ಸಾರಾಂಶ
ತಾಲೂಕಿನ ನವಲಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀ ಭೋಗಾಪುರೇಶ ದೇವಸ್ಥಾನದಲ್ಲಿ 353ನೇ ರಾಯರ ಆರಾಧನಾ ಮಹೋತ್ಸವ ಭಾಗವಾಗಿ ಬುಧವಾರ ಮಧ್ಯಾರಾದನೆ ನಡೆಯಿತು.
ಕನ್ನಡಪ್ರಭ ವಾರ್ತೆ ಕನಕಗಿರಿ
ತಾಲೂಕಿನ ನವಲಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀ ಭೋಗಾಪುರೇಶ ದೇವಸ್ಥಾನದಲ್ಲಿ 353ನೇ ರಾಯರ ಆರಾಧನಾ ಮಹೋತ್ಸವ ಭಾಗವಾಗಿ ಬುಧವಾರ ಮಧ್ಯಾರಾದನೆ ನಡೆಯಿತು.ಬೆಳಗ್ಗೆ ಪಂಚಾಮೃತ ಅಭಿಷೇಕ, ಫಲ, ಪುಷ್ಪ ಅಲಂಕಾರ, ಅಷ್ಟೋತ್ತರ ಪಾರಾಯಣ, ನೈವೈದ್ಯ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಕನಕಗಿರಿಯ ಶ್ರೀ ರಾಘವೇಂದ್ರ ಭಜನಾ ಸಂಘದವರಿಂದ ದಾಸವಾಣಿ ಹಾಗೂ ರಾಯರ ಭಾವಚಿತ್ರ ಮೆರವಣಿಗೆ ಸಂಭ್ರಮದಿಂದ ನಡೆಯಿತು. ಮೆರವಣಿಗೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ಶೋಭೆ ತಂದರು. ಮಹಾಮಂಗಳಾರತಿ ನಂತರ ಭಕ್ತರು ತೀರ್ಥ, ಪ್ರಸಾದ ಸ್ವೀಕರಿಸಿ ಪುನೀತರಾದರು. ಶ್ರೀಕಾಂತ ಆಚಾರ್ ಪೂಜಾರ ನವಲಿ ಅವರಿಂದ ಹಸ್ತಾಕ್ಷರ ಹೋಮ ನಡೆಯಿತು.
ನಂತರ ಪಂಡಿತ್ ಶ್ರೀಪಾದ ಕುಲಕರ್ಣಿ ಮಾತನಾಡಿ, ಮನುಷ್ಯನ ನೂರಾರು ಸಮಸ್ಯೆಗಳಿಗೆ ಪರಿಹಾರ ರಾಯರು ಆಗಿದ್ದಾರೆ. ರಾಯರ ಸ್ಮರಣೆಯಿಂದ ದೊಡ್ಡ ಪವಾಡಗಳೇ ನಡೆದಿವೆ, ಈಗಲೂ ನಡೆಯುತ್ತಿವೆ. ಮಂತ್ರಾಲಯದಲ್ಲಿ ರಾಯರು ವೃಂದಾವನಸ್ಥರಾಗಿ 353 ವರ್ಷ ಕಳೆದಿದ್ದು, ರಜತ, ಸ್ವರ್ಣ ರಥೋತ್ಸವ, ಗಜ, ಸಿಂಹೋತ್ಸವದ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಕರ್ನಾಟಕ, ಆಂದ್ರ, ತೆಲಂಗಾಣ ಸೇರಿದಂತೆ ಹೊರ ದೇಶದಲ್ಲಿಯೂ ರಾಯರ ಆರಾಧನೆ ನಡೆಯುತ್ತಿದೆ. ಅದಕ್ಕಾಗಿ ರಾಯರನ್ನು ನಂಬಿ ಕೆಟ್ಟವರಿಲ್ಲ ಎಂದು ಹರಿದಾಸರ ಹಾಡಿ ಹೊಗಳಿದ್ದಾರೆಂದು ತಿಳಿಸಿದರು.ಪ್ರಮುಖರಾದ ಶ್ರೀನಿವಾಸ ಆಚಾರ್ ನವಲಿ, ಮಧುಸೂದನ ಕುಲಕರ್ಣಿ, ಸುದರ್ಶನ ನವಲಿ, ಶ್ರೀಪಾದ ನವಲಿ, ಪರಶುರಾಮ ಕುಲಕರ್ಣಿ, ರಘುನಂದನ ಕುಲಕರ್ಣಿ, ರಾಜೇಂದ್ರ ಬೆಂಗಳೂರು, ಭಜನಾ ಕಲಾವಿದರಾದ ಸುರೇಶರೆಡ್ಡಿ ಮಹಲಿನಮನಿ, ಹನುಮಂತರೆಡ್ಡಿ, ಪರಂಧಾಮರೆಡ್ಡಿ, ಭೀಮರೆಡ್ಡಿ, ಅಂಭಾಜೀರಾವ್ ಬೊಂದಾಡೆ, ಸುರೇಶ ಬೊಂದಾಡೆ, ಅಶೋಕ ನಾಯಕ, ರಾಮಣ್ಣ ಗುಂಜಳ್ಳಿ, ನಾಗರೆಡ್ಡಿ, ವಿಜಯಕುಮಾರ ಹೊಸಳ್ಳಿ ಇತರರಿದ್ದರು.
ಸತ್ಯನಾರಾಯಣ ದೇವಸ್ಥಾನದಲ್ಲಿ ರಾಘವೇಂದ್ರಸ್ವಾಮಿಗಳ ರಥೋತ್ಸವ:ಗಂಗಾವತಿಯ ಸತ್ಯನಾರಾಯಣ ಪೇಟೆಯಲ್ಲಿರುವ ಸತ್ಯನಾರಾಯಣ ದೇವಸ್ಥಾನದಲ್ಲಿ ಶ್ರೀರಾಘವೇಂದ್ರಸ್ವಾಮಿಗಳ ಮಧ್ಯಾರಾಧನೆ ನಿಮಿತ್ತ ಶ್ರೀರಾಘವೇಂದ್ರಸ್ವಾಮಿಗಳ ರಥೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.ಬೆಳಗ್ಗೆ ಸತ್ಯ ನಾರಾಯಣಸ್ವಾಮಿ, ರಾಘವೇಂದ್ರಸ್ವಾಮಿಗಳ ವೃಂದಾವನಕ್ಕೆ ನಿರ್ಮಾಲ್ಯ, ಪಂಚಾಮೃತಾಭಿಷೇಕ, ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ನಂತರ ಅಲಂಕಾರ ಪ್ರಸಾದ, ಭಜನೆ, ರಥೋತ್ಸವ ಜರುಗಿತು. ಈ ಕಾರ್ಯಕ್ರಮದಲ್ಲಿ ವಿಜಯಧ್ವಜ ಭಜನಾ ಮಂಡಳಿ, ಸತ್ಯದೇವೇಶ ಭಜನಾ ಮಂಡಳಿ ಹಾಗು ವ್ಯವಸ್ಥಾಪಕರಾಗಿರುವ ವಾದಿರಾಜ ಆಚಾರ ಕಲ್ಮಂಗಿ, ಶ್ರೀಧರ ಆಚಾರಾ, ತಿರುಮಲರಾವ, ನರಸಿಂಹಮೂರ್ತಿ ಅಯೋದ್ಯ, ದರೋಜಿ ರಂಗಣ್ಣ ಶ್ರೇಷ್ಠಿ, ನಾರಾಯಣರಾವ ವೈದ್ಯ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.