ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆ(ರಾಮನಗರ)ಯವರೇ ಆದ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ನಿರ್ಮಿಸಿ ಅಜರಾಮರರಾದರು. ಅವರಂತೆ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ಸಮತೋಲನ ಜಲಾಶಯ ನಿರ್ಮಿಸಿದರೆ ಇತಿಹಾಸದ ಪುಟಗಳಲ್ಲಿ ಉಳಿಯುತ್ತಾರೆ. ಇದನ್ನು ಡಿಕೆಶಿ ಸಾಧಿಸುತ್ತಾರೆಂಬ ಅಚಲ ವಿಶ್ವಾಸ ನನಗಿದೆ...

ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಡಿಕೆಶಿ ಮತ್ತು ತಮ್ಮೊಂದಿಗಿನ ಒಡನಾಟವನ್ನು ಕನ್ನಡಪ್ರಭದೊಂದಿಗೆ ಹಂಚಿಕೊಂಡ ಕೆಎಂಎಫ್ ಮಾಜಿ ಅಧ್ಯಕ್ಷ, ಬಮೂಲ್ ನಿರ್ದೇಶಕ ಪಿ.ನಾಗರಾಜ್ ಅವರು, ಡಿ.ಕೆ.ಶಿವಕುಮಾರ್ ಹಠವಾದಿ, ಛಲಗಾರ. ಹಿಡಿದ ಕೆಲಸವನ್ನು ಪೂರ್ಣಗೊಳಿಸದೆ ಬಿಡುವುದಿಲ್ಲ. ಮೇಕೆದಾಟು ಯೋಜನೆಯನ್ನು ಅವರು ಕಾರ್ಯಗತಗೊಳಿಸುತ್ತಾರೆಂಬ ನಂಬಿಕೆಯಿದೆ ಎಂದು ಹೇಳಿದರು.

ಕೆಂಗಲ್ ಹನುಂತಯ್ಯ ವಿಧಾನಸೌಧ ಹಾಗೂ ಎಸ್.ಎಂ.ಕೃಷ್ಣ ವಿಕಾಸಸೌಧ ನಿರ್ಮಿಸಿ ಸಾಕ್ಷಿಗುಡ್ಡೆ ಬಿಟ್ಟು ಹೋದರು. ಅದೇ ರೀತಿ ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ಸಮತೋಲನ ಜಲಾಶಯ ನಿರ್ಮಿಸಿದರೆ ಬೆಂಗಳೂರು ನಗರ ಸೇರಿದಂತೆ ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ಅನುಕೂಲವಾಗುತ್ತದೆ. ಈ ಯೋಜನೆ ಸಾಕಾರಗೊಂಡರೆ ಸೂರ್ಯ ಚಂದ್ರರು ಇರುವವರೆಗೂ ನಾಡಿನ ಜನರು ಡಿಕೆಶಿ ಅವರನ್ನು ನೆನೆಯುತ್ತಾರೆ ಎಂದು ಹೇಳಿದರು.

ಶಿಸ್ತಿನ ಸಿಪಾಯಿಗಳನ್ನು ಸೃಷ್ಟಿಸಿದ ಡಿಕೆಶಿ:

ಯುವಕರ ಆದಿಯಾಗಿ ಹಿರಿಯ ಮುಖಂಡರು ಒಪ್ಪಿಕೊಳ್ಳುವಂತಹ ಗುಣ ಡಿ.ಕೆ.ಶಿವಕುಮಾರ್ ಅವರಲ್ಲಿದೆ. ನನ್ನಂತಹ ಸಾವಿರಾರು ಮುಖಂಡರನ್ನು ರಾಜಕೀಯವಾಗಿ ಗುರುತಿಸಿ ನಾಯಕರನ್ನಾಗಿ ಸೃಷ್ಟಿ ಮಾಡಿದ್ದಾರೆ. ಇದು ಅವರ ಸಂಘಟನಾ ಚತುರತೆಗೆ ಸಾಕ್ಷಿಯಾಗಿದೆ. ಅವರನ್ನು ನಂಬಿಕೊಂಡು ರಾಜಕಾರಣ ಮಾಡಿದವರು ಎಂದೂ ಸೋತ ಉದಾಹರಣೆಯೇ ಇಲ್ಲ. ಎಲ್ಲರಿಗೂ ಡಿಕೆಶಿ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಆ ಸಾಲಿನಲ್ಲಿ ನಾನೂ ಸೇರಿದ್ದೇನೆ. 1985ರಲ್ಲಿ ಸಾತನೂರು ಕ್ಷೇತ್ರದಿಂದ ದೇವೇಗೌಡರ ವಿರುದ್ಧ ಯುವಕರಾಗಿದ್ದ ಡಿ.ಕೆ.ಶಿವಕುಮಾರ್ ಸ್ಪರ್ಧೆ ಮಾಡಿದ್ದರು. ಆಗಲೇ ಪದವಿ ವ್ಯಾಸಂಗ ಮಾಡುತ್ತಿದ್ದ ನನ್ನ ಮೇಲೆ ಡಿಕೆಶಿ ರಾಜಕೀಯ ಪ್ರಭಾವ ಬೀರಿದ್ದರು. ವ್ಯಾಸಂಗ ಮುಗಿದ ಬಳಿಕ ರೈತ ಚಳವಳಿಯಲ್ಲಿ ಗುರುತಿಸಿಕೊಂಡ ನಾನು, 1987ರಲ್ಲಿ ಮಂಡಲ ಪಂಚಾಯತಿ ಚುನಾವಣೆಯಲ್ಲಿ ಗೆದ್ದು, ಎಂಪಿಸಿಎಸ್ ಅಧ್ಯಕ್ಷನಾದೆ. ಅಲ್ಲಿಂದ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕನಾಗಿ ಅಧ್ಯಕ್ಷನಾಗಿಯೂ ಆಯ್ಕೆಯಾಗಿದ್ದೆ.


ಆನಂತರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಸಬಾ ಕ್ಷೇತ್ರದಿಂದ ಗೆಲುವು ಸಾಧಿಸಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷನಾಗಿದ್ದೆ. ಅಲ್ಲದೆ, ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷನಾಗಿಯೂ ಸೇವೆ ಸಲ್ಲಿಸಿದೆ. ಇದರ ಹಿಂದೆಲ್ಲ ಡಿ.ಕೆ.ಶಿವಕುಮಾರ್ ಮಾರ್ಗದರ್ಶನ ಮತ್ತು ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

ಡಿಕೆಶಿ ಅವರು ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿ ಹೊಸ ಬ್ರ್ಯಾಂಡ್ ತಂದುಕೊಟ್ಟರು. ಈ ಮೂಲಕ ಬದಲಾವಣೆಗೆ ಕಾರಣರಾದರು. ಅದೇ ರೀತಿ ರಾಮನಗರದವರೆಗೆ ಮೆಟ್ರೋ ವಿಸ್ತರಣೆ, ಮಾವು ಸಂಸ್ಕರಣಾ ಘಟಕ, ರೇಷ್ಮೆ ಉಪ ಉತ್ಪನ್ನಗಳ ತಯಾರಿಕಾ ಘಟಕ, ಕೈಗಾರಿಕಾ ಪ್ರದೇಶ ಸ್ಥಾಪನೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳ ಮೂಲಕ ಡಿಕೆಶಿಯವರು ಜಿಲ್ಲೆಯ ಚಿತ್ರಣವನ್ನು ಬದಲಾಯಿಸುತ್ತಾರೆಂಬ ವಿಶ್ವಾಸವನ್ನು ಪಿ.ನಾಗರಾಜು ವ್ಯಕ್ತಪಡಿಸಿದರು.

ಬಾಕ್ಸ್ ...

ಡಿಕೆಶಿ-ನಾಗರಾಜರ ಒಡನಾಡ

ಡಿ.ಕೆ.ಶಿವಕುಮಾರ್ ಅವರು ನಂಬಿದರನ್ನು ಎಂದೂ ಕೈ ಬಿಟ್ಟ ಉದಾಹರಣೆ ಇಲ್ಲ. ನಾನು ರಾಜಕೀಯ ವಿಚಾರವಾಗಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದರೆ ಡಿ.ಕೆ.ಶಿವಕುಮಾರ್ ಅವರೇ ನನ್ನನ್ನು ಶಾಸಕರನ್ನಾಗಿ ಮಾಡುತ್ತಿದ್ದರು. ಆದರೆ, ನನ್ನ ಸ್ವಯಂಕೃತ ಅಪರಾಧವೇ ನನ್ನ ರಾಜಕೀಯ ಹಿನ್ನಡೆಗೆ ಕಾರಣವಾಯಿತು ಎಂದು ಪಿ.ನಾಗರಾಜ್ ಅವರು ಡಿ.ಕೆ.ಶಿವಕುಮಾರ್ ಅವರೊಂದಿಗಿನ ಒಡನಾಟ ಹಾಗೂ ರಾಜಕೀಯ ಬೆಳವಣಿಗೆಯನ್ನು ಮೆಲುಕು ಹಾಕಿದರು.

(ಮೇಲಿನ ಬಾಕ್ಸ್‌ಗೆ ನಾಗರಾಜ್‌ರ ಮಗ್‌ಶಾಟ್‌ ಫೋಟೋ ಬಳಸಿ)

2ಕೆಆರ್ ಎಂಎನ್ 2,3,4.ಜೆಪಿಜಿ

(ಎರಡೂ ಫೋಟೋಗಳನ್ನು ಕಡ್ಡಾಯವಾಗಿ ಬಳಸಬೇಕು)

ಫೋಟೋಗಳು.