ಸಾರಾಂಶ
ಬರಗೂರು ಗ್ರಾಮದ ಮಂಜಮ್ಮ ಶಂಕರಪ್ಪ ಹಾಗೂ ರಾಮಾಂಜಿನಮ್ಮ ಅವರು ತೋಟಗಾರಿಕೆ ಬೆಳೆಯಿಂದ ಜೀವನ ಸಾಗಿಸುತ್ತಿದ್ದು ತಮಗೆ ಸೇರಿದ್ದ ಗ್ರಾಮದ ಸರ್ವೇ ನಂ. 9ರಲ್ಲಿ ಎರಡು ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆದಿದ್ದರು. ಕೆಲ ಕುತಂತ್ರಿಗಳು ಷಡ್ಯಂತರ ರೂಪಿಸಿ 700 ಅಡಿಕೆ ಮರಗಳನ್ನು ಕತ್ತರಿಸಿದ್ದಾರೆ. ಬಡ ರೈತರು ಹಲವು ವರ್ಷಗಳಿಂದ ಅಡಿಕೆ ಬೆಳೆ ಸಂರಕ್ಷಣೆ ಮಾಡಿಕೊಂಡು ಬಂದಿದ್ದರು.
ಪಾವಗಡ: ಚಿಕ್ಕನಾಯಕನಹಳ್ಳಿ ತಾಲೂಕಿನ ಬರಗೂರು ಗ್ರಾಮದ ಮಂಜಮ್ಮ ಹಾಗೂ ರಾಮಾಂಜಿನಮ್ಮ ಅವರಿಗೆ ಸೇರಿದ್ದ ಸುಮಾರು 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಫಸಲಿಗೆ ಬಂದ 700 ಅಡಕೆ ಮರಗಳನ್ನು ಕಿಡಿಗೇಡಿಗಳು ಕಡಿದು ಸಂಪೂರ್ಣ ನಾಶಗೊಳಿಸಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಸಂತ್ರಸ್ಥರ ನೆರವಿಗೆ ಧಾವಿಸಿ ಪರಿಹಾರ ಕಲ್ಪಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪಾವಗಡ ಪೂಜಾರಪ್ಪ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾಧ್ಯಕ್ಷ ಪೂಜಾರಪ್ಪ ಮಾತನಾಡಿ, ಬರಗೂರು ಗ್ರಾಮದ ಮಂಜಮ್ಮ ಶಂಕರಪ್ಪ ಹಾಗೂ ರಾಮಾಂಜಿನಮ್ಮ ಅವರು ತೋಟಗಾರಿಕೆ ಬೆಳೆಯಿಂದ ಜೀವನ ಸಾಗಿಸುತ್ತಿದ್ದು ತಮಗೆ ಸೇರಿದ್ದ ಗ್ರಾಮದ ಸರ್ವೇ ನಂ. 9ರಲ್ಲಿ ಎರಡು ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆದಿದ್ದರು. ಕೆಲ ಕುತಂತ್ರಿಗಳು ಷಡ್ಯಂತರ ರೂಪಿಸಿ 700 ಅಡಿಕೆ ಮರಗಳನ್ನು ಕತ್ತರಿಸಿದ್ದಾರೆ. ಬಡ ರೈತರು ಹಲವು ವರ್ಷಗಳಿಂದ ಅಡಿಕೆ ಬೆಳೆ ಸಂರಕ್ಷಣೆ ಮಾಡಿಕೊಂಡು ಬಂದಿದ್ದರು. ಈಗ ಅವರಿಗೆ ದಿಕ್ಕೇ ತೋಚದಂತಾಗಿದೆ. ಘಟನೆ ಬಗ್ಗೆ ಸೂಕ್ತ ತನಿಖೆಯಾಗಬೇಕು ಅಡಿಕೆ ಮರ ನಾಶಪಡಿಸಿದ ಕುತಂತ್ರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ನಷ್ಟಕ್ಕೀಡಾದ ರೈತರಿಗೆ ತಲಾ 25 ಲಕ್ಷ ರು. ಪರಿಹಾರ ಘೋಷಿಸುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸುವುದಾಗಿ ಅವರು ಹೇಳಿದರು.ಜಿಲ್ಲಾ ಕಾರ್ಯದರ್ಶಿ ರಾಮಾಂಜಿನಪ್ಪ,ತಾಲೂಕು ರೈತ ಸಂಘದ ಅಧ್ಯಕ್ಷ ಶಿವು , ರೈತ ಸಂಘದ ಪದಾಧಿಕಾರಿಗಳಿದ್ದರು.