ಉಡುಪಿ: ರಾಷ್ಟ್ರೀಯ ವೈದ್ಯರ ದಿನ, ಲೆಕ್ಕ ಪರಿಶೋಧಕರ ದಿನ, ಪತ್ರಿಕಾ ದಿನಾಚರಣೆ ಹಾಗೂ ಅಂಚೆ ಕಾರ್ಮಿಕರ ದಿನದಂಗವಾಗಿ ಈ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಬುಧವಾರ ಗೌರವಿಸಲಾಯಿತು.

ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಚ್. ಅಶೋಕ್, ಹಿರಿಯ ಲೆಕ್ಕಪರಿಶೋಧಕ ಯು. ಬಿ. ಅಜಿತ್ ಕುಮಾರ್, ಹಿರಿಯ ಪತ್ರಕರ್ತ ಸುಬ್ರಹ್ಮಣ್ಯ ಜಿ. ಕುರ್ಯ ಹಾಗೂ ಅಂಚೆಪೇದೆ ನಾಗರಾಜ್ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಚಂದ್ರಮೋಹನ್ ಚಿಟ್ಪಾಡಿ, ಸತೀಶ್ ಪುತ್ರನ್, ಗಣೇಶ್ ನೆರ್ಗಿ, ಸತೀಶ್ ಕೊಡವೂರು, ಯುವರಾಜ್ ಪುತ್ತೂರು, ಸಂಧ್ಯಾ ತಿಲಕ್ರಾಜ್, ಮಮತಾ ಶೆಟ್ಟಿ, ಭರತ್ ಕುಮಾರ್, ಸಂಜಯ್ ಆಚಾರ್ಯ, ಲಕ್ಷ್ಮೀಶ್ ಶೆಟ್ಟಿ, ಲ್ಯಾನ್ಸಿ ಡಿ’ಸೋಜಾ, ಯಾದವ್ ಆಚಾರ್ಯ, ಅರ್ಚನಾ ದೇವಾಡಿಗ, ಸಚಿನ್ ಮತ್ತಿತರರು ಉಪಸ್ಥಿತರಿದ್ದರು.