ಸಾರಾಂಶ
ಮಹಿಳೆಯರ ಅವಹೇಳನ ಮಾಡುವುದು ಸರಿಯಲ್ಲ, ಮಹಿಳೆಯರ ಚಾರಿತ್ರ್ಯ ಹಾಳು ಮಾಡುವುದನ್ನು ಎಷ್ಟು ದಿನ ಮುಂದುವರಿಸುತ್ತಿರೀ, ಮಹಿಳೆ ಸಹಿಸಿಕೊಂಡು ಇರುವವರೆಗೂ ಒಳ್ಳೆಯದು. ಆದರೆ ಅದೇ ನಿಮ್ಮ ಚಾರಿತ್ರ್ಯ ಸಾರ್ವಜನಿಕರ ಮುಂದೆ ಕಳೆದರೆ ನಿಮ್ಮ ಮುಖ ಎಲ್ಲಿ ಇಟ್ಟುಕೊಂಡು ಓಡಾಡುತ್ತೀರಿ,
ಕನ್ನಡಪ್ರಭ ವಾರ್ತೆ ಕೆಜಿಎಫ್
ಗಂಡಸರು ಸುಖಸುಮ್ಮನೆ ಮಹಿಳೆಯರ ಚಾರಿತ್ರ್ಯ ವಧೆ ಮಾಡಬಾರದು ಎಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದರು.ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ನಗರಸಭೆ ಸಭಾಂಗಣದಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಮಯಣದಲ್ಲಿ ಸೀತಾಮಾತೆ ಅನುಭವಿಸಿದ ಕಷ್ಟವನ್ನು ನೆನೆದು ಶಾಸಕಿ ಕಣ್ಣೀರು ಹಾಕಿದರು.ತೇಜೋವಧೆಗೆ ಮುನ್ನ ಯೋಚಿಸಿ
ಮಹಿಳೆಯರ ಅವಹೇಳನ ಮಾಡುವುದು ಸರಿಯಲ್ಲ, ಮಹಿಳೆಯರ ಚಾರಿತ್ರ್ಯ ಹಾಳು ಮಾಡುವುದನ್ನು ಎಷ್ಟು ದಿನ ಮುಂದುವರಿಸುತ್ತಿರೀ, ಮಹಿಳೆ ಸಹಿಸಿಕೊಂಡು ಇರುವವರೆಗೂ ಒಳ್ಳೆಯದು. ಆದರೆ ಅದೇ ನಿಮ್ಮ ಚಾರಿತ್ರ್ಯ ಸಾರ್ವಜನಿಕರ ಮುಂದೆ ಕಳೆದರೆ ನಿಮ್ಮ ಮುಖ ಎಲ್ಲಿ ಇಟ್ಟುಕೊಂಡು ಓಡಾಡುತ್ತೀರಿ, ಹೆಣ್ಣುನ್ನು ತೇಜೋವಧೆ ಮಾಡುವ ಮುನ್ನ ಯೋಚನೆ ಮಾಡಿ ಎಂದು ಶಾಸಕಿ ಭಾವುಕರಾಗಿ ನುಡಿದರು.ಹೆಣ್ಣಿಗೆ ಗಂಡನ ಆಸರೆ ಅವಶ್ಯಹೆಣ್ಣಿಗೆ ಅಪಮಾನ ಮಾಡುವುದು ಅವಹೇಳನ ಮಾಡುವುದು ಸಲ್ಲದು, ಹೆಣ್ಣು ಅಪಮಾನವಾದ ಸಂದರ್ಭದಲ್ಲಿ ಹಿಂತಿರುಗಿ ನೋಡುವುದೇ ಗಂಡಿನ ಆಸರೆಗಾಗಿ ಎಂಬುದನ್ನು ಅರಿಯಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದವರು ಬೇಡಿಕೆಗಳ ಮನವಿ ಸಲ್ಲಿಸಿದರು.
ಸಮುದಾಯದ ಮುಖಂಡರಾದ ಸಂಪತ್‌ಕುಮಾರ, ವೆಂಕಟೇಶ್, ನಾಯಕ್, ನಗರಸಭೆ ಅಧ್ಯಕ್ಷೆ ಇಂಧಿರಾಗಾಂಧಿದಯಶಂಕರ್, ಉಪಾಧ್ಯಕ್ಷ ಜರ್ಮನ್, ತಹಸೀಲ್ದಾರ್ ನಾಗವೇಣಿ, ಪೌರಾಯುಕ್ತ ಪವನಕುಮಾರ,ಪಿಡ್ಲ್ಯೂಡಿ ಎಇಇ ರಾಜಶೇಖರ್, ಇಒ ಮಂಜುನಾಥ್, ಸಮಾಜ ಕಲ್ಯಾಣ ಅಧಿಕಾರಿ ಅಂಜಲಿ, ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮಿನಾರಾಯಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದುಲೈಮುತ್ತು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಇದ್ದರು.