ಸಾರಾಂಶ
ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದ್ದು, ಮೇ 9ರಂದು ಸಂಜೆ 6 ಗಂಟೆಯಿಂದ ಋತ್ವಿಜರ ಆಗಮನ, ಸಾಮೂಹಿಕ ಪ್ರಾರ್ಥನೆ, ತೋರಣ ಮಹೂರ್ತ, ಉಗ್ರಾಣ ಮಹೂರ್ತ, ವಾಸ್ತು ರಕ್ಷೋಜ್ಞಾದಿ ಪ್ರಕ್ರಿಯೆಗಳು ನಡೆಯಲಿವೆ.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ಮೇ 9ರಂದು ಸಂಜೆ ಆರಂಭಗೊಂಡು ಮೇ 13ರ ಮಧ್ಯಾಹ್ನ ವರೆಗೆ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೈಭವದಿಂದ ನೆರವೇರಲಿದೆ.ಆ ಪ್ರಯುಕ್ತ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದ್ದು, ಮೇ 9ರಂದು ಸಂಜೆ 6 ಗಂಟೆಯಿಂದ ಋತ್ವಿಜರ ಆಗಮನ, ಸಾಮೂಹಿಕ ಪ್ರಾರ್ಥನೆ, ತೋರಣ ಮಹೂರ್ತ, ಉಗ್ರಾಣ ಮಹೂರ್ತ, ವಾಸ್ತು ರಕ್ಷೋಜ್ಞಾದಿ ಪ್ರಕ್ರಿಯೆಗಳು ನಡೆಯಲಿವೆ.ಮೇ 10ರಂದು ಶ್ರೀ ಕ್ಷೇತ್ರದ ನಾಗಾಲಯದಲ್ಲಿ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಸರ್ವಪ್ರಾಯಶ್ಚಿತ ಆಶ್ಲೇಷ ಬಲಿದಾನ, ವಟು ಆರಾಧನೆ, ಬ್ರಹ್ಮಲಿಂಗೇಶ್ವರನ ಸನ್ನಿಧಾನದಲ್ಲಿ ನವಕಕಲಶ ಪ್ರಧಾನ ಹೋಮ, ಕಲಶ ಅಭಿಷೇಕ, ಸುಬ್ರಮಣ್ಯ ಸ್ವಾಮಿಯ ಸನ್ನಿಧಾನದಲ್ಲಿ ಪವಮಾನ ಸೂಕ್ತ, ಕಲಶಾಭಿಷೇಕ, ಪರಿವಾರ ಪೂಜೆ, ಪ್ರಸನ್ನ ಪೂಜೆ, ಸಂಜೆ 6ರಿಂದ ಕಲಮಂಡಲ ರಚನೆ, ಹೋಮಗಳು ನಡೆಯಲಿವೆ.ಮೇ 11ರಂದು ಶ್ರೀ ದುರ್ಗಾ ಆದಿಶಕ್ತಿ ದೇವಿಯ ಪರಿವಾರ ದೇವರಿಗೆ ಕಲಶಾರಾಧನೆ, ಸ್ನಪನ ಕಲಶ ಅಭಿಷೇಕ, ಪರಿವಾರ ಪೂಜೆ, ಅನ್ನ ಸಂತರ್ಪಣೆ, 12ರಂದು ಬೆಳಗ್ಗೆ 6ರಿಂದ ಸ್ವಸ್ತಿ ಪುಣ್ಯಾಹವಾಚನ, ಪಂಚಾಮೃತ ಅಭಿಷೇಕ, ಬೆಳಗ್ಗೆ 8.20ಕ್ಕೆ ಒದಗುವ ವೃಷಭ ಲಗ್ನ ಸುಮಹೂರ್ತದಲ್ಲಿ ಶ್ರೀಚಕ್ರ ಪೀಠ ಸುರಪೂಜಿತೆಗೆ ಪಂಚವಂಶತೆ ದ್ರವ್ಯಮೀಳಿತ ಅಷ್ಟೋತ್ತರಶತ ಬ್ರಹ್ಮಕುಂಬಾಭಿಷೇಕ, ಪ್ರಸನ್ನ ಪೂಜೆ, ಮಹಾಪೂಜೆ, ಪಲ್ಲ ಪೂಜೆ, ಮಹಾನ್ನಸಂತರ್ಪಣೆ, ಸಂಜೆ 6ರಿಂದ ಆರಾಧನಾ ರಂಗ ಪೂಜಾ ಮಹೋತ್ಸವ, ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ವಸಂತ ಪೂಜೆ, ಅಷ್ಟಾವಧಾನ ಸೇವೆ, ರಾತ್ರಿ ಪೂಜೆ, ಪ್ರಸಾದ ವಿತರಣೆ ನೆರವೇರಲಿದೆ.
13ರಂದು ಬೆಳಗ್ಗೆ 8 ರಿಂದ ಶ್ರೀ ಆರಾಧನೆ, ಮಹಾಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ, ಮಹಾನ್ನ ಸಂತರ್ಪಣೆ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದ್ದಾರೆ.