ಸಾರಾಂಶ
ಗೌರಿಬಿದನೂರು: ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪ್ರಾಥಮಿಕ ಹಂತದ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಇ.ಎಸ್.ಸತೀಶ್ ಕುಮಾರ್ ತಿಳಿಸಿದರು.
ಗೌರಿಬಿದನೂರು, ಸತೀಶ್ ಕುಮಾರ್, ಲಯನ್ಸ್ ನಿಂದ ಕಲಿಕಾ ಸಾಮಗ್ರಿ ವಿತರಣೆ
ಗೌರಿಬಿದನೂರು: ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪ್ರಾಥಮಿಕ ಹಂತದ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಇ.ಎಸ್.ಸತೀಶ್ ಕುಮಾರ್ ತಿಳಿಸಿದರು.ತಾಲೂಕಿನ ಚಂದನದೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಶನಿವಾರ ಲಯನ್ಸ್ ಸಂಸ್ಥೆಯ ವತಿಯಿಂದ ನೋಟ್ ಬುಕ್ ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಪೋಷಕರು ಹೆಚ್ಚಿನ ಕಾಳಜಿ ವಹಿಸಿದಲ್ಲಿ ಅವರ ಬದುಕು ಉಜ್ವಲವಾಗಿರುತ್ತದೆ. ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ದಾನಿಗಳು ಮತ್ತು ವಿವಿಧ ಸಂಘ- ಸಂಸ್ಥೆಗಳ ಸಹಕಾರ ಪಡೆದು ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿಕೊಡಬೇಕು.ಲಯನ್ಸ್ ಸಂಸ್ಥೆಯು ಸದಾ ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿಸಿ ನೆರವಾಗಲು ಮುಂದಾಗುವುದು ಎಂದು ತಿಳಿಸಿದರು.ಲಯನ್ಸ್ ಸಂಸ್ಥೆಯ ಅಧ್ಯಕ್ಷ ಸಿ.ಎನ್.ನಂಜೇಗೌಡ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಸಮಯವನ್ನು ವ್ಯರ್ಥಗೊಳಿಸದೇ ಆಸಕ್ತಿಯಿಂದ ಕಲಿಕೆಯತ್ತ ಗಮನ ಹರಿಸಬೇಕು. ಇದರಿಂದ ಮುಂದಿನ ದಿನಗಳಲ್ಲಿ ಉಜ್ವಲ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಕಲಿಕಾ ಹಂತದಲ್ಲಿ ವಿದ್ಯಾರ್ಥಿಗಳ ಬದುಕಿಗೆ ಸಂಘ- ಸಂಸ್ಥೆಗಳು ನೆರವಿಗೆ ಸಿಗುತ್ತವೆ. ಲಯನ್ಸ್ ಸಂಸ್ಥೆಯು ದಶಕಗಳಿಂದಲೂ ಇಂತಹ ಕಾರ್ಯಗಳಿಗೆ ಸದಾ ಸಿದ್ಧವಾಗಿರುತ್ತದೆ ಎಂದು ಹೇಳಿದರು.
ಲಯನ್ಸ್ ಸಂಸ್ಥೆಯ ಹಿರಿಯ ಸದಸ್ಯ ಎಂ.ಎಸ್.ಆದಿನಾರಾಯಣಶೆಟ್ಟಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ರಾಮಾಂಜನೇಯಲು, ಖಜಾಂಚಿ ಎ.ಎಸ್.ಜಗನ್ನಾಥ್, ಗ್ರಾಪಂ ಅಧ್ಯಕ್ಷ ಸುರೇಶ್ ಕುಮಾರ್, ಶಾಲೆಯ ಮುಖ್ಯ ಶಿಕ್ಷಕರಾದ ಗೋಪಾಲ್, ಸಹ ಶಿಕ್ಷಕರಾದ ಲಕ್ಷ್ಮೀನರಸಮ್ಮ, ಸುಜಾತಮ್ಮ, ಹನುಮಂತಪ್ಪ, ಎಸ್ ಡಿ ಎಂಸಿ ಅಧ್ಯಕ್ಷೆ ಸಿ.ಎಸ್.ಸವಿತ, ಉಪಾಧ್ಯಕ್ಷೆ ನಯನ, ಮುಖಂಡರಾದ ನರಸಿಂಹಮೂರ್ತಿ, ಚೇತನ್ ಕುಮಾರ್, ನಾರಾಯಣಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.------------