ಓದುಗರ ಚಾವಡಿಗೆ ನೂತನ ಪದಾದಿಕಾರಿಗಳ ಆಯ್ಕೆ

| Published : Aug 22 2024, 12:51 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಗರದ ಸಾಹಿತ್ಯಿಕ ಚಟುವಟಿಕೆಗಳಿಗೆ ಮೀಸಲಾದ ಓದುಗರ ಚಾವಡಿಯ ಸರ್ವ ಸಾಧಾರಣ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ವೇಳೆ ಅಧ್ಯಕ್ಷರಾಗಿ ಶರಣು ಸಬರದ, ಗೌರವಾಧ್ಯಕ್ಷರಾಗಿ ಬಿ.ಆರ್.ಬನಸೂಡೆ, ಉಪಾಧ್ಯಕ್ಷರಾಗಿ ಸುಭಾಷ ಯಾದವಾಡ, ಬಸವರಾಜ ಕುಂಬಾರ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಉಮರಾಣಿ, ಕಾರ್ಯದರ್ಶಿ ಡಾ.ಎಂ.ಎಸ್.ಮಾಗಣಗೇರಿ, ಸಹ ಕಾರ್ಯದರ್ಶಿಯಾಗಿ ದ್ರಾಕ್ಷಾಯಣಿ ಬಿರಾದಾರ, ಖಜಾಂಚಿ ಮನು ಪತ್ತಾರ, ಸದಸ್ಯರಾಗಿ ಡಾ.ರಾಜಕುಮಾರ ಜೊಳ್ಳಿ, ಯು.ಎನ್.ಕುಂಟೋಜಿ, ಸುಭಾಷ ಕನ್ನುರ, ಮಯೂರ ತಿಳಗೂಳಕರ, ಸೋಮಶೇಖರ ಕುರ್ಲೆ, ಪ್ರೀತಿ ಪಾಟೀಲ, ಸಂಜಯ ಜಂಬೂರೆ ಅವರನ್ನು ಆಯ್ಕೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಸಾಹಿತ್ಯಿಕ ಚಟುವಟಿಕೆಗಳಿಗೆ ಮೀಸಲಾದ ಓದುಗರ ಚಾವಡಿಯ ಸರ್ವ ಸಾಧಾರಣ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ವೇಳೆ ಅಧ್ಯಕ್ಷರಾಗಿ ಶರಣು ಸಬರದ, ಗೌರವಾಧ್ಯಕ್ಷರಾಗಿ ಬಿ.ಆರ್.ಬನಸೂಡೆ, ಉಪಾಧ್ಯಕ್ಷರಾಗಿ ಸುಭಾಷ ಯಾದವಾಡ, ಬಸವರಾಜ ಕುಂಬಾರ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಉಮರಾಣಿ, ಕಾರ್ಯದರ್ಶಿ ಡಾ.ಎಂ.ಎಸ್.ಮಾಗಣಗೇರಿ, ಸಹ ಕಾರ್ಯದರ್ಶಿಯಾಗಿ ದ್ರಾಕ್ಷಾಯಣಿ ಬಿರಾದಾರ, ಖಜಾಂಚಿ ಮನು ಪತ್ತಾರ, ಸದಸ್ಯರಾಗಿ ಡಾ.ರಾಜಕುಮಾರ ಜೊಳ್ಳಿ, ಯು.ಎನ್.ಕುಂಟೋಜಿ, ಸುಭಾಷ ಕನ್ನುರ, ಮಯೂರ ತಿಳಗೂಳಕರ, ಸೋಮಶೇಖರ ಕುರ್ಲೆ, ಪ್ರೀತಿ ಪಾಟೀಲ, ಸಂಜಯ ಜಂಬೂರೆ ಅವರನ್ನು ಆಯ್ಕೆ ಮಾಡಲಾಯಿತು.

ಈ ವೇಳೆ ನೂತನ ಅಧ್ಯಕ್ಷ ಶರಣು ಸಬರದ ಮಾತನಾಡಿ, ನಾಲ್ಕು ವರ್ಷಗಳಿಂದ ಪ್ರತಿ ಮಾಸಿಕ ಓದುಗರ ಚಾವಡಿಯಿಂದ ಮನೆ ಮನೆಗಳಲ್ಲಿ ಹಿರಿಯ ಸಾಹಿತಿಗಳ ಪುಸ್ತಕ ಪರಿಚಯ ಹಾಗೂ ಉಪನ್ಯಾಸ, ಯುವ ಸಾಹಿತಿಗಳು ಬರೆದ ಪುಸ್ತಕ ಪರಿಚಯಗಳನ್ನು ಎಲ್ಲರ ಮನೆ ಮನಗಳಲ್ಲಿ ಸಾಹಿತ್ಯದ ಕಂಪು ಪಸರಿಸುವ ನಿಟ್ಟಿನಲ್ಲಿ ಮಾಡಲಾಗುತ್ತಿದೆ. ಆದರೆ, ಇತ್ತಿಚಿನ ದಿನಗಳಲ್ಲಿ ಓದುವ ಅಭಿರುಚಿ ಕಡಿಮೆಯಾಗುತ್ತಿದ್ದು, ಆ ನಿಟ್ಟಿನಲ್ಲಿ ಓದುಗರ ಚಾವಡಿ ನಿರಂತರ ಕೆಲಸ ಮಾಡುತ್ತಿದೆ. ಇದು ಕೇವಲ ನಗರಕ್ಕೆ ಸೀಮಿತವಾಗದೇ ಇಡೀ ಜಿಲ್ಲೆಯಲ್ಲಿ ಮನೆ ಮಾತಾಗಿದೆ. ಒಂದು ವರ್ಷದ 12 ಪುಸ್ತಕ ಪರಿಚಯದ ಲೇಖನಗಳನ್ನು ಸಂಪಾದಿಸಿದ ಡಾ.ಎ.ಎಸ್.ಮಾಗಣಗೇರಿ ಚಾವಡಿ ಚಿಂತನೆ ಮತ್ತು ಸಿಂಚನ ಹೆಸರಿನ ಕೃತಿಗಳನ್ನು ಪ್ರಕಟಿಸಿದ್ದಾರೆ. ಇನ್ನು ಹೊಸ ಆಯಾಮ ಯೋಜನೆಗಳನ್ನು ರೂಪಿಸಲು ತಮ್ಮೆಲ್ಲರ ಸಹಕಾರ ಹೀಗೆ ಇರಲೆಂದು ಬಯಸಿದರು. ಈ ಸಂದರ್ಭದಲ್ಲಿ ಆಕಾಶ ಸಬರದ, ರಾಜೇಶ್ವರಿ ಅಂಕಲಗಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.