ಶಿಕ್ಷಣವೇ ಸಮಗ್ರ ಅಭಿವೃದ್ಧಿಗೆ ಮೂಲ ಪ್ರೇರಣೆ: ದೀಪಕ್ ಬೆಳ್ಳೂರು

| Published : Sep 17 2025, 01:07 AM IST

ಶಿಕ್ಷಣವೇ ಸಮಗ್ರ ಅಭಿವೃದ್ಧಿಗೆ ಮೂಲ ಪ್ರೇರಣೆ: ದೀಪಕ್ ಬೆಳ್ಳೂರು
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣವೇ ಸಮಗ್ರ ಅಭಿವೃದ್ಧಿಗೆ ಮೂಲ ಪ್ರೇರಣೆಯಾಗಿದೆ.

ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ

ಶಿಕ್ಷಣವೇ ಸಮಗ್ರ ಅಭಿವೃದ್ಧಿಗೆ ಮೂಲ ಪ್ರೇರಣೆಯಾಗಿದೆ ಎಂದು ಎಸ್ಎಲ್ಆರ್ ಮೆಟಾಲಿಕ್ಸ್ ಲಿ. ಹಿರಿಯ ಅಧಿಕಾರಿ ದೀಪಕ್ ಬೆಳ್ಳೂರು ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗ್ರಂಥಾಲಯಕ್ಕೆ ಎಸ್‌ಎಲ್‌ಆರ್‌ ಮೆಟಾಲಿಕ್ಸ್‌ ನ ಸಿಎಸ್‌ಆರ್‌ ಯೋಜನೆಯಡಿಯಲ್ಲಿ ಪಠ್ಯ ಪುಸ್ತಕಗಳ ಕೊಡೆಗೆ ನೀಡುವ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಸ್.ಎಲ್.ಆರ್. ಮೆಟಾಲಿಕ್ಸ್ ಲಿಮಿಟೆಡ್ ಸಂಸ್ಥೆ ತನ್ನ ಸಮಾಜಮುಖಿ ಹೊಣೆಗಾರಿಕೆ ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿ ಮಿತ್ರ ಯೋಜನೆ ಅಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುಮಾರು ₹2.21 ಲಕ್ಷ ವೆಚ್ಚದ ಪಠ್ಯಪುಸ್ತಕಗಳನ್ನು ಕಾಲೇಜಿಗೆ ಹಸ್ತಾಂತರಿಸಲಾಗಿದೆ. ನಮ್ಮ ಕಂಪನಿಯು ಸದಾ ಸಮಾಜಮುಖಿ ಚಟುವಟಿಕೆಗಳಿಗೆ ಬದ್ಧವಾಗಿದೆ. ವಿದ್ಯಾರ್ಥಿ ಮಿತ್ರ ಯೋಜನೆಯ ಮೂಲಕ ಗ್ರಾಮೀಣ ವಿದ್ಯಾರ್ಥಿಗಳ ಕನಸುಗಳನ್ನು ನನಸಾಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಪಿ.ಸಿ. ರೂಪ ಮಾತನಾಡಿ, ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ ನೀಡಿದ್ದು ಮಾತ್ರ ತುಂಬಾ ಶ್ಲಾಘನೀಯ. ಕಂಪನಿಯು ಈಗಾಗಲೇ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಬಟ್ಟೆ, ಪುಸ್ತಕ, ಕಾಲೇಜು ಆವರಣದಲ್ಲಿ 2000ಕ್ಕೂ ಹೆಚ್ಚು ಗಿಡ ನೆಡುವುದು, ಎನ್.ಎಸ್.ಎಸ್. ಶಿಬಿರ ನಡೆಸಲು ಬೆಂಬಲ ಕಾಲೇಜಿನ ಅಭಿವೃದ್ಧಿಗೆ ತುಂಬಾ ಸಹಾಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕಂಪನಿಯ ಅಧಿಕಾರಿಗಳಾದ ಸಂಜೀವ ಪತ್ತಾರ ಮಾತಾನಾಡಿದರು. ಪಟ್ಟಣದ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ರಾಮಕೃಷ್ಣ ನಾಯ್ಕ್, ಕಂಪನಿ ಸಿಎಸ್ಆರ್ ವಿಭಾಗದ ಮಲ್ಲಿಕಾರ್ಜುನ, ಮಾರುತಿ ಘೋಷಿ, ಕಾಲೇಜಿನ ಪ್ರಾಧ್ಯಾಪಕ ಡಾ. ದೊಡ್ಡಮನಿ ಲೋಕರಾಜ್, ಸ್ಯೆಯದ್ ಉಸ್ಮಾನ್, ವಿಜಯ್ ಕುಮಾರ್, ಡಾ. ಎರಿಸ್ವಾಮಿ ಮತ್ತು ಕಾಲೇಜು ಆಡಳಿತ ಮಂಡಳಿ ಹಾಗೂ ಕಂಪನಿ ಸಿಬ್ಬಂದಿ ಸಭೆಯಲ್ಲಿ ಉಪಸ್ಥಿತರಿದ್ದರು.