡಿದ ನಂದಿನಿಗೆ ಪ್ರತಿಷ್ಠಿತ ಗೌರವ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಚಿಕ್ಕಬಳ್ಳಾಪುರ ಮೂಲದ ಮಹಿಳೆಯು ದೆಹಲಿಯಲ್ಲಿ ಕನ್ನಡ ಸುಪುತ್ರಿ ಪ್ರಶಸ್ತಿಗೆ ಭಾಜನರಾಗಿ ಜಿಲ್ಲೆಯ ಘನತೆಯನ್ನು ಮತ್ತಷ್ಟು ಉತ್ತುಂಗಕ್ಕೇರಿಸಿದ್ದಾರೆ. ಕೋಲಾರದಲ್ಲಿ ಹುಟ್ಟಿ ಚಿಕ್ಕಬಳ್ಳಾಪುರ ಜಿಲ್ಲೆ ಸೂಲಿಕುಂಟೆ ಗ್ರಾಮಕ್ಕೆ ಸೊಸೆಯಾಗಿ ಬಂದಿರುವ ನಂದಿನಿ ಮಂಜುನಾಥ್, ತನ್ನ ಕೈಲಾದ ಸಹಾಯದ ಮೂಲಕ ಸಮಾಜ ಸೇವೆ ಮಾಡುವುದರ ಜೊತೆ ಮಹಿಳೆಯರ ಪರ ಸಾಕಷ್ಟು ಹೋರಾಟಗಳನ್ನು ನಡೆಸಿದ್ದಾರೆ. ಇದೇ ಕಾರಣಕ್ಕೆ ದೆಹಲಿಯಲ್ಲಿ ಕನ್ನಡ ಸಂಸ್ಕೃತಿ ಸಂಘಟೆನೆಯೊಂದು ಕನ್ನಡದ ಸುಪ್ರುತ್ರಿ ಪ್ರಶಸ್ತಿ ನೀಡಿ ಗೌರವಿಸಿದೆ.ಶಿಕ್ಷಣ,ಆರೋಗ್ಯ ಮತ್ತು ಮಹಿಳಾಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ನಂದಿನಿ, ನ್ಯಾಯ ವಂಚಿತರಿಗೆ ನ್ಯಾಯ ಕೊಡಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದರು. ಒಬ್ಬ ಮಹಿಳೆಯಾಗಿ ಚಿಕ್ಕಂದಿನಿಂದ ತಾನು ಅನುಭವಿಸಿದ ಕಷ್ಟಗಳನ್ನೇ ಮೆಟ್ಟಿಲಾಗಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಶಾಲಾ ಕಟ್ಟಡ, ಮಕ್ಕಳಿಗೆ ಪುಸ್ತಕ ವಿತರಣೆ,ಆನಾರೋಗ್ಯಕ್ಕೊಳಗಾದ ಬಡ ರೋಗಿಗಳಿಗೆ ಚಿಕಿತ್ಸೆ ಕೊಡಿಸುವುದಲ್ಲದೇ, ದೌರ್ಜನ್ಯಕ್ಕೊಳಗಾದ ಮಹಿಳೆಯರ ಪರ ಪೊಲೀಸ್ ಠಾಣೆ, ಕಚೇರಿ ಹೀಗೆ ಮಹಿಳೆಯರ ಪರ, ಅವರ ನ್ಯಾಯಕ್ಕಾಗಿ ಸಾಕಷ್ಟು ಹೋರಾಡಿದ್ದಾರೆ. ಚಿಕ್ಕಬಳ್ಳಾಪುರ ಮೂಲದ ನಂದಿನಿಯ ಸಮಾಜ ಸೇವೆಯನ್ನು ಗುರುತಿಸಿ ದೆಹಲಿಯ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಕನ್ನಡ ಸುಪುತ್ರಿ ಪ್ರಶಸ್ತಿ ನೀಡಿ ಗೌರವಿಸಿದೆ.
ಇದು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಯ ಸಂತಸಕ್ಕೆ ಕಾರಣವಾಗಿದೆ. ಒಬ್ಬ ಮಹಿಳೆ ತನ್ನ ಸಮಾಜ ಸೇವೆಯ ಮೂಲಕ ಇಷ್ಟರ ಮಟ್ಟಿಗೆ ಬೆಳೆದು ದೆಹಲಿಗೆ ಭೇಟಿ ನೀಡಿ ಕನ್ನಡ ಸುಪುತ್ರಿ ಪ್ರಶಸ್ತಿ ಪಡೆದುಕೊಳ್ಳುವುದು ಕೇವಲ ಮಾತಲ್ಲ. ನಂದಿನಿ ತನ್ನ ಪಾಡಿಗೆ ತಾನು ತನ್ನ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದಳು. ಆದರೆ ಸಮಾಜದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕಿರುಕುಳಗಳನ್ನು ನೋಡಿ ಚಿಕ್ಕಂದಿನಿಂದಲೇ ಸಮಾಜಕ್ಕೆ ಏನಾದರೂ ನನ್ನ ಕೊಡುಗೆ ಕೊಟ್ಟು ಮಹಿಳೆಯರ ಪರ ನಿಲ್ಲಬೇಕೆಂಬ ಆಕಾಂಕ್ಷೆ ಇಟ್ಟುಕೊಂಡಿದ್ದಳು. ಅದರಂತೆ ಗಂಡನ ಮನೆಗೆ ಬಂದರೂ ತನ್ನ ಸಮಾಜ ಸೇವೆ ಮುಂದುವರೆಸಲು ಕುಟುಂಬ ಸಹಾಕಾರ ನೀಡಿದೆ. ಈಗ ದೆಹಲಿಯಲ್ಲಿ ಪ್ರಶಸ್ತಿ ಪಡೆದುಕೊಂಡು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾಳೆ.ಸಿಕೆಬಿ-6 ದೆಹಲಿಯ ಕನ್ನಡ ಸುಪುತ್ರಿ ಪ್ರಶಸ್ತಿಯೊಂದಿಗೆ ನಂದಿನಿ