ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಮುಳಬಾಗಿಲು ವಿಧಾನಸಭಾ ಮೀಸಲಾತಿ ಕ್ಷೇತ್ರದಿಂದ ೨೦೧೩ರಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಶಾಸಕರಾಗಿ ಆಯ್ಕೆಯಾಗಿದ್ದ ಈಗಿನ ಕೋಲಾರ ಶಾಸಕ ಕೊತ್ತೂರು ಜಿ.ಮಂಜುನಾಥ್ ಅವರನ್ನುಸರ್ಕಾರ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಬಂಧಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು.ನಗರದ ಬಂಗಾರಪೇಟೆ ಸರ್ಕಲ್‌ನ ಅಂಬೇಡ್ಕರ್ ವೃತ್ತದ ಬಳಿ ಸಂಘಟಿದರಾದ ವಿವಿಧ ಸಂಘಟನೆಗಳ ನೊರಾರು ಮಂದಿ ಕಾರ್ಯಕರ್ತರು ಸಂಘಟನೆಯ ಬಾವುಟ ಹಿಡಿದು ಶಾಸಕ ಕೊತ್ತೂರು ಮಂಜುನಾಥ್ ವಿರುದ್ದ ಘೋಷಣೆಗಳು ಕೊಗುತ್ತಾ ಮೆಕ್ಕೆ ಸರ್ಕಲ್‌ನಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ನಂತರ ಮಿನಿವಿಧಾನ ಸೌಧದ ತಹಸೀಲ್ದರ್ ಕಚೇರಿಯ ಮಂದೆ ಪ್ರತಿಭಟನೆ ನಡೆಸಿದರು.
ಶಾಸಕರ ವಿರುದ್ಧ ಕ್ರಮಕ್ಕೆ ಆಗ್ರಹಕೊತ್ತೂರು ಜಿ.ಮಂಜುನಾಥ್ ಸಲ್ಲಿಸಿರುವ ಜಾತಿ ಪ್ರಮಾಣಪತ್ರ ನಕಲಿ, ಅವರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಬುಡ್ಗ ಜಂಗಮದವರಲ್ಲ ಬೈರಗಿಗಳೆಂದು ದಾಖಲೆಗಳಲ್ಲಿ ಕಂಡು ಬಂದಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ, ಆದ್ದರಿಂದ ಶಾಸಕರ ವಿರುದ್ಧ ಸರ್ಕಾರವು ಕ್ರಮ ಕೈಗೊಳ್ಳಬೇಕು, ಎಂದು ಒತ್ತಾಯಿಸಿ ಒಕ್ಕೂಟವು ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತೆ ಡಾ.ಮೈತ್ರಿ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.
ಮುಖಂಡರಾದ ಹೂವಳ್ಳಿ ಪ್ರಕಾಶ್, ದಲಿತ ನಾರಾಯಣಸ್ವಾಮಿ ಮಾತನಾಡಿ, ಕೊತ್ತೂರು ಮಂಜುನಾಥ್ ಹಿಂದುಳಿದ ಬೈರಾಗಿ ಜನಾಂಗಕ್ಕೆ ಸೇರಿದವರಾಗಿದ್ದು, ಮುಳಬಾಗಿಲು ಮೀಸಲು ಕ್ಷೇತ್ರದಲ್ಲಿ ೨೦೦೮ರಲ್ಲಿ ಪರಿಶಿಷ್ಟ ಜಾತಿಯ ಬುಡ್ಗ ಜಂಗಮ ಜಾತಿಗೆ ಸೇರಿದವರೆಂದು ನಕಲಿ ಪ್ರಮಾಣಪತ್ರ ಪಡೆದು ಚುನಾವಣೆಗೆ ಸ್ವರ್ಧಿಸಿ ಹಣ ಬಲ ತೋಳ್ಬಲದಿಂದ ಶಾಸಕರಾಗಿ ಆಯ್ಕೆಯಾಗಿ ಅಧಿಕಾರವನ್ನು ಅನುಭವಿಸಿದ್ದಾರೆ ಎಂದು ದೂರಿದರು.ಶಾಸಕರ ಮೇಲ್ಮವಿ ತಿರಸ್ಕೃತ
