ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಚರಂಡಿ ಸ್ವಚ್ಛವಿಲ್ಲದೇ ಸುಳ್ಳೆಗಳು ಹೆಚ್ಚಾಗಿದ್ದು, ಹಾವು ಚೇಳಿನ ಕಾಟವಿದೆ ಎಂದು ಕನ್ನಡಪ್ರಭ ಪ್ರಕಟಿಸಿದ್ದ ವರದಿಗೆ ಪುರಸಭೆ ಎಚ್ಚೆತ್ತಿದ್ದು, ಚರಂಡಿಯನ್ನು ಸ್ವಚ್ಛಗೊಳಿಸಿದೆ. ಮುಖ್ಯಾಧಿಕಾರಿ ಎಸ್. ಸರವಣ ಅವರು ಜೆಎಸ್ಎಸ್ ಬಡಾವಣೆಯ ಚರಂಡಿಯನ್ನು ಸ್ವಚ್ಛಗೊಳಿಸುಂತೆ ಮುನ್ನಡೆಸಿದ್ದಾರೆ.ಜು.೫ರ ಭಾನುವಾರದ ‘ಕನ್ನಡಪ್ರಭ’ದಲ್ಲಿ ಜೆಎಸ್‌ಎಸ್ ಬಡಾವಣೆಯಲ್ಲಿ ಗಿಡ ಗಂಟಿಗಳ ಬೆಳೆದು ಸೊಳ್ಳೆ ಕಾಟ ಎಂದು ವರದಿ ಪ್ರಕಟಿಸಿ ಪುರಸಭೆ ಗಮನ ಸೆಳೆದಿತ್ತು.ಕನ್ನಡಪ್ರಭದ ವರದಿ ಗಮನಿಸಿದ ಪುರಸಭೆ ಮುಖ್ಯಾಧಿಕಾರಿ ಎಸ್. ಸರವಣ ಭಾನುವಾರ ಬೆಳಗ್ಗೆಯೇ ಜೆಎಸ್‌ಎಸ್ ಬಡಾವಣೆಗೆ ಪುರಸಭೆ ಸಿಬ್ಬಂದಿ ಕಳುಹಿಸಿ ಚರಂಡಿ ಕ್ಲೀನ್ ಮಾಡಿಸುವ ಮೂಲಕ ಸ್ಪಂದಿಸಿದ್ದಾರೆ.ಜೆಎಸ್‌ಎಸ್ ಬಡಾವಣೆಯ ನಿವಾಸಿ ಹೂರದಹಳ್ಳಿ ನಟರಾಜು ಕನ್ನಡಪ್ರಭದೊಂದಿಗೆ ಮಾತನಾಡಿ ಪತ್ರಿಕೆ ವರದಿ ಬಳಿಕ ಚರಂಡಿ ಕ್ಲೀನ್‌ಗೆ ಕಾರಣವಾದ ಕನ್ನಡಪ್ರಭ ಹಾಗೂ ಪತ್ರಿಕೆ ಗಮನಿಸಿ ಭಾನುವಾರ ಬೆಳಗ್ಗೆಯೇ ಚರಂಡಿ ಕ್ಲೀನ್ ಮಾಡಿಸಲು ಮುಂದಾದ ಪುರಸಭೆ ಮುಖ್ಯಾಧಿಕಾರಿಗೆ ಧನ್ಯವಾದ ಹೇಳಿದ್ದಾರೆ.ಕನ್ನಡಪ್ರಭ ವರದಿ ಬಳಿಕ ಜೆಎಸ್ಸೆಸ್ ಬಡಾವಣೆ ಚರಂಡಿ ಫಳಫಳ
ಚರಂಡಿ ಸ್ವಚ್ಛವಿಲ್ಲದೇ ಸುಳ್ಳೆಗಳು ಹೆಚ್ಚಾಗಿದ್ದು, ಹಾವು ಚೇಳಿನ ಕಾಟವಿದೆ ಎಂದು ಕನ್ನಡಪ್ರಭ ಪ್ರಕಟಿಸಿದ್ದ ವರದಿಗೆ ಪುರಸಭೆ ಎಚ್ಚೆತ್ತಿದ್ದು, ಚರಂಡಿಯನ್ನು ಸ್ವಚ್ಛಗೊಳಿಸಿದೆ. ಮುಖ್ಯಾಧಿಕಾರಿ ಎಸ್. ಸರವಣ ಅವರು ಜೆಎಸ್ಎಸ್ ಬಡಾವಣೆಯ ಚರಂಡಿಯನ್ನು ಸ್ವಚ್ಛಗೊಳಿಸುಂತೆ ಮುನ್ನಡೆಸಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.