ಮಮತಾ ಮಹಿಳಾ ಸಮಾಜ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ
ತರೀಕೆರೆ: ಎಲ್ಲರೂ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ರಕ್ಷಣೆ ಮಾಡೋಣ ಎಂದು ಮಮತ ಮಹಿಳಾ ಸಮಾಜ ಅಧ್ಯಕ್ಷೆ ಸಹನ ರಾಘವೇಂದ್ರ ಹೇಳಿದ್ದಾರೆ.ಮಮತ ಮಹಿಳಾ ಸಮಾಜದಿಂದ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಿಸರ ದಿನಾಚರಣೆ ನಮಗೆ ಪರಿಸರ ರಕ್ಷಿಸುವ ಮತ್ತು ಮುಂದಿನ ಪೀಳಿಗೆಯವರಿಗೆ ಉತ್ತಮ ಭೂಮಿ ಉಳಿಸುವ ಜವಾಬ್ದಾರಿ ನೆನಪಿಸುತ್ತದೆ ಮರಗಳನ್ನು ಭೂಮಿ ಶ್ವಾಸಕೋಶ ಎಂದು ಕರೆಯುತ್ತಾರೆ. ಮರಗಳನ್ನು ಬೆಳೆಸುವುದರಲ್ಲಿ ಸಾಲುಮರದ ತಿಮ್ಮಕ್ಕ ನಮಗೆ ಮಾದರಿಯಾಗಿದ್ದಾರೆ. ಮರಗಳು ಮಣ್ಣಿನ ಸವಕಳಿ ತಡೆದು ಅಂತರ್ಜಲ ಹೆಚ್ಚಿಸುತ್ತದೆ ಎಂದು ಹೇಳಿದರು.
ಶಿವಮೊಗ್ಗ ಅನ್ನಪೂರ್ಣೇಶ್ವರಿ ನರ್ಸರಿ ದಾಕ್ಷಾಯಿಣಿ ರಂಗಸ್ವಾಮಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ ಪರಿಸರ ದಿನಾಚರಣೆ ಎಂದರೆ ಬರಿ ಗಿಡ ನೆಡುವುದಲ್ಲ ಪೋಷಿಸಿ ರಕ್ಷಿಸಬೇಕು. ನಮ್ಮ ಸುತ್ತಮುತ್ತಲಿನ ಪರಿಸರ ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು ಹಾಗೂ ಪ್ಲಾಸ್ಟಿಕ್ ಬಳಕೆ ನಿರ್ಮೂಲನೆ. ಗಿಡಗಳನ್ನು ಬೆಳೆಸುವಾಗ ಮಣ್ಣು ಮತ್ತು ಗೊಬ್ಬರದ ಪ್ರಮಾಣ ಎಷ್ಟಿರಬೇಕು ಔಷಧಿ ಯಾವಾಗ ಸಿಂಪಡಿಸಬೇಕು ಎಂದು ವಿವರಿಸಿದರು.ಲಕ್ಕಿ ಲೇಡಿ ಆಟದಲ್ಲಿ ವಿಜೇತೆ ರೋಹಿಣಿ ನರಸಿಂಹಮೂರ್ತಿ ಅವರಿಗೆ ಗಿಡ ಬಹುಮಾನ ನೀಡಲಾಯಿತು. ಡಾ. ಅಂಜನಾ ಚಾರ್ಯ ಮತ್ತು ಸುನಿತಾ ಕಿರಣ್ ಪರಿಸರದ ಬಗ್ಗೆ ಕಿರು ನಾಟಕ ಮಾಡಿದರು. ಕಾರ್ಯದರ್ಶಿ ರೇಣು ನವೀನ್, ರಶ್ಮಿ ರಮೇಶ್, ಹೇಮಾ ಉಮೇಶ್, ಜ್ಯೋತಿ ನಾಗರಾಜ್, ಅನಿತಾ ಕಿಶೋರ್, ಲಕ್ಷ್ಮಿ ಮಧುಕರ್, ಉಮಾದೇವಿ ದಯಾನಂದ್, ರೂಪಕೃಷ್ಣಮೂರ್ತಿ, ರೋಹಿಣಿ ನರಸಿಂಹಮೂರ್ತಿ ಅವರು ಪರಿಸರ ಗೀತೆ ಹಾಡಿದರು. ಸಮಾಜದ ಸದಸ್ಯ ನಿಯರಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಪ್ರಬಂಧ ಸ್ಪರ್ಧೆ ನಡೆಯಿತು.29ಕೆಟಿಆರ್.ಕೆ.20ಃ
ತರೀಕೆರೆಯಲ್ಲಿ ಮಮತ ಮಹಿಳಾ ಸಮಾಜದಿಂದ ನಡೆದ ಪರಿಸರ ದಿನಾಚರಣೆಯಲ್ಲಿ ಮಮತ ಮಹಿಳಾ ಸಮಾಜದ ಅಧ್ಯಕ್ಷ ಸಹನ ರಾಘವೇಂದ್ರ, ಶಿವಮೊಗ್ಗ ಅನ್ನಪೂರ್ಣೇಶ್ವರಿ ನರ್ಸರಿ ದಾಕ್ಷಾಯಿಣಿ ರಂಗಸ್ವಾಮಿ ಮತ್ತಿತರರು ಭಾಗವಹಿಸಿದ್ದರು.