ಸಂವಿಧಾನ ಹಕ್ಕು ಪಡೆಯಲು ಶಿಕ್ಷಣವೇ ಆಯುಧ

| Published : May 11 2025, 11:50 PM IST

ಸಂವಿಧಾನ ಹಕ್ಕು ಪಡೆಯಲು ಶಿಕ್ಷಣವೇ ಆಯುಧ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಸಮಾಜದಲ್ಲಿ ಸಾಮಾಜಿಕ ಅಸ್ಪೃಶ್ಯತೆಗಿಂತಲೂ ಧಾರ್ಮಿಕ ಅಸ್ಪೃಶ್ಯತೆ ಅತ್ಯಂತ ಅಪಾಯಕಾರಿ. ಆ ಪಿಡುಗಿನಿಂದ ಹೊರ ಬಂದಾಗ ಸಂವಿಧಾನ ನಿಜವಾಗಿ ಜಾರಿಯಾದ ದಿನವೆಂದು ಒಪ್ಪಿದಂತಾಗುತ್ತದೆ ಎಂದು ಮಳವಳ್ಳಿ ಕ್ಷೇತ್ರ ಶಾಸಕ ನರೇಂದ್ರಸ್ವಾಮಿ ಹೇಳಿದರು.

ರಾಮನಗರ: ಸಮಾಜದಲ್ಲಿ ಸಾಮಾಜಿಕ ಅಸ್ಪೃಶ್ಯತೆಗಿಂತಲೂ ಧಾರ್ಮಿಕ ಅಸ್ಪೃಶ್ಯತೆ ಅತ್ಯಂತ ಅಪಾಯಕಾರಿ. ಆ ಪಿಡುಗಿನಿಂದ ಹೊರ ಬಂದಾಗ ಸಂವಿಧಾನ ನಿಜವಾಗಿ ಜಾರಿಯಾದ ದಿನವೆಂದು ಒಪ್ಪಿದಂತಾಗುತ್ತದೆ ಎಂದು ಮಳವಳ್ಳಿ ಕ್ಷೇತ್ರ ಶಾಸಕ ನರೇಂದ್ರಸ್ವಾಮಿ ಹೇಳಿದರು.

ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಗರಸಭೆ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಧಾರ್ಮಿಕ ಅಸ್ಪೃಶ್ಯತೆ ಮುಂಚೂಣಿಯಲ್ಲಿದೆ. ಯಾವುದೇ ಸರ್ಕಾರ ಬರಲಿ, ಸಂವಿಧಾನ ಎಷ್ಟೇ ಬಲಿಷ್ಠವಾಗಿರಲಿ ಅಲ್ಲಿ ಧಾರ್ಮಿಕ ಅಸ್ಪೃಶ್ಯತೆ ಕಾಣುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಕಾಲಿನ ಸಂದರ್ಭದಲ್ಲಿ ಬುದ್ಧ ಮತ್ತು ಭೀಮ ಅತ್ಯಂತ ಪ್ರಸ್ತುತವಾಗಿದೆ. ಏಕೆಂದರೆ ಸಂವಿಧಾನ ಜಾರಿಯಲ್ಲಿದ್ದರೂ ಧರ್ಮ ಮತ್ತು ಜಾತಿ ಹೆಸರಿನಲ್ಲಿ ಪ್ರಚೋದನಾತ್ಮಕವಾಗಿ ವಿಂಗಡಿಸಿ ಅದರ ಆಧಾರದ ಮೇಲೆ ಶೋಷಣೆ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಅರಿತು ಹೋರಾಟದ ಮೂಲಕ ಸಂವಿಧಾನದಲ್ಲಿರುವ ಹಕ್ಕುಗಳನ್ನು ಪಡೆದಾಗ ಮಾತ್ರ ಶೋಷಣೆ ತಪ್ಪಿಸಲು ಸಾಧ್ಯವಾಗಲಿದೆ ಎಂದರು.

ಸಂವಿಧಾನದ ಹಕ್ಕುಗಳನ್ನು ಪಡೆಯಲು ಅಂಬೇಡ್ಕರ್ ಹೇಳಿದಂತೆ ಶಿಕ್ಷಣ ಒಂದೇ ಆಯುಧ. ಕಾಯಕ ಸಮಾಜಗಳು ಶೋಷಣೆಗೆ ಒಳಗಾಗಿವೆ. ನಿಮ್ಮೆಲ್ಲರ ಬದುಕು ಬದಲಾವಣೆ ಆಗಬೇಕಾದರೆ ಸಮಾನತೆ ಪ್ರತಿಪಾದಿಸಲು ಶಿಕ್ಷಣ ಎಂಬ ಆಯುಧ ಪಡೆದುಕೊಳ್ಳಬೇಕು. ಅಂಬೇಡ್ಕರ್ ಸಂವಿಧಾನದಲ್ಲಿ ಮತದಾನದ ಹಕ್ಕು ನೀಡಿದ್ದಾರೆ. ಆದರೆ, ನಾವೆಲ್ಲರು ಮತದ ಮೌಲ್ಯ ಹಾಗೂ ಮತದ ಮೂಲಕ ಸಂವಿಧಾನ ರಕ್ಷಣೆ ಮಾಡಬೇಕಾದ ಜವಾಬ್ದಾರಿಯನ್ನು ಇನ್ನೂ ಕಲಿತಿಲ್ಲ ಎಂದು ಹೇಳಿದರು.

