ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕನಿಂದ 72 ತಾಸು ನಿರಂತರ ಗಾಯನ

| Published : Jan 13 2024, 01:33 AM IST

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕನಿಂದ 72 ತಾಸು ನಿರಂತರ ಗಾಯನ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗಂಗಾವತಿಯಲ್ಲಿ ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ಮಾರುತಿ ದೇವೇಂದ್ರಪ್ಪ ಈಳಿಗೇರ ನಿರಂತರ 72 ತಾಸುಗಳ ಕಾಲ ಗಾಯನ ಮಾಡಿ ದಾಖಲೆ ನಿರ್ಮಿಸಿ, ಕೊಪ್ಪಳ ಜಿಲ್ಲೆಯ ಕೀರ್ತಿ ತರುವಲ್ಲಿ ಯಶಸ್ವಿಯಾಗಿ ಪ್ರಶಂಸಾ ಪತ್ರ ಮತ್ತು ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕೊಪ್ಪಳ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗಂಗಾವತಿಯಲ್ಲಿ ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ಮಾರುತಿ ದೇವೇಂದ್ರಪ್ಪ ಈಳಿಗೇರ ನಿರಂತರ 72 ತಾಸುಗಳ ಕಾಲ ಗಾಯನ ಮಾಡಿ ದಾಖಲೆ ನಿರ್ಮಿಸಿ, ಕೊಪ್ಪಳ ಜಿಲ್ಲೆಯ ಕೀರ್ತಿ ತರುವಲ್ಲಿ ಯಶಸ್ವಿಯಾಗಿ ಪ್ರಶಂಸಾ ಪತ್ರ ಮತ್ತು ಪ್ರಶಸ್ತಿ ಪಡೆದುಕೊಂಡಿದ್ದಾರೆ.ಇತ್ತೀಚೆಗೆ ಬೆಂಗಳೂರಿನ ಅಪ್ಪು ಮ್ಯೂಸಿಕ್ ಅಕಾಡೆಮಿಯಿಂದ ಲಲಿತ ಕಲಾ ಆಡಿಟೋರಿಯಂ ಹಾಲ್‌ನಲ್ಲಿ ನಡೆದ ಸಾಧನೆಯ ಕೋಗಿಲೆಗಳು 2023-24ನೇ ಸಾಲಿನ ಕಾರ್ಯಕ್ರಮದಲ್ಲಿ ಮಾರುತಿ ಈಳಿಗೇರ ಪಾಲ್ಗೊಂಡಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ 70 ಕಲಾವಿದರು ನಿರಂತರವಾಗಿ 72 ತಾಸುಗಳ ಕಾಲ ಕನ್ನಡ, ಹಿಂದಿ, ತೆಲುಗು, ಮಲಯಾಳಿ ಭಾಷೆಗಳಲ್ಲಿ ಭಕ್ತಿಗೀತೆ, ಭಾವಗೀತೆ, ಜಾನಪದ, ಚಲನಚಿತ್ರ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಇದರಲ್ಲಿ ಜಿಲ್ಲೆಯಿಂದ ಮಾರುತಿ ಈಳಿಗೇರ ಭಾಗವಹಿಸಿ ಈ ಸಾಧನೆ ಮಾಡಿದ್ದಾರೆ.