ಚಿಕ್ಕಮಗಳೂರು ಜಿಲ್ಲೆಯ 1230 ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಮಂಗಳವಾರದಿಂದ ಆರಂಭಗೊಳ್ಳಲಿದೆ. ಚಿಕ್ಕಮಗಳೂರು ಜಿಲ್ಲೆಯ 1230 ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ-ಮನೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ.
ರಾಜ್ಯಾದ್ಯಂತ ಮಂಗಳವಾರದಿಂದ ಎಸ್‌ಐಆರ್ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದು, ಚುನಾವಣಾ ಆಯೋಗದಿಂದ ಜೂನ್ 20 ರಿಂದ 29 ವರೆಗೆ ಸಿದ್ಧತೆಗೆ ನೀಡಲಾಗಿದೆ. ಈ ವೇಳೆ ಬೂತ್‌ಮಟ್ಟದ ಅಧಿಕಾರಿಗಳಿಗೆ, ಮೇಲ್ವಿಚಾರಕರಿಗೆ, ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ತರಬೇತಿ ನೀಡಲಾಗಿದೆ. ಜತೆಗೆ, ಪ್ರತಿ ಮತದಾರರಿಗೆ ನೀಡಲಾಗುವ ಎನ್ಯೂಮರೇಶನ್ ಫಾರಂ ಮುದ್ರಣ, ಮುದ್ರಣಗೊಂಡ ಫಾರಂಗಳನ್ನು ಬೂತ್‌ಮಟ್ಟದ ಅಧಿಕಾರಿಗಳಿಗೆ ತಲುಪಿಸುವ ಕೆಲಸ ಮಾಡಲಾಗಿದೆ.ಫಾರಂನೊಂದಿಗೆ ಬೂತ್ ಮಟ್ಟದ ಅಧಿಕಾರಿಗಳಿಗೆ ಕಿಟ್ ವಿತರಣೆ ಮಾಡಲಾಗಿದೆ. ಮಂಗಳವಾರದಿಂದ ಮನೆ ಮನೆಗೆ ಭೇಟಿ ನೀಡಿ ಪ್ರತಿ ಮತದಾರರಿಗೆ ಫಾರಂ ಹಂಚಿಕೆ ಮಾಡಲಿದ್ದಾರೆ.
ಪ್ರತಿ ಮತದಾರರಿಗೆ ಈಗಾಗಲೇ ಅವರ ಹೆಸರಿನೊಂದಿಗೆ ಮುದ್ರಣಗೊಂಡ ಫಾರಂ ವಿತರಣೆ ಮಾಡಬೇಕು. ತಲಾ ಎರಡು ಫಾರಂ ವಿತರಿಸಲಾಗುವುದು ಜು.29ರ ಒಳಗೆ ವಾಪಾಸ್ ಬಿಎಲ್‌ಒಗೆ ನೀಡಬೇಕು. ಮತ್ತೊಂದು ಫಾರಂಗೆ ಬಿಎಲ್‌ಒನಿಂದ ಸಹಿ ಪಡೆದು ಮತದಾರರೇ ಇಟ್ಟುಕೊಳ್ಳಬೇಕಿದೆ.
ಪ್ರತಿ ದಿನ ಹಂಚಿಕೆ ವಿವರ ದಾಖಲು:
ಬೂತ್‌ಮಟ್ಟದ ಅಧಿಕಾರಿಗಳು ಪ್ರತಿ ದಿನ ಮತದಾರರಿಗೆ ವಿತರಣೆ ಮಾಡಿ ಎನ್ಯೂಮರೇಶನ್ ಫಾರಂ ಸಂಖ್ಯೆ ವಿವರನ್ನು ಆ್ಯಪ್ ಮೂಲಕ ದಾಖಲಿಸಬೇಕು. ಮೇಲ್ವಿಚಾರಕರು ಆ ದಾಖಲೆಗಳನ್ನು ಕ್ರೂಢೀಕರಿಸಿ ತಾಲೂಕು ಮಟ್ಟದ ಅಧಿಕಾರಿಗೆ ನೀಡಬೇಕಿದೆ. ತಾಲೂಕು ಮಟ್ಟದ ಅಧಿಕಾರಿಗಳು ಜಿಲ್ಲಾ ಹಂತದ ಅಧಿಕಾರಿಗಳಿಗೆ ನೀಡಲಿದ್ದಾರೆ.---ಬಾಕ್ಸ್---
ಪೂರ್ಣಪ್ರಮಾಣದಲ್ಲಿ ವಿತರಣೆ ಆಗದ ಫಾರಂಸದ್ಯ ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಪ್ರತಿ ಬೂತ್‌ನ ಮೊದಲ 500 ಮತದಾರರ ಎನ್ಯೂಮ ರೇಶನ್ ಫಾರಂ ಮಾತ್ರ ಮುದ್ರಣಗೊಂಡು ಬೂತ್ ಮಟ್ಟದ ಅಧಿಕಾರಿಗಳ ಕೈ ಸೇರಿದೆ. 501 ನಂತರದ ಕ್ರಮ ಸಂಖ್ಯೆ ಇರುವ ಮತದಾರರ ಎನ್ಯೂಮರೇಶನ್ ಫಾರಂ ಇನ್ನೂ ಮುದ್ರಣ ಹಂತದಲ್ಲಿ ಇದೆ. ಮುದ್ರಣ ಕಾರ್ಯ ಪೂರ್ಣಗೊಂಡ ಬಳಿಕ ಬೂತ್ ಮಟ್ಟದ ಅಧಿಕಾರಿಗಳಿಗೆ ತಲುಪಿಸಲಾಗುವುದು ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.
--ಕೋಟ್---ಮನೆ ಮನೆ ಎನ್ಯೂಮರೇಶನ್ ಫಾರಂ ವಿತರಣೆ ಕಾರ್ಯ ಮಂಗಳವಾರದಿಂದ ಆರಂಭವಾಗಲಿದ್ದು ತಾಲೂಕು ಅಧಿಕಾರಿಗಳು ಚಾಲನೆ ನೀಡಲಿದ್ದಾರೆ. ಮುದ್ರಣ ಬಾಕಿ ಇರುವ ಫಾರಂಗಳನ್ನು ತ್ವರಿತವಾಗಿ ಮುದ್ರಣ ಮಾಡಿ ಬೂತ್‌ಮಟ್ಟದ ಅಧಿಕಾರಿಗಳಿಗೆ ಕಳುಹಿಸಲಾಗುವುದು.
- ನಂಜುಂಡೇಗೌಡ ಅಪರ ಜಿಲ್ಲಾಧಿಕಾರಿ ಚಿಕ್ಕಮಗಳೂರು---ಬಾಕ್ಸ---
ಚಿಕ್ಕಮಗಳೂರು ಮತದಾರರು ಮತ್ತು ಮತಗಟ್ಟೆಯ ವಿವರವಿಧಾನಸಭಾ ಕ್ಷೇತ್ರ ಬೂತ್ ಸಂಖ್ಯೆ2026ರ ಮತದಾರರ ಸಂಖ್ಯೆಶೃಂಗೇರಿ2561,67,171 ಮೂಡಿಗೆರೆ231 1,67,299
ಚಿಕ್ಕಮಗಳೂರು2612,26,934ತರೀಕೆರೆ2291,92,087ಕಡೂರು2532,06,740
ಒಟ್ಟು1,2309,60,231