ಸಾರಾಂಶ
ನಗರಸಭೆಯ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ತಮ್ಮ ವಿವಿಧ ರೀತಿಯ ಕಂದಾಯಗಳನ್ನು ಕಟ್ಟಲು ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ ಇಲ್ಲಿ ಕಂದಾಯ ಕಟ್ಟಿಸಿಕೊಂಡು ಕಂಪ್ಯೂಟರ್ ಚಲನ್ ಕೊಡಲು ಒಬ್ಬ ನೌಕರ ಮಾತ್ರ ಇದ್ದು ಒಂದೇ ಕೌಂಟರ್ ತೆರೆಯಲಾಗಿದೆ.
ತಿಪಟೂರು: ಕಂದಾಯ ಕಟ್ಟಿ ಅಭಿವೃದ್ಧಿಗೆ ಸಹಕರಿಸಿ ಎಂದು ಹೇಳುವ ನಗರಸಭೆಯ ಮುಂದೆಯೇ ನೂರಾರು ಸಾರ್ವಜನಿಕರು ಕಂದಾಯ ಕಟ್ಟಲು ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಕಾಯುವ ಪರಿಸ್ಥಿತಿ ಉಂಟಾಯಿತು.
ನಗರಸಭೆಯ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ತಮ್ಮ ವಿವಿಧ ರೀತಿಯ ಕಂದಾಯಗಳನ್ನು ಕಟ್ಟಲು ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ ಇಲ್ಲಿ ಕಂದಾಯ ಕಟ್ಟಿಸಿಕೊಂಡು ಕಂಪ್ಯೂಟರ್ ಚಲನ್ ಕೊಡಲು ಒಬ್ಬ ನೌಕರ ಮಾತ್ರ ಇದ್ದು ಒಂದೇ ಕೌಂಟರ್ ತೆರೆಯಲಾಗಿದೆ. ಇದರಿಂದ ಸಾರ್ವಜನಿಕರು ಗಂಟೆ ಗಟ್ಟಲೆ ಕಾಯುವಂತಾಗಿದ್ದು, ಒಂದು ಬಾರಿ ಸರ್ವರ್ ಬಂದರೆ ಮತ್ತೊಮ್ಮೆ ಸರ್ವರ್ ಬ್ಯೂಸಿ ಬರುತ್ತಿದೆ. ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿದ್ದರೆ ಒಬ್ಬ ವ್ಯಕ್ತಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಇದರಿಂದ ನಾವು ಕೆಲಸ ಕಾರ್ಯಗಳನ್ನೆಲ್ಲಾ ಬಿಟ್ಟು ಸುಡು ಬಿಸಿಲಿನಲ್ಲಿ ನಿಂತುಕೊಳ್ಳುವಂತಾಗಿದೆ. ನಗರಸಭೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಂದಾಯ ಕಟ್ಟಿ ಎಂದು ಕರಪತ್ರಿಕೆಗಳಲ್ಲಿ ಹಾಗೂ ಕಸ ವಿಲೇವಾರಿ ಮಾಡುವ ವಾಹನಗಳಲ್ಲಿ ಬೈಕ್ ಮೂಲಕ ಪ್ರಚಾರ ಮಾಡುತ್ತಾರೆ. ಆದರೆ ನಾವು ಕಂದಾಯ ಕಟ್ಟಲು ಬಂದರೆ ಬೆಳಗ್ಗೆಯಿಂದ ಸರದಿಯಲ್ಲಿ ನಿಲ್ಲಬೇಕಿದೆ. ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಮನೆಯಲ್ಲಿ ಮಕ್ಕಳು, ವಯಸ್ಸಾದವರನ್ನು ಬಿಟ್ಟು ಬಂದಿರುತ್ತೇವೆ. ಇನ್ನೂ ಕೆಲವರು ಕೂಲಿ ಕೆಲಸಕ್ಕೆ ಹೋಗಬೇಕು. ಆದರೆ ಅಧಿಕಾರಿಗಳ ಬೇಜವಾಬ್ದಾರಿ ಕಾರ್ಯವೈಖರಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಸಾರ್ವಜನಿಕರು ನಗರಸಭೆ ಆಡಳಿತವನ್ನು ಒತ್ತಾಯಿಸಿದ್ದಾರೆ.