ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಸಮುದಾಯ ಔಷಧಿ ವಿಭಾಗದಲ್ಲಿ ವೈದ್ಯರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ವಿಶೇಷ ಸಂದರ್ಭ ಕೆ.ಎಂ.ಸಿ.ಯ ಹಿರಿಯ ಕಲಾವಿದರಾದ ಶ್ರೀನಾಥ್ ಮಣಿಪಾಲ್ ಅವರು ವೈದ್ಯರ ದಿನಾಚರಣೆಯ ಮಹತ್ವ ಸಾರುವ ಆಕ್ರಿಲಿಕ್ ವರ್ಣಚಿತ್ರವನ್ನು ಬಿಡಿಸಿ ಪ್ರದರ್ಶಿಸಿದರು. ಈ ಪೇಂಟಿಂಗನ್ನು ಸಮುದಾಯ ಔಷಧಿ ವಿಭಾಗದ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ವಿಭಾಗದ ವೈದ್ಯರು, ಸಿಬ್ಬಂದಿ ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು. ಈ ವರ್ಣಚಿತ್ರವು ವೈದ್ಯರೊಬ್ಬರು ಜಗತ್ತನ್ನು (ಗ್ಲೋಬ್) ಕೈಯಲ್ಲಿ ಹಿಡಿದಿರುವುದನ್ನು ತೋರಿಸುತ್ತದೆ. ಇದು ವೈದ್ಯರು ಇಡೀ ಪ್ರಪಂಚಕ್ಕೆ ಚಿಕಿತ್ಸೆ ನೀಡುತ್ತಿರುವುದನ್ನು ಬಿಂಬಿಸುತ್ತದೆ. ಚಿತ್ರದ ಮೇಲ್ಭಾಗದಲ್ಲಿ ವೈದ್ಯರ ಮೇಲಿನ ದೌರ್ಜನ್ಯವನ್ನು ನಿಲ್ಲಿಸಿ ಎಂಬ ಘೋಷವಾಕ್ಯವನ್ನು ಬರೆಯಲಾಗಿತ್ತು. ಈ ವರ್ಷದ ವಿಷಯವಾದ ಮಾಸ್ಕ್‌ನ ಹಿಂದೆ: ಆರೈಕೆ ಮಾಡುವವರ ಆರೈಕೆ ಎಂಬುದನ್ನು ಉಲ್ಲೇಖಿಸಲಾಗಿತ್ತು. ವೈದ್ಯರು, ಸಿಬ್ಬಂದಿ ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ರೋಗಿಗಳ ಮತ್ತವರು ಸಂಬಂಧಿಕರು ಈ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮಣಿಪಾಲ ಕೆಎಂಸಿಯಲ್ಲಿ ವೈದ್ಯರ ದಿನಾಚರಣೆ
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಸಮುದಾಯ ಔಷಧಿ ವಿಭಾಗದಲ್ಲಿ ವೈದ್ಯರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.