ಕನ್ನಡಪ್ರಭ ವಾರ್ತೆ ಬೈಲಹೊಂಗಲ ಸಮೀಪದ ಸುಕ್ಷೇತ್ರ ಇಂಚಲ ಗ್ರಾಮದ ಶ್ರೀ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳ 86ನೇ ವರ್ಷದ ವರ್ಧಂತಿ ಮಹೋತ್ಸವ, 56ನೇ ವರ್ಷದ ಅಖಿಲ ಭಾರತ ವೇದಾಂತ ಪರಿಷತ್, ಮಹೋತ್ಸವವು ಡಿ.29ರಿಂದ ಜ.2 ರವರೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪೂರ್ಣಾನಂದ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಸಮೀಪದ ಸುಕ್ಷೇತ್ರ ಇಂಚಲ ಗ್ರಾಮದ ಶ್ರೀ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳ 86ನೇ ವರ್ಷದ ವರ್ಧಂತಿ ಮಹೋತ್ಸವ, 56ನೇ ವರ್ಷದ ಅಖಿಲ ಭಾರತ ವೇದಾಂತ ಪರಿಷತ್, ಮಹೋತ್ಸವವು ಡಿ.29ರಿಂದ ಜ.2 ರವರೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪೂರ್ಣಾನಂದ ಸ್ವಾಮೀಜಿ ಹೇಳಿದರು. ಇಂಚಲ ಮಠದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ.29 ರಂದು ಬೆಳಗ್ಗೆ 7 ಗಂಟೆಗೆ ಹಂಪಿ ಹೇಮಕೂಟದ ಶಿವರಾಮದೂತಾಶ್ರಮದ ವಿದ್ಯಾನಂದ ಭಾರತಿ ಸ್ವಾಮೀಜಿ ಅವರಿಂದ ಪ್ರಣವ ದ್ವಜಾರೋಹಣ ನಂತರ ಮಠಾಧೀಶರಿಂದ ಕಳಸ ಸ್ಥಾಪನೆ ನಡೆಯಲಿದೆ. ಪ್ರತಿ ದಿನ ಪ್ರಾತಃಕಾಲದಲ್ಲಿ ಡಾ.ಶಿವಾನಂದ ಭಾರತಿ ಮಹಾಸ್ವಾಮೀಜಿ ಅವರ ಸಾನಿಧ್ಯದಲ್ಲಿ ಕರ್ತೃ ಗದ್ದುಗೆ ರುದ್ರಾರಾಭಿಷೇಕ, ಮಹಾತ್ಮರಿಂದ ಶ್ರೀಮದ್ಭಗವದ್ಗಿತಾ ಪಾರಾಯಣ, ಮುಂಜಾನೆ ಹಾಗೂ ಸಂಜೆ ಸಂಗೀತ ಸೇವೆ, ಮುಂಜಾನೆ 9.30 ರಿಂದ 12.30 ರವರಗೆ ಹಾಗೂ ಸಂಜೆ 6.30 ರಿಂದ 9.30 ರವರೆಗೆ ಮಹಾತ್ಮರಿಂದ ಆಧ್ಯಾತ್ಮ ಪ್ರವಚನ, ಸಂಜೆ ಶ್ರೀಗಳ ತುಲಾಭಾರ, ಮಹಾಪೂಜೆ, ಗಣ್ಯಮಾನ್ಯರ ಸನ್ಮಾನ, ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಜೆ 4ರಿಂದ6ವರೆಗೆ ಮನರಂಜನಾ ಕಾರ್ಯಕ್ರಮ ನಡೆಯಲಿದೆ.