ದಲಿತ ಸಂಘಟನೆಗಳು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಹೋರಾಟ ಮಾಡಿತು, ನ್ಯಾಯಾಲಯದಲ್ಲಿ ಬುಡ್ಗಜಂಗಮ ಜಾತಿ ಎಂದು ಸಾಭೀತುಪಡಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಅವರ ಜಾತಿಪ್ರಮಾಣಪತ್ರ ರದ್ದುಪಡಿಸಲು ತೀರ್ಪು ನೀಡಿತು, ಇದರ ವಿರುದ್ದ ೨೦೧೮ರಲ್ಲಿ ಮಂಜುನಾಥ್ ಮೇಲ್ಮನವಿ ಸಲ್ಲಿಸಿದ್ದರು, ನ್ಯಾಯಾಲಯವು ಜಾತಿ ಪರಿಶೀಲನಾ ಸಮಿತಿಯಿಂದ ವರದಿ ಪಡೆದು ಶಾಸಕರ ಅರ್ಜಿ ತಿರಸ್ಕರಿಸಿದೆ ಎಂದರು. ನಂತರದಲ್ಲಿ ಜಿಲ್ಲಾಧಿಕಾರಿಗಳಿಂದ ಡಿಸಿವಿಸಿ ಸಮಿತಿಯು ೨೦೨೧ರಲ್ಲಿ ನಡೆದ ಪರಿಶೀಲನೆಯಲ್ಲಿ ಸಹ ಶಾಸಕ ಮಂಜುನಾಥ್ ಬುಡ್ಗಜಂಗಮದವರು ವರದಿ ನೀಡಿದ್ದಾರೆ. ಹಾಗಾಗಿ ನ್ಯಾಯಾಲಯವು ೨೦೨೩ರಲ್ಲಿ ಶಾಸಕರ ಮೇಲ್ಮನವಿ ತಿರಸ್ಕರಿಸಿ ಹೈಕೋರ್ಟ್ ನೀಡಿದ ಆದೇಶ ಎತ್ತಿ ಹಿಡಿದಿದೆ. ಅರ್ಜಿದಾರರು ತಮ್ಮ ಮನವಿ ಸಾಭೀತುಪಡಿಸುವಲ್ಲಿ ವಿಫಲರಾಗಿದ್ದು ಯಾವುದೇ ದಾಖಲೆಗಳು ರುಜುವಾತಗದ ಕಾರಣ ಮೇಲ್ಮನವಿ ತಿರಸ್ಕರಿಸಿರುವುದಾಗಿ ಹಾಗೂ ಇವರ ವಿರುದ್ದ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ಅಧಿಕಾರವಿದೆ ಎಂದು ಆದೇಶಿಸಿದೆ. ಕ್ರಮ ಜರುಗಿಸಲು ಸರ್ಕಾರ ಹಿಂದೇಟುಆದರೆ ನ್ಯಾಯಾಲಯದ ಆದೇಶದಲ್ಲಿ ಸರ್ಕಾರ ಕ್ರಮಕೈಗೊಳ್ಳಲು ಅಧಿಕಾರವಿದೆ ಎಂದು ಸ್ಪಷ್ಟ ಆದೇಶ ನೀಡಿದ್ದರೂ ಸಹ ಯಾವೂದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದವರಿಗೆ ದೂರು ನೀಡಿ ಎಫ್.ಐ.ಆರ್. ಮಾಡಿ, ಕ್ರೈಂ ಪ್ರಕರಣವೆಂದು ದಾಖಲಾಗಿ ೭ ವರ್ಷದ ಶಿಕ್ಷೆ ನಿಗದಿಪಡಿಸಲಾಗಿದ್ದರೂ ಸಹ ವಿಚಾರಣೆಗೆ ತಡೆಯಾಜ್ಞೆ ತಂದಿದ್ದಾರೆ. ರಾಜ್ಯ ಹೈಕೋರ್ಟ್ ತಡೆಯಾಜ್ಞೆ ವಜಾಗೊಳಿಸಿ ವಿಚಾರಣೆ ಪೂರ್ಣಗೊಳಿಸಿ ಈಗಾಗಲೇ ನಕಲಿ ಜಾತಿ ಪ್ರಮಾಣ ಪತ್ರವೆಂದು ಸಾಭೀತಾಗಿರುವ ಹಿನ್ನಲೆಯಲ್ಲಿ ಕ್ರಮ ಜರುಗಿಸಲು ಆದೇಶಿಸಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ಮಹಾ ಒಕ್ಕೂಟದ ಜಿಲ್ಲಾ ಮುಖಂಡರಾದ ಅಂಬರೀಶ್, ಅನಂತ ಕೀರ್ತಿ, ಚಿಕ್ಕನಾರಾಯಣಪ್ಪ, ಟಿಪ್ಪು ಸೆಕ್ಕೂಲರ್ ಸೇನೆಯ ಅಧ್ಯಕ್ಷ ಅಸೀಫ್, ಚೇತನ್ ಬಾಬು, ಮಂಜುನಾಥ್, ನಾರಾಯಣಸ್ವಾಮಿ, ವೆಂಕಟೇಶ್, ಹಾರೋಹಳ್ಳಿ ರವಿ ಪ್ರತಿಭಟನೆಯ ನೇತೃತ್ವವಹಿಸಿದ್ದರು.