ಭಾರತದ ಮೂಲ ನಿವಾಸಿಗಳಾದ ಹೊಲೆಯ ಮಾದಿಗರು ರಾಷ್ಟ್ರದ ಪ್ರಜ್ಞಾವಂತರು. ಈ ವರ್ಗದ ಜನರನ್ನು ಒಡೆದಾಳುವ ನೀತಿಯನ್ನು ದಿಲ್ಲಿಯಿಂದ ಹಳ್ಳಿವರೆಗೂ ನಡೆದಿದೆ. ಯಾವುದೇ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುವಾಗ ಜಾತಿ ಆಧಾರಿತ ಮತಗಳ ಕೇಂದ್ರಿಕೃತ ಮಾಡುತ್ತಿರುವುದರಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಅವಮಾನವಾಗುತ್ತಿದೆ ಎಂದು ನರೇಂದ್ರ ಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಕೋಟ್ ............

ಅಂಬೇಡ್ಕರ್ ದೇಶದ ಅಭಿವೃದ್ದಿಗೆ ಆರ್ಥಿಕ ಮೂಲಗಳು, ಎಲ್ಲ ವರ್ಗದ ಜನರಿಗೆ ಪ್ರಾತಿನಿತ್ಯ, ಮಹಿಳೆ ಯರಿಗೆ ವೋಟಿನ ಹಕ್ಕನ್ನು ಕೊಟ್ಟು, ಸಮಾನ ವೇತನಕ್ಕೆ ಪ್ರತಿಪಾದಿಸಿದವರು. ತಾಯ್ತನದ ಮನಸ್ಸಿದ್ದ ಅವರು ಸಂವಿಧಾನ ಕೊಟ್ಟಲ್ಲದೆ, ಆರ್ಥಿಕ ತಜ್ಞರಾಗಿದ್ದರು. ವಕೀಲ ವೃತ್ತಿ ಮಾಡುತ್ತಿದ್ದ ಅಂಬೇಡ್ಕರ್ ಅವರ ವಿಚಾರಗಳನ್ನು ಅಮರ್ಥಸೇನ್ ಸಹ ಅಧ್ಯಯನ ಮಾಡಿದ್ದರು ಎಂದರೆ ಅವರ ವಿದ್ವತ್ ಎಷ್ಟಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ.

-ಸಿ.ಎಸ್.ದ್ವಾರಕನಾಥ್ , ಮಾಜಿ ಅಧ್ಯಕ್ಷರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ

-----------------ಕೋಟ್ .................

ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ವಿಶ್ಕಕ್ಕೆ ಮಾದರಿಯಾಗಿದೆ. ಅಂತಹ ಮಹಾ ಪುರುಷರ ಸ್ಮರಿಸುವ ಕೆಲಸವನ್ನು ಕೆ.ಶೇಷಾದ್ರಿ ನಗರಸಭೆ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮ ಬಹಳ ಅರ್ಥ ಪೂರ್ಣವಾಗಿದೆ. ವಿದ್ಯಾರ್ಥಿಗಳಿಗೆ ಪುರಸ್ಕಾರ, ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ತಳ ಸಮುದಾಯ ದವರಿಗೆ ವೃತ್ತಿ ಪರಿಕರಗಳನ್ನು ವಿತರಣೆ ಮಾಡುವ ಕೆಲಸ ಮಾಡಿರುವುದು ಶ್ಲಾಘನೀಯ.

- ಸಿ.ಎಂ.ಲಿಂಗಪ್ಪ, ಮಾಜಿ ಶಾಸಕರು

-----------------------

ಕೋಟ್ ................

ನಗರಸಭೆ ಮಟ್ಟದಲ್ಲಿ ಇಷ್ಟೊಂದು ಅದ್ಧೂರಿ ಕಾರ್ಯಕ್ರಮ‌ ಸಾಕಾರ ಮಾಡಿದ ಕೆ.ಶೇಷಾದ್ರಿ ಮತ್ತು ಅವರ ತಂಡದ ಕಾರ್ಯ ಶ್ಲಾಘನೀಯ. ಅಂಬೇಡ್ಕರ್ ಕೇವಲ ದಲಿತರಿಗೆ ಸೀಮಿತವಲ್ಲ. ಎಲ್ಲ ವರ್ಗದ ಶೋಷಿತ ಸಮಾಜದವರ ಧ್ವನಿಯಾಗಿದ್ದರು. ಇಚ್ಚಾಶಕ್ತಿಯಿರುವ ಪ್ರತಿನಿಧಿಗಳಿಗೆ ಅಧಿಕಾರ ಇದ್ದಾಗ ಅಭಿವೃದ್ಧಿ ಕಾರ್ಯ ಮಾಡಬಹುದು ಎಂಬುದನ್ನು ರಾಮನಗರದಲ್ಲಿ ಕೆ.ಶೇಷಾದ್ರಿ ಮಾಡಿ ತೋರಿಸಿದ್ದಾರೆ.

- ಎಚ್.ಎಂ.ರೇವಣ್ಣ, ರಾಜ್ಯಾಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ

11ಕೆಆರ್ ಎಂಎನ್ 9.ಜೆಪಿಜಿ

ರಾಮನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಸಂವಿಧಾನ ಪೀಠಿಕೆಯ ಪ್ರತಿ ನೀಡಿದರು.