ಪ್ರತಿದಿನದ ಪ್ರವಚನ ಕಾರ್ಯಕ್ರಮದಲ್ಲಿ ಬೀದರ ಶಿವಕುಮಾರೇಶ್ವರ ಮಹಾಸ್ವಾಮೀಜಿ, ಹಂಪಿ ವಿದ್ಯಾನಂದ ಭಾರತಿ ಮಹಾಸ್ವಾಮೀಜಿ, ಯಡಳ್ಳಿಯ ಬಸವಾನಂದ ಭಾರತಿ ಮಹಾಸ್ವಾಮೀಜಿ, ಖೂರ್ದಕಂಚನಹಳ್ಳಿ ಸುಬ್ರಮಣ್ಯ ಮಹಾಸ್ವಾಮೀಜಿ, ಹರಳಕಟ್ಟಿ ನಿಜಗುಣ ಮಹಾಸ್ವಾಮೀಜಿ, ನಿಡಸೊಶಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿ, ವಿಜಯಪೂರ ಅಭಿನವ ಸಿದ್ಧಾರೂಢ ಮಹಾಸ್ವಾಮೀಜಿ, ಬೈಲಹೊಂಗಲ ಪ್ರಭುನೀಲಕಂಠ ಮಹಾಸ್ವಾಮೀಜಿ, ಮುರಗೋಡ ನೀಲಕಂಠ ಮಹಾಸ್ವಾಮೀಜಿ, ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಕೊಲ್ಹಾಪೂರ ಕನೇರಿ ಮಠದ ಅದೃಶ್ಯಕಾಡಸಿದ್ದೇಶ್ವರ ಮಹಾಸ್ವಾಮೀಜಿ, ಶೆಗುಣಿಸಿ ಡಾ.ಮಹಾಂತಪ್ರಭು ಮಹಾಸ್ವಾಮೀಜಿ ಹಾಗೂ ನಾಡಿನ, ಹೊರ ರಾಜ್ಯದ ವಿವಿದ ಮಠಾಧೀಶರು, ಮಾತಾಜೀಯವರು ಪಾಲ್ಗೊಂಡು ಪ್ರವಚನ ನೀಡಲಿದ್ದಾರೆ. ಜ.1ರಂದು ರಾತ್ರಿ 9ಕ್ಕೆ ಶ್ರೀಗಳ ತೊಟ್ಟಿಲೋತ್ಸವ, ಸುವರ್ಣ ಸಿಂಹಾಸನಾರೋಹಣ, ಕನಕ ಕಿರೀಟಧಾರಣೆ, ಶ್ರೀಗಳ ಮಹಾಪೂಜೆ, ಮಹಾಮಂಗಲ ನಡೆಯಲಿದೆ. ಜ.2 ರಂದು ಬೆಳಗ್ಗೆ 11ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆಯಲ್ಲಿ, ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಮಹಾಂತೇಶ ದೊಡಗೌಡರ ಉಪಸ್ಥಿತರಿರುವರು. ಮಧ್ಯಾಹ್ನ 2ಕ್ಕೆ ಶ್ರಿಗಳ ಪಲ್ಲಕ್ಕಿ ಉತ್ಸವ, ಸಂಜೆ 4.30ಕ್ಕೆ ಶ್ರೀಗಳ ರಜತ ರಥೋತ್ಸವ, 5ಕ್ಕೆ ಶ್ರೀ ಶಿವಯೋಗೀಶ್ವರರ ಮಹಾ ರಥೋತ್ಸವವು ಲಕ್ಷಾಂತರ ಭಕ್ತರ ಮಧ್ಯೆ ಅದ್ದೂರಿಯಾಗಿ ನಡೆಯಲಿದ್ದು, ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದರು. ಬಾಕ್ಸ್---ಶಾಲೆಯ ನೂತನ ಕಟ್ಟಡ ಉದ್ಘಾಟನೆಸುಕ್ಷೇತ್ರ ಇಂಚಲ ಗ್ರಾಮದ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಶ್ರೀ ಶಿವಯೋಗೀಶ್ವರ ಆಂಗ್ಲಮಾದ್ಯಮ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭ, ಶ್ರೀ ಸರಸ್ವತಿ ಮಾತೆಯ ಅಮೃತ ಶಿಲಾಮೂರ್ತಿಯ ಪ್ರಾಣ ಪ್ರತಿಷ್ಠಾಪನೆ, ವಿವಿಧ ಪ್ರಯೋಗಾಲಯ ಉದ್ಘಾಟನೆ ಜ.1ರಂದು ಡಾ.ಶಿವಾನಂದ ಭಾರತಿ ಮಹಾಸ್ವಾಮೀಜಿ ಸಾನಿಧ್ಯದಲ್ಲಿ, ಬೀದರ ಶಿವಕುಮಾರೇಶ್ವರ ಮಹಾಸ್ವಾಮೀಜಿ, ಶೇಗುಣಶಿ ಡಾ.