ಕನ್ನಡಪ್ರಭ ವಾರ್ತೆ ಬೆಂಗಳೂರು

ಡಾ.ರಾಜ್ ಅವರು ಸಿನಿಮಾದಲ್ಲಿ ನಟಿಸಿದಂತೆಯೇ ಒಳ್ಳೆಯತನ, ಸರಳತೆಯನ್ನು ಜೀವನದಲ್ಲೂ ಅನುಸರಿಸಿದ ಮಹಾನ್ ವ್ಯಕ್ತಿ. ಶಿಸ್ತಿನ ಜೀವನ ಹಾಗೂ ಮೌಲ್ಯಗಳು ಕೋಟ್ಯಂತರ ಜನರಿಗೆ ಇಂದಿಗೂ ಮಾದರಿಯಾಗಿವೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಜಯನಗರ ವಿಧಾನಸಭಾ ಕ್ಷೇತ್ರದ ಚಾಲುಕ್ಯ ಸಾಮ್ರಾಟ್ ಹೋಟೆಲ್ ಎದುರು ಡಾ.ರಾಜ್ ಕುಮಾರ್ ಸಮಿತಿಯಿಂದ ಡಾ.ರಾಜ್ ಕುಮಾರ್ ಉತ್ಸವ–2026 ಹಾಗೂ ಡಾ.ರಾಜ್ ಕಂಚಿನ ಪುತ್ಥಳಿ ಅನಾವರಣ ಮಾಡಿ ಮಾತನಾಡಿದರು.

ಡಾ.ರಾಜ್ ಅಭಿಮಾನಿಗಳ ಪಾಲಿಗೆ ಅವರು ದೇವರ ಸಮಾನರು. ಗೋಕಾಕ್ ಚಳವಳಿಯಲ್ಲಿ ಅವರು ವಹಿಸಿದ ಪಾತ್ರ ಕನ್ನಡ ಭಾಷೆ ಉಳಿವಿಗೆ ಅಮೂಲ್ಯವಾಗಿದೆ ಎಂದು ಹೇಳಿದರು.

ಡಾ.ರಾಜ್ ಕೇವಲ ಹೆಸರಲ್ಲ, ಒಂದು ಶಕ್ತಿ- ನಟ ಶಿವರಾಜ್ ಕುಮಾರ್ ಡಾ.ರಾಜ್ ಕುಮಾರ್ ಎಂಬ ಹೆಸರು ಕೇವಲ ವ್ಯಕ್ತಿಯಲ್ಲ, ಅದು ಒಂದು ಶಕ್ತಿ, ಒಂದು ಸಂಸ್ಕೃತಿ, ಒಂದು ನಂಬಿಕೆ. ಅಪ್ಪಾಜಿ ಅವರು ನಮ್ಮ ಕುಟುಂಬಕ್ಕೆ ಮಾತ್ರ ಸೀಮಿತವಾಗಿರಲಿಲ್ಲ; ಅವರು ಸಂಪೂರ್ಣ ಕರ್ನಾಟಕದವರಾಗಿದ್ದರು ಎಂದರು. ಈ ವೇಳೆ ಗೀತಾ ಶಿವರಾಜ್ ಕುಮಾರ್, ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಸೌಮ್ಯರೆಡ್ಡಿ, ಎನ್. ನಾಗರಾಜು ಇದ್ದರು.