ಸಾರಾಂಶ
ತಾಲೂಕಿನ ನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಮಾಗಮ ಭಾನುವಾರ ನಡೆಯಿತು.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿಕಿರಣ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ಯಾರ್ಥಿ ವಸಂತ ರಾಯಿಮಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ತಾಲೂಕಿನ ನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಮಾಗಮ ಭಾನುವಾರ ನಡೆಯಿತು.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿಕಿರಣ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ಯಾರ್ಥಿ ವಸಂತ ರಾಯಿಮಾರ್ ಕಾರ್ಯಕ್ರಮ ಉದ್ಘಾಟಿಸಿದರು.ಗುರುವಾಯನಕೆರೆ ವಲಯ ಸಿಆರ್‌ಪಿ ರಾಜೇಶ್, ಹಳೆವಿದ್ಯಾರ್ಥಿ ಸಂಘದ ಧ್ಯೇಯ, ಉದ್ದೇಶಗಳು, ಕಾರ್ಯನಿರ್ವಗಿಸಬೇಕಾದ ಬಗ್ಗೆ ಮಾಹಿತಿ ನೀಡಿದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷೆ ರೀತಾ ಚಂದ್ರಶೇಖರ್ ಉಪಸ್ಥಿತರಿದ್ದರು.ಹಿರಿಯ ವಿದ್ಯಾರ್ಥಿಗಳಾದ ರಾಜೇಶ್ ಪೆಂರ್ಬುಡ, ನಾಸೀರುದ್ದೀನ್ ಜಾರಿಗೆಬೈಲು, ದಿವ್ಯಾ ನಾಳ ಶಾಲಾ ದಿನಗಳ ಮೆಲುಕು ಹಾಕಿದರು.
ಈ ಸಂದರ್ಭ ಮುಂದಿನ ಎರಡು ವರ್ಷಗಳ ಅವಧಿಗೆ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ನೂತನ ಅಧ್ಯಕ್ಷರಾಗಿ ರಾಜೇಶ್ ಪೆಂರ್ಬುಡ ಅವರನ್ನು ಆಯ್ಕೆಮಾಡಲಾಯಿತು.
ಉಪಾಧ್ಯಕ್ಷರಾಗಿ ಅಬ್ದುಲ್ ರಫೀಕ್ ಜಾರಿಗೆಬೈಲು, ಕಾರ್ಯದರ್ಶಿಯಾಗಿ ಗಣೇಶ್ ಬಿ. ನಾಳ, ಜತೆ ಕಾರ್ಯದರ್ಶಿಯಾಗಿ ದಿವ್ಯಾ ನಾಳ, ಕೋಶಾಧಿಕಾರಿಯಾಗಿ ಸಂದೀಪ್ ಗಾಣಿಗ ನಾಳ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರವಿಕಿರಣ್, ಸೋಮಣ್ಣ ಗೌಡ ಕುಬಾಯ, ನಾಸೀರುದ್ದೀನ್ ಜಾರಿಗೆಬೈಲು, ಜಯಚಂದ್ರ ಗಂಪದಕೋಡಿ, ಸಮಿತಾ ನಾಳ, ಶಶಿಕಲಾ ನಾಳ, ಗೌರವ ಸಲಹೆಗಾರರಾಗಿ ವಸಂತ ಮಜಲು, ಸುಧಾಕರ ಮಜಲು, ಅಬ್ದುಲ್ ಲತೀಫ್ ಪರಿಮ, ಕೇಶವ ಪೂಜಾರಿ ನಾಳ, ಅಶೋಕ ಆಚಾರ್ಯ ಗಂಪದಕೋಡಿ, ವಸಂತ ರಾಯಿಮಾರ್ ಅವರನ್ನು ಆಯ್ಕೆ ಮಾಡಲಾಯಿತು.ಹರಿಶ್ಚಂದ್ರ ಗಂಪದಕೋಡಿ, ಶೋಭಾ ಆಚಾರ್ಯ ನಾಳ, ರಾಜೇಂದ್ರ ಮಡಿವಾಳ, ಇದ್ದರು.
ಸಹಶಿಕ್ಷಕಿ ಕವಿತಾ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ರೋನಾಲ್ಡ್ ಪಿಲೀಫ್ ಡಿಮೆಲ್ಲೋ ಪ್ರಾಸ್ತಪಿಸಿ , ವಂದಿಸಿದರು. ಸಹಶಿಕ್ಷಕಿ ದಮಯಂತಿ ನಿರೂಪಿಸಿದರು.