ಸಾರಾಂಶ
ಕೊಪ್ಪ, ವಿಶ್ವನಾಥ್ ಗದ್ದೆಮನೆ ಅವರು ಸರ್ಕಾರಿ ಶಾಲೆಯಲ್ಲಿ ಕಲಿತು ವಕೀಲರಾಗಿ, ಉದ್ಯಮಿಯಾಗಿ ನಿಸ್ವಾರ್ಥ ಮನೋಭಾವದಿಂದ ನಮ್ಮ ಶಾಲೆಗೆ ಈ ಕೊಡುಗೆ ನೀಡಿದ್ದಾರೆ ಎಂದು ಕೆ.ಪಿ.ಎಸ್. ಶಾಲಾಭಿವೃದ್ಧಿ ಸಮಿತಿ ಸದಸ್ಯ ಪ್ರಕಾಶ್ ಸಿ.ಎಚ್.ತಿಳಿಸಿದರು.
ಕನ್ನಡಪ್ರಭ ವಾರ್ತೆ,ಕೊಪ್ಪ
ವಿಶ್ವನಾಥ್ ಗದ್ದೆಮನೆ ಅವರು ಸರ್ಕಾರಿ ಶಾಲೆಯಲ್ಲಿ ಕಲಿತು ವಕೀಲರಾಗಿ, ಉದ್ಯಮಿಯಾಗಿ ನಿಸ್ವಾರ್ಥ ಮನೋಭಾವದಿಂದ ನಮ್ಮ ಶಾಲೆಗೆ ಈ ಕೊಡುಗೆ ನೀಡಿದ್ದಾರೆ ಎಂದು ಕೆ.ಪಿ.ಎಸ್. ಶಾಲಾಭಿವೃದ್ಧಿ ಸಮಿತಿ ಸದಸ್ಯ ಪ್ರಕಾಶ್ ಸಿ.ಎಚ್.ತಿಳಿಸಿದರು.ಸೋಮವಾರ ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸದ್ದ ಕಾರ್ಯಕ್ರಮದಲ್ಲಿ ಇವರ ಬಳಗದ ಸದಸ್ಯರು ಮತ್ತು ಹಿರೇಕೊಡಿಗೆ ಶಾಲೆ ನಿವೃತ್ತ ಶಿಕ್ಷಕರಾದ ವಿದ್ಯಾನಂದ ಮತ್ತು ಜಿನೇಶ್ ಇರ್ವತ್ತೂರು ಶಾಲಾ ಮಕ್ಕಳಿಗೆ ಸಾಂಕೇತಿಕವಾಗಿ ಬ್ಯಾಗ್ ಮತ್ತು ಸಮವಸ್ತ್ರ ವಿತರಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುಮಾರು ೮೫೦ ಕ್ಕೂ ಅಧಿಕ ಶಾಲೆಗಳಿಗೆ ಒಂದೂವರೆ ಕೋಟಿ ವೆಚ್ಚದಲ್ಲಿ ಈ ಕಾರ್ಯ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಇದರ ಸದ್ಭಳಕೆ ಮಾಡಿಕೊಂಡು ಅವರ ಹಾಗೆ ವಿದ್ಯಾವಂತರಾಗಿ ದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.ಗದ್ದೆಮನೆ ವಿಶ್ವನಾಥ್ ಅವರ ಪ್ರತಿನಿಧಿಯಾಗಿ ಭಾಗವಹಿಸಿದ ನಿವೃತ್ತ ಶಿಕ್ಷಕ ವಿದ್ಯಾನಂದ್ ಮಾತನಾಡಿ ವಿದ್ಯಾರ್ಥಿಗಳು ಸಂಸ್ಕಾರ, ಸಂಸ್ಕೃತಿ ಬೆಳೆಸಿಕೊಂಡರೆ ಸಂಪಾದನೆ ಅರಸಿಕೊಂಡು ಬರುತ್ತದೆ. ಇದೇ ವಿಶ್ವನಾಥ್ ಅವರ ಸಾಧನೆಗೆ ಪೂರಕ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ ಸದಸ್ಯರಾದ ಶಿವಾನಂದ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಜೀನತ್, ಸದಸ್ಯರಾದ ಸುಷ್ಮಾ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಾಗರಾಜ್ ಪವಾರ್, ಮುಖ್ಯೋಪಾಧ್ಯಾಯರಾದ ರುದ್ರೇಶ್, ಶಾಲೆ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.