ಮಹಾಂತಪ್ರಭು ಸಂಸ್ಥೆಯ ಆಡಳಿತಾಧಿಕಾರಿ ಪೂರ್ಣಾನಂದ ಭಾರತಿ ಮಹಾಸ್ವಾಮೀಜಿ ಪಾವನ ಸಾನಿಧ್ಯದಲ್ಲಿ ನಡೆಯಲಿದೆ. ಶಿಕ್ಷಣ, ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಉದ್ಘಾಟಿಲಿದ್ದಾರೆ. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ, ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಸಂಸದರಾದ ಜಗದೀಶ ಶೆಟ್ಟರ, ಪ್ರಿಯಾಂಕಾ ಜಾರಕಿಹೊಳಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಈರಣ್ಣ ಕಡಾಡಿ, ಕೆಎಲ್‌ಇ ಕಾರ್ಯಾಧ್ಯಕ್ಷ ಪ್ರಭಾಕರ ಕೊರೆ ಜಿಲ್ಲೆಯ ಶಾಸಕರು, ವಿ.ಪ ಸದಸ್ಯರು, ಮಾಜಿ ಶಾಸಕರು, ಗಣ್ಯರು ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಎನ್ನೊವಿ ಮೊಬೈಲಿಟಿ ಸೊಲುಷನ್ ಇಂಡಿಯಾ ಪ್ರೈವೇಟ್ ಲಿ., ಬೆಂಗಳೂರು ಧನ ಸಹಾಯದಿಂದ ನಿರ್ಮಿಸಿದ ಕಂಪ್ಯೂಟರ್ ತರಬೇತಿ ಕೇಂದ್ರ ಉದ್ಘಾಟನೆ ಜರುಗಲಿದೆ. ಸಂಸ್ಥೆಯ ಆಡಳಿತ ಸದಸ್ಯರು ಉಪಸ್ಥಿತರಿರುವರು. ₹ 9 ಕೋಟಿ ವೆಚ್ಚದ ಆಂಗ್ಲ ಮಾದ್ಯಮ ಶಾಲೆಯ ನೂತನ ಕಟ್ಟಡವು ಹಳೆಯ ವಿದ್ಯಾರ್ಥಿಗಳ, ಭಕ್ತರ ದೇಣಿಗೆಯಲ್ಲಿ ನಿರ್ಮಿಸಲಾಗಿದೆ. ಈಗಾಗಲೇ 489 ವಿದ್ಯಾರ್ಥಿಗಳು ಪ್ರಾರಂಭದಲ್ಲೆ ಪ್ರವೇಶ ಪಡೆದು ನೈತಿಕ ಮೌಲ್ಯದ ಸಂಸ್ಕಾರಯುತ ಶಿಕ್ಷಣ ಹೊಂದುತ್ತಿರುವದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ವರದಾನವಾಗಿದೆ.
ಅಖಿಲ ಭಾರತ ವೇದಾಂತ ಪರಿಷತ ಕಾರ್ಯಕ್ರಮದಲ್ಲಿ ನಾಡಿನ ವಿವಿದ ಮೂಲೆಗಳಿಂದ, ಮಠಾಧೀಶರು, ಸಾಧು ಸಂತರು ಆಗಮಿಸಲಿದ್ದು, ಸಕಲ ಭಕ್ತಾಧಿಗಳು ಪಾಲ್ಗೊಂಡು ಅವರ ಅಮೃತವಾಣಿ ಆಲಿಸಿ, ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಶ್ರದ್ಧಾ ಭಕ್ತಿಯಿಂದ ಶ್ರಮಿಸಿ. ಗೋಷ್ಠಿಯಲ್ಲಿ ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಉದ್ಯಮಿ ವಿಜಯ ಮೆಟಗುಡ್ಡ, ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ, ಎಸ್.ಎನ್.ಕೊಳ್ಳಿ, ಬಸವರಾಜ ಜನ್ಮಟ್ಟಿ, ಸುನೀಲ ಮರಕುಂಬಿ, ಶಿವಾನಂದ ಬೆಳಗಾವಿ, ಸಂತೋಷ ಕೊಳವಿ ಇತರರು ಇದ್ದರು.